ಉಡುಪಿ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ತನ್ನ ಜೀವನದಲ್ಲಿ ಅಳವಡಿಸಿ ಸಮಾಜಕ್ಕೆ ಮಾದರಿ ಎನ್ನಿಸಿಕೊಂಡಿದ್ದ ಪಡುಬಿದ್ರಿಯ ಲೋಕೇಶ್ (58) ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಭೀಮಯಾನ ಜಾಥವನ್ನು ಯಶಸ್ಸುಗೊಳಿಸುವಲ್ಲಿ ಲೋಕೇಶ್ ಅವರ ಪಾತ್ರ ಮಹತ್ವದಾಗಿತ್ತು.
ದಲಿತ ಸಂಘಟನೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಲೋಕೇಶ್ ಅವರು ದೀನ-ದಲಿತ ಹಕ್ಕು- ಹೋರಾಟಗಳಲ್ಲಿ ಸಕ್ರಿಯಾವಾಗಿ ಗುರುತಿಸಿಕೊಳ್ಳುವ ಮೂಲಕ ಜನಮನ್ನಣೆಗಳಿಸಿದ್ದರು.






































