ನಿಟ್ಟೆ: ಶೌಚಾಲಯ ಗೋಡೆಯಲ್ಲಿ ಆಕ್ಷೇಪಾರ್ಹ ಬರಹ!
ಕಾರ್ಕಳ : ಆಪರೇಷನ್ ಸಿಂಧೂರದ ಮೂಲಕ ಭಾರತದ ಸೇನೆ ಪಾಕಿಸ್ತಾನ ದ ಮೇಲೆ ಮುಗಿ ಬಿದ್ದಿದೆ. ದೇಶದೆಲ್ಲೆಡೆಯ ದೇಶ ಭಕ್ತರು ಭಯೋತ್ಪಾದನೆ ನಿಗ್ರಹ ಆಗಲೇ ಬೇಕು ಪಾಕಿಸ್ತಾನಕ್ಕೆ ಬುದ್ದಿ ಕಲಿಸಲೇ ಬೇಕು ಎಂಬ ಕೆಚ್ಚೆದೆಯ ನಿರ್ಧಾರದಲ್ಲಿದ್ದಾರೆ.
ಆದರೆ ಕಾರ್ಕಳದ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನ ಶೌಚಾಲಯದಲ್ಲಿ ಹಿಂದೂಗಳನ್ನು ಕೆಣಕುವ ರೀತಿಯಲ್ಲಿ ಪ್ರಚೋದನಕಾರಿ ಬರಹಗಳನ್ನು ಬರೆದಿರುವ ಘಟನೆ ವರದಿ ಆಗಿದೆ.
ಈ ಘಟನೆ ಮಹಿಳಾ ಹಾಸ್ಟೆಲ್ ನಲ್ಲಿ ನಡೆದಿದ್ದು ನಿನ್ನೆ ಈ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ಯುದ್ಧದ ಸ್ಥಿತಿಯಲ್ಲಿ ಇಂತಹ ಘಟನೆಗಳನ್ನು ಪ್ರಚೋದಿಸುವವರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳ ಬೇಕು ಎಂದು ಆಗ್ರಹಿಸಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಆಕ್ಷೇಪ?
- ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆಕ್ಷೇಪಿಸಿ ಗೋಡೆ ಬರಹ
- ಕಾರ್ಕಳದ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್ ಒಂದರಲ್ಲಿ
ಘಟನೆ - ದೇಶದ ಅಖಂಡತೆಗೆ ಧಕ್ಕೆ ಬರುವ ರೀತಿಯ
ಆಕ್ಷೇಪಾರ್ಹ ಗೋಡೆಬರಹ ಬರೆದ ದೇಶ ದ್ರೋಹಿಗಳು - ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
- ಉದ್ದೇಶಪೂರ್ವಕವಾಗಿಈ ವಿವಾದಾತ್ಮಕ ಬರಹ ಬರೆಯಲಾಗಿದೆಯೇ ಅಥವಾ ಕಿಡಿಗೇಡಿಗಳ ಕೃತ್ಯ ಇರಬಹುದೇ ಎನ್ನುವ ಮಾಹಿತಿ ಗುಮಾನಿ
- ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.





































