ಬಂಟ್ವಾಳ : ಜೈ ತುಳುನಾಡ್(ರಿ.)ಬಂಟ್ವಾಳ ವಲಯ ಸಂಘಟನೆಯ ಮನವಿಗೆ ಸ್ಪಂದಿಸಿ ಬಂಟ್ವಾಳ ಅಂಚನ್ ಸಿಲ್ಕ್ಸ್ ನ ಮಾಲಕರಾದ ಪ್ರಕಾಶ್ ಅಂಚನ್ ತಮ್ಮ ಮಾಲಕತ್ವದ ವಸ್ತ್ರ ಮಳಿಗೆಯ ಪ್ರವೇಶ ದ್ವಾರದಲ್ಲಿ ತುಳು ಭಾಷೆಯ ನಾಮಫಲಕ ಅವಳಡಿಸಿದರು.
ತುಳುನಾಡಿನ ಎಲ್ಲರೂ ತಮ್ಮ ತಮ್ಮ ಅಂಗಡಿ ಗಳಿಗೆ ತುಳು ನಾಮಫಲಕ ಅವಲಡಿಸಿ ತುಳು ಭಾಷೆ ಬೆಳೆಸಲು ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೈ ತುಳುನಾಡು ಸಂಘಟನೆಯ ಜತೆ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಸದಸ್ಯರಾದ ಪ್ರತೀಕ್, ನವೀನ್, ಕಿಶೋರ್, ರೇಣುಕಾ, ಪ್ರಸ್ತುತಿ, ಪೂಜಾ, ದಿಶಾ ಉಪಸ್ಥಿತರಿದ್ದರು.





































