ಗಾಂಜಾ ಸಾಗಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

ಕಾರ್ಕಳ : ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರ ನೇತೃತ್ವದಲ್ಲಿ ಪೊಲೀಸರ ತಂಡ ನಡೆಸಿದ ಕಾರ್ಯಚರಣೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ರೌಡಿಶೀಟರ್ ಮೊಹಮ್ಮದ್ ತೌಸೀಫ್ ನನ್ನು ಬಂಧಿಸಿದ್ದಾರೆ.
ಡಿ. 16 ರಂದು ಸಂಜೆ 5.00 ಗಂಟೆಗೆ ದೊರೆತ ಖಚಿತ ಮಾಹಿತಿಯಂತೆ ಪೊಲೀಸರು ಈ ಕಾರ್ಯಚರಣೆ ನಡಸಿದ್ದಾರೆ.


ಮೂಡಬಿದ್ರೆ ತಾಲೂಕಿನ ಶಿರ್ತಾಡಿ ಕಡೆಯಿಂದ ಕೊಡಂಗಲ್ಲು ಕಡೆಗೆ ಬಿಳಿ ಬಣ್ಣದ KA-09-MJ-7034 ನಂಬ್ರದ ಹ್ಯೂಂಡೈ ಕಾರಿನಲ್ಲಿ ಎರಡು ಪ್ಲಾಸ್ಟೀಕ್ ಕವರ್ ನಲ್ಲಿ ಸುಮಾರು 10 ಗ್ರಾಂ 800 ಮಿಲಿ ಗ್ರಾಂ ತೂಕದ MDMA ಗಾಂಜಾವನ್ನು ಸಾಗಾಟ ಮಾಡಿಕೊಂಡು ಬರುತ್ತಿದ್ದ ಆರೋಪಿ ಮೊಹಮ್ಮದ್ ತೌಸೀಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.




































