ಚೂರಿ ಇರಿತ‌ ಯುವಕನ ಸ್ಥಿತಿ ಗಂಭೀರ

Picture of RB NEWS

RB NEWS

Bureau Report

ಮಂಗಳೂರು: ಇಲ್ಲಿನ  ಯೆಯ್ಯಾಡಿಯಲ್ಲಿ ಎಂಬಲ್ಲಿ ಶುಕ್ರವಾರ ಮದ್ಯಾಹ್ನದ ವೇಳೆಗೆ ದುಷ್ಕರ್ಮಿಗಳಿಬ್ಬರು ಯುವಕನೊಬ್ಬನಿಗೆ ಚೂರಿ ಇರಿದ ಘಟನೆ ಬೆಳಕಿಗೆ ಬಂದಿದೆ.

ಕೌಶಿಕ್  ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಜೇಶ್ ಶೆಟ್ಟಿ, ಗಣೇಶ್ ಬಿಜೈ  ಆರೋಪಿಗಳು ಎಂದು ತಿಳಿದು ಬಂದಿದೆ.

ತಿಂಗಳ ಹಿಂದೆ ನಡೆದುದ್ದ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತಂಡ ನಡುವೆ ಗಲಾಟೆ ನಡೆದಿದೆ.
ಆ ಸಂದರ್ಭ ವೇಳೆಗೆ ಬ್ರಿಜೇಶ್ ಶೆಟ್ಟಿ,  ಕೌಶಿಕ್ ಹಲ್ಲೆ ಮಾಡಿದ್ದನು. ಇದಕ್ಕೆ ಉತ್ತರವಾಗಿ  ಬ್ರಿಜೇಶ್ ಗೆ ಕೌಶಿಕ್ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಇದರ ಮುಂದುವರಿದ ಭಾಗವಾಗಿ  ಮತ್ತೆ ಕೌಶಿಕ್ ಮೇಲೆ ಬ್ರಿಜೇಶ್ ಶೆಟ್ಟಿ ಹಲ್ಲೆ ನಡೆಸಿ ಚೂರಿ ಇರಿದು ಗಾಯಗೊಳಿಸಿದ್ದಾನೆ.   ಪರಿಣಾಮವಾಗಿ  ಕೌಶಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top