ಗುಣವಂತ ಹೆತ್ತವರ ಜವಾಬ್ದಾರಿ ನಮ್ಮದು

ಬೆಳುವಾಯಿ ಮರಿಯಮ್ ನಿಕೇತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಮೂಡುಬಿದಿರೆ : ಇಲ್ಲಿಗೆ ಸಮೀಪದ ಬೆಳುವಾಯಿ ಮರಿಯಮ್ಮ ನಿಕೇತನ್ ಶಾಲೆಯಲ್ಲಿ ಹೆತ್ತವರ ಮಾಹಿತಿ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಸೂರ್ಯ ಫೌಂಡೇಶನ್ ನ ಸಂಯೋಜಕ, ಹಿರಿಯ ಪತ್ರಕರ್ತ ರಾಯಿ ರಾಜಕುಮಾರ್ ಮೂಡುಬಿದಿರೆ ಯವರು ಆಗಮಿಸಿ ಗುಣವಂತ ಹೆತ್ತವರ ಜವಾಬ್ದಾರಿ ಗಳನ್ನು ತಿಳಿಸಿಕೊಟ್ಟರು. ಅವರು ತಮ್ಮ ಭಾಷಣದಲ್ಲಿ ಪ್ರಕೃತಿ ನಮಗೆ ನೀಡಿದ ಸುಂದರ ಪರಿಸರವನ್ನು ಇದ್ದಂತೆಯೇ ಬಿಟ್ಟು ಹೋಗುವುದರ ಒಟ್ಟಿಗೆ ಬಹಳ ಉತ್ತಮವಾದಂತಹ ಮುಂದಿನ ತಲೆಮಾರನ್ನು ಕೂಡ ನಿರ್ಮಿಸುವ ಜವಾಬ್ದಾರಿ ಹೆತ್ತವರದಾಗಿದೆ. ಮಾತು, ಮನೆ, ಮನ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಇದೆ ಎನ್ನುವುದನ್ನು ಹಲವಾರು ಉದಾಹರಣೆಗಳ ಮೂಲಕ ಪ್ರಸ್ತುತಪಡಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಟ್ಬಾಲ್ ಅವರು, ಶಿಕ್ಷಕರ ಪ್ರತಿನಿಧಿ ಶ್ರೀಮತಿ ಅಮಿತಾ ಅವರು ಇದ್ದರು. ಕುಮಾರಿ ಪ್ರಿಯ ಸ್ವಾಗತಿಸಿದರು. ಶ್ರೀಮತಿ ಸುನೀತಾ ಕಾರ್ಯಕ್ರಮ ನಿರ್ವಹಿಸಿದರು.ಶ್ರೀಮತಿ ಶಾಂತಕುಮಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ನೂತನ ಶಿಕ್ಷಕರಕ್ಷಕ ಸಂಘದ ಸದಸ್ಯರ ಆಯ್ಕೆಯು ನಡೆಯಿತು.






































