ಗಾಂಜಾ ಸಾಗಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

Picture of RB NEWS

RB NEWS

Bureau Report

ಕಾರ್ಕಳ : ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರ ನೇತೃತ್ವದಲ್ಲಿ ಪೊಲೀಸರ ತಂಡ ನಡೆಸಿದ ಕಾರ್ಯಚರಣೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ರೌಡಿಶೀಟರ್ ಮೊಹಮ್ಮದ್ ತೌಸೀಫ್ ನನ್ನು ಬಂಧಿಸಿದ್ದಾರೆ.

ಡಿ. 16 ರಂದು ಸಂಜೆ 5.00 ಗಂಟೆಗೆ ದೊರೆತ ಖಚಿತ ಮಾಹಿತಿಯಂತೆ ಪೊಲೀಸರು ಈ ಕಾರ್ಯಚರಣೆ ನಡಸಿದ್ದಾರೆ.

ಮೂಡಬಿದ್ರೆ ತಾಲೂಕಿನ ಶಿರ್ತಾಡಿ ಕಡೆಯಿಂದ ಕೊಡಂಗಲ್ಲು ಕಡೆಗೆ ಬಿಳಿ ಬಣ್ಣದ KA-09-MJ-7034 ನಂಬ್ರದ ಹ್ಯೂಂಡೈ ಕಾರಿನಲ್ಲಿ ಎರಡು ಪ್ಲಾಸ್ಟೀಕ್ ಕವರ್ ನಲ್ಲಿ ಸುಮಾರು 10 ಗ್ರಾಂ 800 ಮಿಲಿ ಗ್ರಾಂ ತೂಕದ MDMA ಗಾಂಜಾವನ್ನು ಸಾಗಾಟ ಮಾಡಿಕೊಂಡು ಬರುತ್ತಿದ್ದ ಆರೋಪಿ ಮೊಹಮ್ಮದ್ ತೌಸೀಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಆರೋಪಿ ಮೊಹಮ್ಮದ್ ತೌಸೀಫ್ ವಿರುದ್ದ ಮೂಡಬಿದ್ರೆ ಅಪರಾಧ ಕ್ರಮಾಂಕ 200/2025 ಕಲಂ 8(c), 22(c) NDPS Act & 3, 25(1B)(a) Arms Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತದೆ.

ವಶಪಡಿಸಿಕೊಂಡ MDMA ಗಾಂಜಾದ ಅಂದಾಜು ಮೌಲ್ಯ ರೂ. 50,000 ಹಾಗೂ ಕಾರಿನ ಅಂದಾಜು ಮೌಲ್ಯ ರೂ. 3,00,000 ಆಗಬಹುದು. ಈತನು ಬಂಟ್ವಾಳ ನಗರ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ಧ 5 ಪ್ರಕರಣಗಳು ದಾಖಲಾಗಿರುತ್ತದೆ.

ಕಾರ್ಯಾಚರಣೆಯಲ್ಲಿ ಸಂದೇಶ್ ಪಿ.ಜಿ ಪೊಲೀಸ್ ನಿರೀಕ್ಷಕರು ಮೂಡುಬಿದಿರೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್ ಹುಸೇನ್, ನಾಗರಾಜ್ ಲಮಾಣಿ, ಮೊಹಮ್ಮದ್ ಇಕ್ಬಾಲ್, ಅಖಿಲ್ ಅಹಮ್ಮದ್, ಚಂದ್ರಹಾಸ ರೈ ಮತ್ತು ದೇವರಾಜ್ ರವರು ಪಾಲ್ಗೊಂಡಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top