ಚುರುಕಾದ ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖೆ

Picture of RB NEWS

RB NEWS

Bureau Report

ಚುರುಕಾದ ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖೆ

  • ವಿಡಿಯೋವನ್ನು ಪೆನ್ ಡ್ರೈವ್ ಮತ್ತು ಸಿಡಿ ಮೂಲಕ ಹಂಚಿದ ಆರೋಪ
  • ಸಚಿವ ಜಮೀ‌ರ್ ಅಹ್ಮದ್ ಖಾನ್ ಅವರ ಶಿಷ್ಯನ ಮೇಲೆ FIR ದಾಖಲು

ಹಾಸನ : ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ಸೆನ್ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಸಚಿವ ಜಮೀ‌ರ್ ಅಹ್ಮದ್ ಖಾನ್ ಅವರ ಶಿಷ್ಯ ನವೀನ್ ಗೌಡ ಸೇರಿ ಜೊತೆಗಾರರ ಮೇಲೆ ಕೇಸ್ ಹಾಕಲಾಗಿದೆ.

ಹಾಸನ ಸೆನ್ ಪೊಲೀಸ್‌ ಠಾಣೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಎಂಬುವವರು ದೂರು ನೀಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಶಿಷ್ಯ ನವೀನ್ ಗೌಡ ಹಾಗೂ ಜೊತೆಗಾರರು ಫೋಟೋ ಮಾರ್ಫ್ ಮಾಡಿ ವಿಡಿಯೋ ರೆಡಿ ಮಾಡಿದ್ದಾರೆ.

ವಿಡಿಯೋವನ್ನು ಪೆನ್ ಡ್ರೈವ್ ಮತ್ತು ಸಿಡಿ ಮೂಲಕ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲಾಗಿದೆ. ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಸನದ ಮನೆ ಮನೆಗೂ ಹಂಚಿಕೆ ಮಾಡಿದ್ದಾರೆ. ಹೀಗಾಗಿ ನವೀನ್ ಗೌಡ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top