ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ನೇತೃ ತ್ವದಲ್ಲಿ ಇಂದು ಬೆಲೆ ಎರಿಕೆ,ನಿರುದ್ಯೋಗ ,ಉದ್ದಿಮೆಗಳ ಖಾಸಗಿಕರಣ, ಹಾಗೂ ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ಕಾರ್ಮಿಕರಿಂದ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಸಹಿಯನ್ನು ಪ್ರಧಾನ ಮಂತ್ರಿ ಯವರ ಕಛೇರಿ ಅಂಚೆ ಮೂಲಕ ಇಂದು ಸಂಜೆ ಕಳುಹಿಸಿ ಕೊಡಲಾಯಿತು.ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಕೆ.ಶಂಕರ್,ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಕೋಶಾಧಿಕಾರಿ ಶಶಿಧರ ಗೋಲ್ಲ,ಸಿಐಟಿಯು ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ,ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಕಾರ್ಯದರ್ಶಿ ಎಚ್ ನರಸಿಂಹ,ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ರಾದ ಚಂದ್ರಶೇಖರ್, ಸಿಐಟಿಯು ಉಡುಪಿ ವಲಯ ಸಂಚಾಲಕ ರಾದ ಕವಿರಾಜ್. ಎಸ್,ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ನ ಮುಖಂಡರಾದ ಉಮೇಶ್ ಕುಂದರ್,ಬಲ್ಕಿಸ್,ನಳಿನಿ, ಬೈಂದೂರು ಕಟ್ಟಡ ಸಂಘದ ಕಾರ್ಯದರ್ಶಿ ರೊನಾಲ್ಡ್ ರಾಜೇಶ್,ಉಡುಪಿ ಜಿಲ್ಲಾ ಕಟ್ಟಡ ಸಂಘದ ಉಪಾಧ್ಯಕ್ಷ ರಾದ ಸುಭಾಸ್ ನಾಯಕ್,ಉಡುಪಿ ಜಿಲ್ಲಾ ಕ್ರಷಿಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.







































