ದಾವಣಗೆರೆ: ಭಾನುವಾರದಂದು ಮುಂಜಾನೆ ಸಾಂಸಾರಿಕ ಜೀವನದ ಎಲ್ಲ ಸುಖ ಸಂಪತ್ತುಗಳ ತ್ಯಾಗದ ಪ್ರತೀಕವಾಗಿ ಮುಮುಕ್ಷು ಮಯಂಕ್ ನ ಸಾಂಸಾರಿಕ ಜೀವನದ ಕೊನೆಯ ಬೃಹತ್ ಮೆರವಣಿಗೆ ನಡೆದು ಚೌಕೀಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ್ ದೇವಸ್ಥಾನದಿಂದ ಮುಂಜಾನೆ 8 ಗಂಟೆಗೆ ಹೊರಟು ರೇಣುಕಾ ಮಂದಿರ ತಲುಪಿತು.
ತದನಂತರ ರೇಣುಕಾ ಮಂದಿರದಲ್ಲಿ ನೂರಾರು ಜೈನ ಸಂತರು, ಆಚಾರ್ಯರ ಸಮ್ಮುಖದಲ್ಲಿ ನಡೆದ ಈ ದಿಕ್ಷಾದ ಪೂರ್ವಭಾವಿ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.
ಈ ದೀಕ್ಷಾ ಸಮಾರಂಭದ ಕಾರ್ಯಕ್ರಮದಲ್ಲಿ ನಗರದ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಹಾಗೂ ಶಾಮನೂರು ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ರವರ ಪುತ್ರ ಸಮರ್ಥ ಶಾಮನೂರು ಅವರು ದಿಕ್ಷಾರ್ಥಿಯಾದ ಮಯಂಕ್ ರನ್ನು ಭೇಟಿಯಾಗಿ ಶುಭ ಹಾರೈಸಿ ಗುರು, ಆಚಾರ್ಯ ಭಗವಂತರ ಆಶೀರ್ವಾದ ಪಡೆದರು.






































