ಕೊಕ್ಕಡ (ಮಂಗಳೂರು) :ಕೇರಳದ ರಾಜಧಾನಿ ತಿರುವನಂತಪುರದ ಐತಿಹಾಸಿಕ ಹಿನ್ನಲೆಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೊಕ್ಕಡ ಅಡೈ ಬಡೆಕ್ಕರ ನಿವಾಸಿ ದಿ. ಸುಬ್ರಾಯ ತೋಡ್ತಿಲಾಯ ಮತ್ತು ಯಶೋಧ ದಂಪತಿಯ ಪುತ್ರ ಎಡಪಡಿತ್ತಾಯ ಸತ್ಯನಾರಾಯಣರವರು ಅಧಿಕಾರ ಸ್ವೀಕರಿಸಿದರು.


ಸತ್ಯನಾರಾಯಣ ಅವರು ಪೌರೋಹಿತ್ಯ ಹಾಗೂ ವೇದಪಾಂಡಿತ್ಯವನ್ನು ಪಾಲಲೆ ದಿ. ಸತೀಶ್ ಎಡಪಡಿತ್ತಾಯರವರಲ್ಲಿ ಪೂರೈಸಿದ್ದಾರೆ.
ತನ್ನ ವಿದ್ಯಾಭ್ಯಾಸವನ್ನು ಕೊಕ್ಕಡ ಹಾಗೂ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಮಾಡಿರುತ್ತಾರೆ.

ತಿರುವನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಮೊದಲಿನಿಂದಲೂ ಕೊಕ್ಕಡದ ಎಡಪಡಿತ್ತಾಯ ಕುಟುಂಬಸ್ಥರೆ ಪ್ರಧಾನ ಅರ್ಚಕರಾಗಿ ನಿಯುಕ್ತರಾಗುತ್ತಾರೆ.






































