ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್ಕಾದಂಬರಿ ಪ್ರಶಸ್ತಿ ಪ್ರದಾನ

Picture of RB NEWS

RB NEWS

Bureau Report

ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್
ಕಾದಂಬರಿ ಪ್ರಶಸ್ತಿ ಪ್ರದಾನ

ಕಾರ್ಕಳ :ತನ್ನ ೧೮ನೇ ವಯಸ್ಸಿನಲ್ಲಿಯೇ ‘ನನ್ನದಲ್ಲದ್ದು’ ಎಂಬ ಕಾದಂಬರಿ ರಚನೆಯೊಂದಿಗೆ ಕಾದಂಬರಿಲೋಕಕ್ಕೆ ಪಾದಾರ್ಪಣೆಗೈದ ಡಾ.ನಾ.ಮೊಗಸಾಲೆಯವರು ಈಗಾಗಲೇ ತಮ್ಮ ೨೨ ಕಾದಂಬರಿಗಳೊoದಿಗೆ ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಸಾಕಷ್ಟು ಕೃಷಿ ಮಾಡಿ ನಾಡಿನ ಪ್ರಮುಖ ಸೃಜನಶೀಲ ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ ಎಂಬುದಾಗಿ ಇತಿಹಾಸ ತಜ್ಞ ಹಾಗೂ ವಾಗ್ಮಿ ಡಾ.ಪುಂಡಿಕಾÊ ಗಣಪಯ್ಯ ಭಟ್ ಮಾತನಾಡುತ್ತಾ ತಿಳಿಸಿದರು.

ಕನ್ನಡದ ಮಹತ್ವದ ಲೇಖಕಿಯರಲ್ಲೊಬ್ಬರಾದ ದಿ. ಸುನಂದಾ ಬೆಳಗಾಂವಕರ್ ಅವರ ಹೆಸರಿನಲ್ಲಿ ಧಾರವಾಡದ ‘ಸಾಹಿತ್ಯ ಗಂಗಾ’ ಸಂಸ್ಥೆಯು ಈ ವರ್ಷದಿಂದ ನೀಡುತ್ತಿರುವ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ ಡಾ.ನಾ.ಮೊಗಸಾಲೆಯವರ ‘ಭಾರತ ಕಥಾ’ ಕಾದಂಬರಿಯು ಆಯ್ಕೆಯಾಗಿದ್ದು ಕಾರ್ಕಳದ ಪ್ರಕಾಶ್ ಹೋಟೇಲಿನ ಸಂಭ್ರಮ ಸಭಾಂಗಣದಲ್ಲಿ ಏರ್ಪಡಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊಗಸಾಲೆಯವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಅವರು ಮಾತನಾಡಿದರು.

ಡಾ.ನಾ.ಮೊಗಸಾಲೆಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅ.ಭಾ.ಸಾ.ಪ.ದ ಕಾರ್ಕಳ ತಾಲೂಕು ಘಟಕದ ಗೌರವಾಧ್ಯಕ್ಷ ನಿತ್ಯಾನಂದ ಪೈಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದು ಅ.ಭಾ.ಸಾ.ಪದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ಸಾಹಿತ್ಯ ಸಂಘ ಕಾರ್ಕಳದ ಅಧ್ಯಕ್ಷ ಕೆ.ಪಿ.ಶೆಣೈ, ಕ.ಸಾ.ಪ. ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಪ್ರಭಾಕರ ಕೊಂಡಳ್ಳಿ, ದಿ. ಸುನಂದಾ ಬೆಳಗಾಂವಕರ ಅವರ ಮಗಳು ವೈಜಯಂತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಭಾಷ್ ಪಟ್ಟಾಜೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ತೀರ್ಪುಗಾರರ ಟಿಪ್ಪಣಿಯನ್ನು ಮಂಡಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು.
ಬಾಲಕೃಷ್ಣರಾವ್ ಸ್ವಾಗತಿಸಿ ರೇವಣಸಿದ್ದಪ್ಪ ಜಿ. ಆರ್. ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top