[t4b-ticker]

ನರಿಕೊಂಬು ಗ್ರಾಮ ಪಂಚಾಯತ್ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

Picture of RB NEWS

RB NEWS

Bureau Report

ಬಂಟ್ವಾಳ:  ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನರಿಕೊಂಬು ಹಾಗೂ ಶಂಬೂರು ಗ್ರಾಮದ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು  ದ ಕ ಜಿಪಂ ಹಿ ಪ್ರಾ ಶಾಲೆ ನರಿಕೊಂಬು ನಲ್ಲಿ  ಗ್ರಾ ಪಂ ಅಧ್ಯಕ್ಷ  ಸಂತೋಷ ಕುಮಾರ್ ರವರ  ಅಧ್ಯಕ್ಷತೆ ಜರುಗಿತು.

        ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜಿ ಕೆ ನಾಯಕ್ ಭಾಗವಹಿಸಿದ್ದರು.

 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಫನತ್ಯಾಜ್ಯ ಫಟಕ ನಿರ್ಮಾಣ ವಾಗದ ಬಗ್ಗೆ ಹಾಗು ಫನತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವ ಬಗ್ಗೆ ಗ್ರಾಮಸ್ಥರು   ಮಾಹಿತಿ ನೀಡುವಂತೆ ಗ್ರಾಮಸ್ಥರು ಪ್ರಶ್ನಿಸಿದರು .

 ಇದರ ಬಗ್ಗೆ ಪಂಚಾಯತ್  ಅಧ್ಯಕ್ಷರು ಉತ್ತರಿಸುತ್ತಾ ಈಗಾಗಲೇ ಸ್ದಳ ಗುರುತಿಸಿ   ಫನತ್ಯಾಜ್ಯ ವಿಲೇವಾರಿಗಾಗಿ ಜಾಗ ಕಾಯ್ದಿರಿಸಲಾಗಿದೆ  ಆದರೆ ಅಲ್ಲಿನ ಕೆಲವು ನಾಗರಿಕರ ವಿರೋಧ ಇರುವುದರಿಂದ ಕಾಮಗಾರಿ ಮಾಡಲು ಸಾಧ್ಯ ವಾಗುತ್ತಿಲ್ಲ ಎಂದು ತಿಳಿಸಿ ಮುಂದಿನ ದಿನಗಳಲ್ಲಿ  ಫಟಕ ನಿರ್ಮಾಣ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.

 ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು    ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ,ಗ್ರಾ ಪಂ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.                 

ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರು, ಅರೋಗ್ಯ ಸುರಕ್ಷಾಣಾಧಿಕಾರಿಗಳು ,ಗ್ರಾಮ ಸಮುದಾಯ ಅರೋಗ್ಯ ಅಧಿಕಾರಿ,ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು,ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾ ಪಂ ಸಿಬ್ಬಂದಿ ಗಳು ಹಾಜರಿದ್ದರು .

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ  ಸ್ವಾಗತಿಸಿ,  ವಂದಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top