[t4b-ticker]

ದೈವಾರಾಧನೆ ಯಾರ ಒಡೆತನದ್ದಲ್ಲ

Picture of RB NEWS

RB NEWS

Bureau Report

ಬೂತಾರಾಧನೆಯನ್ನು ಯಾವುದೇ ಒಂದು ವರ್ಗ ಅಥವಾ ಕೆಲವೇ ಸಮುದಾಯಗಳು ಮಾಡುತ್ತಿಲ್ಲ.ಕರಾವಳಿಯ ಹಿಂದೂ ಮತ್ತು ಜೈನ ಸಮಾಜದ ಎಲ್ಲರೂ ಬೂತಾರಾಧನೆ ಮಾಡುತ್ತಾರೆ.
ಹಾಗಿರುವಲ್ಲಿ ದೈವ ಚಾಕ್ರಿ(ಕೆಲಸ)ಮಾಡುವ ವರ್ಗ ಹಾಗೂ ಸಮುದಾಯ ಕೂಡಾ ಬೇರೆನೆ ಇದೆ.ಅವರು ಬೂತಾರಾಧಕರು ಮತ್ತು ವಿಶೇಷವಾಗಿ ಚಾಕ್ರಿ ಮಾಡುವವರು.ಬೂತ ನರ್ತನದಲ್ಲಿ ಭಾಗವಹಿಸುವವರನ್ನು ಚಾಕ್ರಿಯವರು ಎಂದು ಹೆಸರಿಸಲಾಗುತ್ತಿದೆ,ಸ್ವತಃ ಅವರೇ ಹಾಗೆ ಹೇಳಿಕೊಳ್ಳುತ್ತಾರೆ.
ಬೂತ ಅಥವಾ ದೈವ ಯಾರ ಒಡೆತನದ್ದೂ ಅಲ್ಲ,ಯಾರೂ ಆರಾಧಿಸುವಲ್ಲಿ ಪಂಗಡ ಭೇದವಿಲ್ಲ. ಅದರಿಂದ ತೊಂದರೆ ಬಾರದಿರಲಿ ಎಂದು ಮುಸ್ಲಿಮರು,ಕ್ರೈಸ್ತರಲ್ಲಿ ಕೆಲವರು ಹರಕೆ ಒಪ್ಪಿಸುತ್ತಾರೆ.ಜಾಗದ ದೈವ ಎಂದಿದ್ದರೆ ಅದಕ್ಕೆ ಊರಿನ ಗುರಿಕಾರ,ಪುರೋಹಿತರಿಂದ ಪೂಜೆ ಮಾಡಿಸುತ್ತಾರೆ.
ಇನ್ನು ಅದರ ವೇಷ ಮತ್ತು ಇತರ ಪರಿಕರ ,ನಾಟ್ಯ ನರ್ತನಕ್ಕಾಗಿ ಅದು ಸಂಸ್ಕೃತಿಯ ಬಗೆಗಳಲ್ಲಿ ಸೇರಿಕೊಂಡಿತು.ಅದರ ಹುಟ್ಟು ಕತೆಗಳಿಗೆ ಲಿಖಿತವಾದ ಆಧಾರವಿಲ್ಲದೆ ಬಾಯಿ ಮಾತು ಕೇಳಿಸಿಕೊಂಡದ್ದು ಅದುವೇ ಶಾಶ್ವತವಾಗಿ ಬೆಳೆಯಿತು. ಕತೆಗಳನ್ನು ಸಂಧಿ ಪಾಡ್ದಾನಗಳಲ್ಲಿಯೇ ತುಂಬಿಸಲಾಯಿತು.ಆ ಕಥೆಯೇ ಸಂಧಿ ಪಾಡ್ದನವಾಗಿದೆ ಹೊರತು ಬೇರೇನಲ್ಲ.
ಇದೀಗ ಹೊರಗೆ ಕಂಡು ಬರುತ್ತಿರುವ ಹೋರಾಟಗಳು ಯಾವುದೆಂದರೆ ನಾಟಕ,ಸಿನೆಮದಲ್ಲಿ ಬೂತಾರಾಧನೆಯ ದೃಶ್ಯ ಅಳವಡಿಕೆ ನಿಷೇಧ ಮಾಡಬೇಕು ಎಂಬುದು. ಅಂಥದ್ದೇನಾದರೂ ನಡೆದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು.
ಅದು ಸಾಂವಿಧಾನಿಕ ಬೇಡಿಕೆಯಾಗಲಿಕ್ಕಿಲ್ಲ.ಬೂತಾರಾಧನೆಯ ಚಿತ್ರೀಕರಣದಲ್ಲಿ ಪರವ ಪಂಬದ ಪಾಣಾರ ಸಮುದಾಯದವರ ಖಾಸಗಿ ಬದುಕಿನ ಪ್ರಕಟಣೆ ಮಾಡಿದ್ದಲ್ಲಿ ಮಾತ್ರವೇ ನಿಷೇಧ ಹೇರುವುದಕ್ಕೆ ದೂರು ಕೊಡಬಹುದೇ ಹೊರತು ಬೇರೇನು ಅಸಾಧ್ಯ.
ಕಾಂತಾರ ಸಿನೆಮಾದಲ್ಲಿ ದೈವ ನರ್ತನ ಮಾಡಲಾಗಿದೆ.ಅದು ಸಿನೆಮಾಕ್ಕೆಂತೇ ಮಾಡಿದ್ದ ಚಿತ್ರೀಕರಣ.ಯಾವುದೇ ಗರಡಿಯ ವಾರ್ಷಿಕ ನೇಮದಲ್ಲಿ,ಗುತ್ತು ಮನೆಯ ಕೋಲದಲ್ಲಿ ಕಟ್ಟಿದ್ದ ವೇಷ ಚಿತ್ರೀಕರಣವಾಗಿಲ್ಲ.ಆ ಸಿನೆಮದಲ್ಲಿ ಮೊದಲ ವೇಷ ಹಾಕಿದವರು ಆ ಸಮುದಾಯದವರೇ ಆಗಿದ್ದರು ಅದು ಒಪ್ಪಿಗೆಯ ಮೇರೆಗೆ ತಾನೆ? ಆ ವ್ಯಕ್ತಿಗೆ ಬಲಾತ್ಕಾರದಲ್ಲಿ ಮಾಡಿಸಿದ್ದರೆ ಅದು ತಪ್ಪು ಅಥವಾ ಆ ವ್ಯಕ್ತಿಯ ನರ್ತನಕ್ಕೆ ರಿಷಭ್ ಶೆಟ್ಟಿಯ ಮುಖ ಫಿಕ್ಸ್ ಮಾಡಿದ್ದಾದರೆ ಅಲ್ಲಿ ದೂರು ದಾಖಲಿಸುವುದಕ್ಕೆ ಅವಕಾಶವಿದೆ.
ಪರವ ಪಂಬದ ಪಾಣಾರ ಸಮುದಾಯದವರು ತಮ್ಮ ಕುಲ ಕಸುಬಿನ ಮೇಲೆ ತಾವೇ ಕಲ್ಲು ಚಪ್ಪಡಿ ಎಳೆದುಕೊಳ್ಳುವುದು ಬೇಡ.ಅಲ್ಲಿ ಸಿನೆಮ ನಾಟಕದಲ್ಲಿ ಸರಿಯಾದ ನರ್ತನ ಕಟ್ಟಳೆಯನ್ನು ತಮ್ಮಿಂದಲೇ ಕೇಳಿ ಪಡೆಯುವುದಕ್ಕೆ ಒಂದು ನಿರ್ಧಾರ ಮಾಡಿಸಬೇಕು ಹೊರತು ನಿಷೇಧಕ್ಕೆ ಮಾನ್ಯತೆ ಸಿಗಲಿಕ್ಕಿಲ್ಲ,ಸಮುದಾಯಕ್ಕೆ ಹಿತವು ಅಲ್ಲ.
ಕರಾವಳಿಯಲ್ಲಿ ಬೂತ ಕೋಲಕ್ಕೆ ಹಣ ಸುರಿಯುವುದರಲ್ಲಿ ಅತೀ ಜಾಸ್ತಿ ಬಂಟ(ಶೆಟ್ಟಿ) ಸಮುದಾಯದವರು.ಅವರ ಮುಂಬೈ ದುಡಿಮೆಯ ಹಣದ ಹೊಳೆ ಇಲ್ಲವಾಗಿದ್ದರೆ ನಮ್ಮ ತೆಂಬರೆಗೆ ಕೋಲು ಹಾಕುವುದೇ ಅಪರೂಪವಾಗುತ್ತಿತ್ತೋ ಏನೊ. ನಾಳೆ ಬಂಟ ಸಮುದಾಯ ಒಂದಾಗಿ ರಿಷಭ್ ಶೆಟ್ಟಿ ಪರ ನಿಂತೇ ನಿಲ್ಲುತ್ತಾರೆ.ಅವರವರ ಮನೆಯ ದೈವಗಳಿಗೆ ಭಟ್ರ ಮೂಲಕ ಪನಿಹಾರ ಪೂಜೆ ಮಾಡಿಸುತ್ತಾರೆ ಖಂಡಿತ.

ನಾಲ್ಕು ವರ್ಷಗಳ ಹಿಂದೆ ಕೋಲ ಕಟ್ಟುವವರೊಬ್ಬರು ಏನೇನೊ ಮಾತಾಡಿದ ಆಡಿಯೋ ಪರಿಣಾಮ ಎಲ್ಲಿಗೆ ತಲುಪಿತೆೆಂದರೆ ಕೋಲ ಕಟ್ಟುವ ಆ ಶ್ರೀಮಂತ ವ್ಯಕ್ತಿ ತಪ್ಪುಒಪ್ಪಿಕೊಳ್ಳುವ ಪರಿಸ್ಥಿತಿಗೆ ಬಂತು.ಆತನಿಗೆ ಎಲ್ಲ ಕೋಲಕ್ಕೂ ಆ ಬಂಟ ಮನೆಯವರೆ ಬೆಂಬಲಿಸಿದ್ದು,ಅವರ ಸಮಾಜಕ್ಕೆೇ
ಉಳ್ಟಾ ಮಾತಡಿದ್ದು!

ಯಾರೋ ಹೇಳಿಕೊಡುತ್ತಾರೆ ಎಂದು ಮಾಧ್ಯಮದ ಮುಂದೆ ಬರುವುದಾಗಲಿ,ಅಧಿಕಾರಿ,ನ್ಯಾಯಾಲಯದ ಮುಂದೆ ಕೈ ಜೋಡಿಸಿ ಮನವಿ ಕೊಡುವುದಾಗಲಿ ಖಂಡಿತ ಮಾಡಬೇಡಿ.ನಾಳೆ ಬೆಳಿಗ್ಗೆ ನಿಮ್ಮನ್ನು ಚೂ ಬಿಟ್ಟವರೇ ಕೋಲ ಕಟ್ಟಿಸುವವರೊಂದಿಗೆ ವ್ಯವಹರಿಸಿ ಕಿಸೆ ತುಂಬಿಸಿಕೊಂಡರೆ ನಿಮಗೆ ಚಾಕ್ರಿಯೂ ಇಲ್ಲ ಸಂಪಾದನೆಯೂ ಇಲ್ಲ.
ಎಲ್ಲ ಪರವ ಪಂಬದ ಪಾಣಾರರು ನಿಮ್ಮ ಧೋರಣೆಯನ್ನು ಬೆಂಬಲಿಸುವುದಕ್ಕಾಗುವುದಿಲ್ಲ ಕಾರಣ,ಅವರಿಗೆ ಜೀವನಾಧಾರ ಕಸುಬು ಅದು.ಹಾಗಿರುವಾಗ ನಾವು ನಮ್ಮ ಸಮಾಜದೊಳಗೇ ಖಳನಾಯಕರಾಗುತ್ತೇವೆ. ರಿಶಭ್ ಶೆಟ್ಟಿ ಕೊಡಿಯಾಲಬೈಲು,ಬನ್ನಂಜೆ ಹಾಗೆ ಎಲ್ಲ ನಿರ್ದೇಶಕರ ವಿರುದ್ಧ ಮಾಡುವ ಹೋರಾಟವನ್ನು ಬಿಟ್ಟು ನಿಮ್ಮೊಳಗಿನ ಸಂಘರ್ಷಕ್ಕೆ ಇಳಿಯಬೇಕಾಗುತ್ತದೆ.ಮುಂದೆ ನೀವು ಮತ್ತೆ ಏಕಾಂಗಿಯಾಗುತ್ತೀರ ,ನೆನಪಿಡಿ.
ಬೂತಾರಾಧನೆಯಲ್ಲಿ ನಿಮ್ಮವರ ಸೇವೆ ಅಪೂರ್ವವಾದುದು,ಕಲಾವಂತೆಗೆಗೆ ತಲೆಬಾಗಲೇಬೇಕು,ಆದರೆ ನಿಮ್ಮ ಕಲೆಗೆ ಎಲ್ಲರ ಬೆಂಬಲ ಬೇಕು ಅನ್ನುವುದು ತಿಳಿದಿರಲಿ. ಪ್ರಚೋದನೆ ಕೊಡುವವರ ಬೆನ್ನ ಹಿಂದೆ ಹೋಗದೆ ನೀವೇ ನಿಮ್ಮ ಕಲೆಯನ್ನು ವಿಶ್ವಮಾನ್ಯಗೊಳಿಸುವುದಕ್ಕೆ ಎಲ್ಲರ ಜೊತೆ ಕೈಜೋಡಿಸಿ.ನೀವು ಯಾವತ್ತೂ ಮುಗ್ಧರು.!

ಬೂತ ನರ್ತನವನ್ನು ಹಿಂದೂಗಳಲ್ಲಿ ಬೇರೆ ಜಾತಿಯವರು ಕಟ್ಟುವುದನ್ನು ನಿಷೇಧ ಹೇರುವಂತೆ ಮನವಿ ಮಾಡಲು ಅವಕಾಶವಿದೆ.ಯಾಕೆಂದರೆ ಅದು ನಿಮ್ಮ ಕುಲ ಕಸುಬು,ಬೇರೆ ಆಸ್ತಿ ಬದುಕು ಇರುವುದಿಲ್ಲ.ಕೋಲ ಕಟ್ಟಲಿಕ್ಕೆ ಯಾರೂ ತಯಾರಿಲ್ಲ ಅದೇನು ಸುಲಭದ ತಯಾರಿಯಲ್ಲ ಬಿಡಿ!

-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top