ಬಜಪೆ: ದನ ಕಳವು ಮಾಡುತ್ತಿದ್ದ ಇಬ್ಬರನ್ನು ಬಜಪೆ ಹಾಗೂ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆಯ ಕೊಡಂಗಲ್ ನಿವಾಸಿ ಮೊಹಮ್ಮದ್ ಶರೀಫ್ (23) ಹಾಗೂ ಮೂಡುಬಿದಿರೆ ಹಿದಾಯತ್ ನಗರ ತೋಡಾರು ನಿವಾಸಿ ಹಸೈನಾರ್ (28) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಹಂಝ ಪರಾರಿಯಾಗಿದ್ದಾನೆ.
ಫೆ.8ರಂದು ಬೆಳಿಗ್ಗೆ ಬಿಳಿ ಬಣ್ಣದ ಕಾರು ಮುಚೂರು ಕ್ರಾಸ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಅವರಿಗೆ ಬಂದ ಮಾಹಿತಿಯಂತೆ ಪಿಎಸ್ಐ ರೇವಣಸಿದ್ದಪ್ಪ ಹಾಗೂ ಸಿಬ್ಬಂದಿ ವಾಹನ ತಡೆದಾಗ ಒಬ್ಬ ಪರಾರಿಯಾಗಿದ್ದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ₹ 5 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.
ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ಮತ್ತು ಮೂಡುಬಿದಿರೆ ಠಾಣೆ ನಿರೀಕ್ಷಕ ಸಂದೇಶ್ ನೇತೃತ್ವದಲ್ಲಿ ಬಜಪೆ ಠಾಣೆ ಪಿಎಸ್ಐ ರೇವಣ ಸಿದ್ದಪ್ಪ ಗುರಪ್ಪ ಕಾಂತಿ, ಕುಮಾರೇಶನ್ ಎಎಸ್ಐ ರಾಮ ಪೂಜಾರಿ ಮೇರಮಜಲು, ಸುಜನ, ರಶೀದ್ ಶೇಕ್, ದೇವಪ್ಪ ಹೊಸಮನಿ, ಮಂಜುನಾಥ, ಬಸವರಾಜ್ ಪಾಟೀಲ್, ಕೆಂಚನಗೌಡ, ಗುರುಪ್ರಸಾದ್ ಆನಂದ ಮಧು ವೈ, ಪ್ರಕಾಶ್ ಗೌಡ, ಈರಣ್ಣ, ಪ್ರೇಮ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





































