ಎಂ.ಪಿ.ಎo ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ
ಡಿಜಿಟಲ್ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ
ಕಾರ್ಕಳ : ಸಂಪೂರ್ಣ ಗಣಕೀಕೃತ ಸೇವೆಯನ್ನು ನೀಡುತ್ತಿರುವ ಕಾಲೇಜಿನ ಸುಸಜ್ಜಿತ
ಗ್ರಂಥಾಲಯವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲೆಯಲ್ಲಿಯೇ ಸರಕಾರಿ
ಪದವಿ ಕಾಲೇಜುಗಳ ಪೈಕಿ ಪ್ರಪ್ರಥಮವಾಗಿ ಡಿಜಿಟಲ್ ಗ್ರಂಥಾಲಯವನ್ನುಎಂ.ಪಿ.ಎo ಸರಕಾರಿ ಪ್ರಥಮ ದರ್ಜೆ ಕಾಲೇಜು
ಅನುಷ್ಠಾನಗೊಳಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ. ಹೇಳಿದರು.
ಕಾರ್ಕಳ ಎಂ.ಪಿ.ಎo ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಗ್ರಂಥಪಾಲಕ ವೆಂಕಟೇಶ ರವರು ಡಿಜಿಟಲ್ ಗ್ರಂಥಾಲಯದ ಪ್ರಾತ್ಯಕ್ಷಿಕೆಯನ್ನು ನೀಡಿದರು. ನೂತನವಾಗಿ ಆರಂಭಿಸಲಾದ ಈ
ಸೇವೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ, ಪಠ್ಯ ಪುಸ್ತಕಗಳು, ಪರಾಮರ್ಶನ ಗ್ರಂಥಗಳು, ದಿನ ಪತ್ರಿಕೆಗಳು, ನಿಯತಕಾಲಿಕೆ ಹಾಗೂ ಮ್ಯಾಗಝಿನ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆ ಹಾಗೂ ಪ್ರಶ್ನೋತ್ತರ ಮಾಲಿಕೆಗಳನ್ನು ಮತ್ತು ಇತರೆ ಮಾಹಿತಿಯನ್ನು ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಪಡೆಯಬಹುದಾಗಿದೆ ಎಂದರು.
ಕಾಲೇಜಿನ ಸ್ನಾತಕೋತ್ತರ ವಿಭಾಗ ಸಂಚಾಲಕ ಡಾ.
ವಿದ್ಯಾಧರ ಹೆಗ್ಡೆ ಎಸ್., ವಾಣಿಜ್ಯ ವಿಭಾಗದ ಡಾ. ಸುದರ್ಶನ ಭಟ್,ಮ್ಯಾನೆಜ್ಮೆಂಟ್ ವಿಭಾಗ ಮುಖ್ಯಸ್ಥರಾದ ಪ್ರಸನ್ನ ಕುಮಾರ, ಡಾ.
ಸುಭ್ರಹ್ಮಣ್ಯ ಕೆ.ಸಿ, ಅತಿಥಿ ಉಪನ್ಯಾಸಕರಾದ ರಕ್ಷಾ, ಅಕ್ಷತಾ ರಾವ್, ತೃಪ್ತಿ, ಕಛೇರಿ ಸಿಬ್ಬಂಧಿ ಸಂಧ್ಯಾ, ಹರಿಕಿರಣ್ ಹಾಗೂ ಯೋಗೀಶ್ ಉಪಸ್ಥಿತರಿದ್ದರು.
ಮಂಗಳೂರು ಧೀರಜ್ ತಾಂತ್ರಿಕ ಸಹಕಾರ
ನೀಡಿದರು.






































