ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಹೆಲ್ತ್ ಸೆಂಟರ್ ನಲ್ಲಿ ವನಮಹೋತ್ಸವ
ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಘಟಕ, ಕಮ್ಯೂನಿಟಿ ಹೆಲ್ತ್ ವಿಭಾಗ, ಕ್ಷೇಮಾ, ಪಬ್ಲಿಕ್ ಹೆಲ್ತ್ ದಂತವೈದ್ಯಕೀಯ ವಿಭಾಗ, ಎಬಿ ಶೆಟ್ಟಿ ಸ್ಮಾರಕ ದಂತವೈದ್ಯಕೀಯ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ವನಮಹೋತ್ಸವವನ್ನು ಜೂ.20ರಂದು ನಿಟ್ಟೆ ವಿಶ್ವವಿದ್ಯಾಲಯದ ಗ್ರಾಮೀಣ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಐಎಸ್ಆರ್ ಮತ್ತು ಸಿ.ಆರ್ೆಲ್ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ಕ್ಷೇಮಾ, ಕೇಂದ್ರದ ಸಂಯೋಜಕ ಮೇಜರ್ ಡಾ.ರಾಘವೇಂದ್ರ ಹುಚ್ಚಣ್ಣವರ್, ಎಬಿಎಸ್ಎಂಐಡಿಎಸ್ ಪಬ್ಲಿಕ್ ಹೆಲ್ತ್ ದಂತವೈದ್ಯಕೀಯ ವಿಭಾಗದ ಮುಖ್ಯಸ್ಥ ಪ್ರೊ.ಆಡ್ರಿ ಡಿಕ್ರೂಜ್, ಎ.ಎಂ.ಒ., ಮನೋವೈದ್ಯೆ ಡಾ.ನಿವೇದಾ, ದಂತವೈದ್ಯೆಯರಾದ ಡಾ.ಚೇತನಾ, ಡಾ.ಶುಭಶ್ರೀ ಮತ್ತು ನಿಟ್ಟೆ ಗ್ರಾಮೀಣ ವೈದ್ಯಕೀಯ ಮತ್ತು ಮನೋವೈದ್ಯಕೀಯ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು






































