ಗೆಳತಿ
ಬಣ್ಣ ಬಣ್ಣದ ಮಾತಿನಲ್ಲಿ
ಬರಸೆಳೆದೆಯಾ ಗೆಳತಿ
ಕಣ್ಣಸನ್ನೆಯಲಿ ಕೈ ಮಾಡಿ
ಕರೆದೆಯಾ ಗೆಳತಿ
ಭಾವನಾತ್ಮಕ ಭಾವದಲ್ಲಿ
ಬಾ ಎಂದೆಯಾ ಗೆಳತಿ
ಬಣ್ಣ ಬಣ್ಣದ ಓಕಳಲಿ
ಬರದಪ್ಪಿದೆಯಾ ಗೆಳತಿ
ಭಾವಬಂಧನಗಳಲಿ
ನನ್ನ ಮನವ ಸೆಳೆದೆಯಾ ಗೆಳತಿ
ರಂಗುರಂಗಿನ ಆಟದಲ್ಲಿ
ರಂಗೇರಿಸಿದೆಯಾ ಗೆಳತಿ
ರಂಗಿನ ಗುಂಗಿನಲ್ಲಿ
ಮನ ಸೆಳೆದೆಯಾ ಗೆಳತಿ
ಪ್ರೀತಿಯು ಬಲೆ ಬಿಸಿ
ಬರಸೆಳೆದೆಯಾ ಗೆಳತಿ
ಬಣ್ಣದ ಲೋಕದಿ ನನ್ನ
ಬಿಗಿದಪ್ಪಿದೆಯಾ ಗೆಳತಿ
ಹೂವಿನ ನಗು ಚೆಲ್ಲಿ
ಮೋಹಿಸಿದೆಯಾ ಗೆಳತಿ
ಬಣ್ಣದ ಬದುಕಿನಲಿ
ಬಂಧನವಾದೆಯಾ ಗೆಳತಿ




































