ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಎಂಬ ಹೆಗ್ಗಳಿಕೆ ಪಾತ್ರವಾಗಲಿರುವ ಗುರುಪುರ ಶ್ರೀ ಗುರುಮಹಾಕಾಲೇಶ್ವರ ಕ್ಷೇತ್ರ – ಮಾಜಿಸಂಸದ ನಳಿನ್ ಕುಮಾರ್ ಶೆಟ್ಟಿ
ಕಾರ್ಕಳ/ಮಂಗಳೂರು : ಶಿವ ತ್ಯಾಗದ ಸಂಕೇತವಾಗಿದ್ದು, ಸನ್ಮಾರ್ಗ ಜೀವನವು ಶಿವನ ಆರಾಧನೆ ಭಾಗವಾಗಿದೆ. ಋಷಿ ಮುನಿಗಳ ತಪೋ ಭೂಮಿಯಿಂದಾಗಿ, ರಾಜರ ಆಳ್ವಿಕೆಯ ಕಾಲಾ ಘಟ್ಟದಲ್ಲಿ ಕೆಲ ಧಾರ್ಮಿಕ ಕೇಂದ್ರಗಳಲ್ಲಿ ತಲೆ ಎತ್ರಿದರೆ, ದೈವಸಂಭೂತರ ದಿವ್ಯ ಶಕ್ತಿಯಿಂದಾಗಿ ಇನ್ನಷ್ಟು ಧಾರ್ಮಿಕ ಕೇಂದ್ರಗಳು ತಲೆ ಎತ್ತುತ್ತಿದೆ. ಆ ಪಂಕ್ತಿಯಲ್ಲಿ ಗುರುಪುರದ ಗೋಳಿದಡಿಗುತ್ತಿನ ಶ್ರೀ ಗುರುಮಹಾಕಾಲೇಶ್ವರ ಒಂದಾಗಿದೆ. ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿ ಇದಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾದ ಶ್ರೀ ಗುರುಮಹಾಕಾಲೇಶ್ವರ ದೇವರ ಬ್ರಹತ್ ಏಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು
ಮೇ15,16,17 ರಂದು ಜರಗಲಿದೆ.
ಆ ಪ್ರಯುಕ್ತ ಏ. 25ರಂದು ಗುರುಪುರದ ಗೋಳಿದಡಿಗುತ್ತು ಸುಕ್ಷೇತ್ರದಲ್ಲಿ ಜರುಗಿದ್ದ ಆಮಂತ್ರಣ ಪತ್ರಿಕೆ ಮತ್ತು ಪಂಚಕಲ್ಯಾಣಯುಕ್ತ ಕಲಶ ರಶೀದಿ ಬಿಡುಗಡೆಗೊಳಿಸಿ ಬ್ರಹ್ಮಕಲಶ ಸಂಭ್ರಮ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು.

ಗೋಳಿದಡಿ ಗುತ್ತು, ಗುರುಪುರ ಸುಕ್ಷೇತ್ರಾಧ್ಯಕ್ಷ , ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು.
ಗುರುಪುರ ಪ್ರಖಂಡ ಸಮಿತಿ ಅಧ್ಯಕ್ಷ ಚಂದ್ರಹಾಸ ಟಿ ಅಮೀನ್, ಹೋಟೆಲ್ ವುಡ್ ಲ್ಯಾಂಡ್ ಮಾಲಕ ವೈ ರವಿ ಭಟ್, ಹರಿಕೃಷ್ಣ ಬಂಟ್ವಾಳ, ಬ್ರಹ್ಮಕಲಶ ಸಂಭ್ರಮ ಸಮಿತಿ ಗೌರವ ಸಲಹೆಗಾರ ಓ ತಿರುಮಲೇಶ ಭಟ್, ಶಂಭು ಶರ್ಮ,ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ, ಸಾಂದರ್ಭಿಕವಾಗಿ ಮಾತನಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಮಜಲಬೆಟ್ಟು ಬೀಡು ರೋಹಿತ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿ ಚೇಳ್ಯಾರುಗುತ್ತು ದಿವಾಕರ ಸಮಾನಿ,
ಗುರುಪುರ ಶ್ರೀ ಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರೀಟೇಬಲ್ ಟ್ರಸ್ಟ್(ರಿ) ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ನವೀನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

































