ಪರ್ಪಲೆಗಿರಿಗೆ ಸಾಗಿಬರಲಿದೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹಗಳು

Picture of RB NEWS

RB NEWS

Bureau Report

ಕಾರ್ಕಳ : ಮೇ 17ರಂದು ಶನಿವಾರ ನಡೆಯುವ ಕಾರ್ಕಳ ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹಗಳು ಕೂಡಾ ಸಾಗಲಿದ್ದು ಕಾರ್ಕಳದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಪರ್ಪಲೆ ಗಿರಿಯತ್ತ ಕೊಂಡೊಯ್ಯಲಾಗುವುದು ಎಂದು ಸಮಿತಿ ತಿಳಿಸಿದೆ.

ಸುಮಾರು 2 ಅಡಿ ಎತ್ತರದ ಪಂಚ ಲೋಹದ ಮೂರ್ತಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಮೇ 17 ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಸಿರು ಹೊರೆ ತುಂಬಿದ ವಾಹನಗಳು ಪ್ರತಿ ಗ್ರಾಮದಿಂದ ಭಾಗವಹಿಸಲಿವೆ.

ಬೃಹತ್ ವಾಹನ ಜಾಥಾ ದೊಂದಿಗೆ ಈ ಮೆರವಣಿಗೆ ಸಾಗಲಿರುವುದರಿಂದ ಬೈಕು, ರಿಕ್ಷಾ, ಕಾರುಗಳೊಂದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಜಾಥಾದಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿ ಕೋರಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top