ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Picture of RB NEWS

RB NEWS

Bureau Report


ನಿಟ್ಟೆ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಮೇ 2024 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಮಾರಿ ಅನುಶ್ರೀ ನಿಟ್ಟೆ ಅತ್ಯುತ್ತಮ ಅಂಕಗಳಿಸುವ ಮೂಲಕ ತೇರ್ಗಡೆಯಾಗಿದ್ದಾರೆ. ಇವರು ನಿಟ್ಟೆ ಗಣೇಶ್ ಆಚಾರ್ಯ ಮತ್ತು ಶ್ರೀಮತಿ ವೀಣಾ ಆಚಾರ್ಯ ದಂಪತಿಗಳ ಪುತ್ರಿಯಾಗಿದ್ದು ಮಂಗಳೂರಿನ ಪಿ.ಪಿ.ಕೆ ಅಂಡ್ ಅಸೋಸಿಯೆಟ್ ಸಂಸ್ಥೆಯಲ್ಲಿ ಸಿ.ಎ ಅರ್ಟಿಕಲ್ ಶಿಪ್ ತರಬೇತಿ ಪಡೆದಿರುತ್ತಾರೆ.
ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಮೇ 2024 ರಲ್ಲಿ ನಡೆಸಿದ ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪ್ರಸ್ತುತ ಅಂತಿಮ ಬಿಕಾಂನ ವಿದ್ಯಾರ್ಥಿ ಆಕಾಶ್ ಕೆ ತೇರ್ಗಡೆ ಹೊಂದಿರುತ್ತಾರೆ. ಇವರು ಕೆ ಯೋಗಿಶ್ ಆಚಾರ್ಯ ಮತ್ತು ಶ್ರೀಮತಿ ಮಮತ ವೈ ಇವರ ಪುತ್ರರಾಗಿದ್ದಾರೆ.
ಈ  ಇಬ್ಬರೂ  ವಿದ್ಯಾರ್ಥಿಗಳಿಗೆ  ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಎನ್.ವಿನಯ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಗಳಾದ ವಿಶಾಲ್ ಹೆಗ್ಡೆ ಮತ್ತು ಡಾ. ಶಾಂತರಾಮ ಶೆಟ್ಟಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವೈಸ್-ಚಾನ್ಸಲೆರ್ ಪ್ರೊ. ಎಂ.ಎಸ್.ಮೂಡಿತ್ತಾಯ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ, ಕಾಲೇಜಿನ ಅಧ್ಯಾಪಕ ಅಧ್ಯಾಪಕೆತರ ಬಳಗ ಮತ್ತು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಶುಭ ಹಾರೈಸಿ ಅಭಿನಂದಿಸಿರುವರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top