ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ : ಜೀಪು ಚಾಲಕರ ಬಂಧನ

Picture of RB NEWS

RB NEWS

Bureau Report

ಸುಬ್ರಹ್ಮಣ್ಯ(ಮಂಗಳೂರು): ಪ್ರಸಿದ್ದ ಪ್ರವಾಸಿ ತಾಣ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಜೀಪು ಚಾಲಕರ
ಬೈಕರ್ಸ್‌ ಮೇಲೆ ಸ್ಥಳೀಯ ಜೀಪು ಚಾಲಕರು ಹಲ್ಲೆ ಮಾಡಿದ್ದರು. ಇದೀಗ ನಾಲ್ವರು ಜೀಪು ಚಾಲಕರ ಬಂಧನವಾಗಿದೆ.

ಪಟ್ಲದಲ್ಲಿ ನಡೆಯುತ್ತಿದೆ ದಂಧೆ: ಸುಮಾರು 5 ವರ್ಷಗಳಿಂದ ಈಚೆಗೆ ಭಾರಿ ಪ್ರಸಿದ್ದ ಪಡೆದ ಈ ಬೆಟ್ಟದಲ್ಲಿ ಈಗೀಗ ಬಾರಿ ದೊಡ್ಡ ದಂಧೆಯೇ ಆಗುತ್ತಿದೆ.ಅಲ್ಲಿ ಬಿಳಿ ಬೋರ್ಡ್ ನ ಖಾಸಗಿ ಪಿಕಪ್ ಗಳನ್ನು ಹೊಂದಿರುವ ವಾಹನ ಮಾಲಿಕರು ಬೆಟ್ಟಕ್ಕೆ ಖಾಸಗಿ ವಾಹನಗಳ ಮೂಲಕ ಸಂಚರಿಸಲು ಅವಕಾಶ ನೀಡುತ್ತಿಲ್ಲ. ತಮ್ಮ ಖಾಸಗಿ ಬಿಳಿ ನಂಬ‌ರ್ ಪ್ಲೇಟ್ ಹೊಂದಿರುವ ಪಿಕಪ್ ನಲ್ಲೇ ಬಾಡಿಗೆ ನಡೆಸಿ ಮತ್ತು ಅಪಾಯಕಾರಿ ರೀತಿ ಜನರನ್ನು ತುಂಬಿಸಿ ಕಾನೂನು ಉಲ್ಲಂಘಿಸಿದರೂ ಸಂಬಂಧಪಟ್ಟ ಇಲಾಖೆ ಮೌನವಾಗಿರುವುದೇ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.ಗೂಡ್ಸ್ ವಾಹನದಲ್ಲಿ ಪ್ರವಾಸಿಗರನ್ನು ಸಾಗಿಸಿ ಏನಾದರು ಅವಘಡ ಸಂಭವಿಸಿದರೆ ಇನ್ಸೂರೆನ್ಸ್ ಕ್ರೈಮ್ ಆಗುವುದಿಲ್ಲ. ಇಷ್ಟು ಅನಾಹುತವಾತದರೂ ಹಾಸನ ಪೊಲೀಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆ ಮೌನವಹಿಸಿರುವುದೇ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top