




ಕ್ರೀಡೋತ್ಸವವು ಬದುಕಿಗೆ ಸ್ಪೂರ್ತಿದಾಯಕ : ಮಾಜಿಸಚಿವ ಕೃಷ್ಣ ಜೆ. ಪಾಲೆಮಾರು

ಮಂಗಳೂರು : ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೋತ್ಸವವು ಪೂರಕವಾಗಿದೆ. ಕ್ರೀಡಾ ಉತ್ಸವ ಆಯೋಜಿಸುವ ಮೂಲಕ ಸಮಾಜದಲ್ಲಿ ಪ್ರತಿಭೆಗಳನ್ನು ಪರಿಚಯಿಸುವ ಜೊತೆಗೆ ಸಂಬಂಧ ವೃದ್ಧಿಸಲು ಸಹಕಾರಿಯಾಗುತ್ತದೆ. ಸಂಘಟನೆಗಳು ಸದೃಢವಾಗುವ ಜೊತೆಗೆ ಸಮಾಜದಲ್ಲಿ ಶಾಂತಿ, ಸಹೋದರತೆ,ಸಹಬಾಳ್ವೆ ಮೂಡಿಸುವ ಸತ್ಕಾರ್ಯವು ಪ್ರಸಕ್ತ ಕಾಲಘಟ್ಟಕ್ಕೆ ಅಗತ್ಯವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರು ಹೇಳಿದರು.

ಉಳ್ಳಾಲ ರಾಮರಾಜ ಕ್ಷತ್ರಿಯ ಮಹಿಳಾ ಸಂಘ ಹಾಗೂ ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.),ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ ಇದರ ಜಂಟೀ ಆಶ್ರಯದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಶಾಲೆಮಾರ್ ಇವರ ಸಾರಥ್ಯದಲ್ಲಿ ಮಂಗಳೂರು ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಜರುಗಿದ್ದ ಯುವಸಂಭ್ರಮ- 2026 ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಭಂಡಾರಿ ಮಾತನಾಡಿ , ಕ್ಷಾತ್ರ ಸಮಾಜದಲ್ಲಿ ಗುರುತಿಸಿಕೊಂಡಿರುವ ರಾಮಕ್ಷತ್ರಿಯ ಸಮಾಜದವರು ಅನಾದಿಕಾಲದಿಂದ ರಾಜಧರ್ಮದಲ್ಲಿ ನಡೆಯುತ್ತಾ ಬಂದವರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಸಂಸ್ಕಾರ, ಸಂಸ್ಕ್ರತಿಯ ಜೊತೆಗೆ ನಿಷ್ಟಾವಂತರಾಗಿ ಗುರುತಿಸಿಕೊಂಡು ಬಂದ ಅವರು, ಧರ್ಮ ರಕ್ಷಣೆ ಸತ್ಕಾರ್ಯವು ರಾಮ ಕ್ಷತ್ರಿಯ ಸಮಾಜದಿಂದ ಮುನ್ನೆಡೆಯಲಿ ಎಂದು ಶುಭಹಾರೈಸಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆ ಬದುಕಿಗೆ ಸ್ಪೂರ್ತಿಯಾಗಿದೆ. ಪ್ರಶಸ್ತಿಗಳಿಸಲೆಂದೇ ಕ್ರೀಡೆಯಲ್ಲಿ ಪಾಲ್ಗೊಳದೇ, ಕ್ರೀಡಾಳುಗಳಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಆ ಮೂಲಕ ತಿದ್ದಿಕೊಳ್ಳಲು, ಬೆಳೆಯಲು ಅವಕಾಶ ದೊರಕುತ್ತದೆ ಎಂದರು.
ಪುತ್ತೂರು, ಎಸಿಎಫ್ ಶ್ರೀಧರ್ ರಾವ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ವಕೀಲ ರಾಘವೆಂದ್ರ , ಸಂಘದ ಗೌರವಾಧ್ಯಕ್ಷ ಮಾಧವ ರಾವ್ ಕಿನ್ಯಾ ಹಾಗೂ ಅಧ್ಯಕ್ಷರಾದ ಸತ್ಯನಾರಾಯಣ ಹೂಡೆ ಉಪಸ್ಥಿತರಿದ್ದರು. ಯುವಕ್ಷಾತ್ರ ಅಬ್ಬಕ್ಕನಾಡು ಇದರ ಅಧ್ಯಕ್ಷರಾದ ಅಭಿಷೇಕ್ ರಾವ್ ಪಂಡಿತ್ ಹೌಸ್ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿಯಾದ ಚರಣ್ ರಾಜ್ ವಂದಿಸಿದರು. ಸೌಮ್ಯಲತಾ ಹಾಗೂ ನವ್ಯರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

ಉಳ್ಳಾಲ ರಾಮಕ್ಷತ್ರಿಯ ಸಮಾಜದ ಸಂಘಟನೆಯನ್ನು ಮುನ್ನೆಡೆಸುವಲ್ಲಿ ಶ್ರಮಿಸಿದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಕೆ.ಪಿ.ಸೋಮಶೇಖರ್ ಕುಂಜತ್ತೂರು ಹಾಗೂ ಅವರ ಪತ್ನಿ ನಿರೂಪಮ ಇವರನ್ನು ಸಂಘಟಕರಿಂದ ಸನ್ಮಾನಿಸಲಾಯಿತು.
———————————————————————————————-
ಕಾರ್ಯಕ್ರಮದ ಸಮಾರೊಪ ಸಮಾರಂಭದ ವೇದಿಕೆಯಲ್ಲಿ ರಾಮಕ್ಷತ್ರಿಯ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ರಾವ್, ಕಾಸರಗೂಡು ಕನ್ನಡ ಗ್ರಾಮದ ಸ್ಥಾಪಕ ವಾಮನ್ ರಾವ್, ವಕೀಲ ಅನಿಲ್ ಬೇಕಲ್, ಮಹಿಳಾ ಸಂಘದ ಅಧ್ಯಕ್ಷೆ ನವ್ಯರಾಜೇಶ್, ಭಿಕ್ಷುಲಕ್ಷಮಣಾನಂದ ಸಹಕಾರಿ ಸಂಘದ ಆಡಳಿತ ನಿರ್ದೇಶಕರಾದ ಚಂದನ್ ಕೋಟೆಕಾರ್,Cpt ಪ್ರಸಾದ್. ಜಿ ಎಸ್,ಉಪಸ್ಥಿತರಿದ್ದರು.

ಶಾಸಕರಾದ ವೇದವ್ಯಾಸ್ ಕಾಮತ್, ನಂದನ್ ಮಲ್ಯ, ಸಂತೋಷ್ ಕುಮಾರ್ ರೈ ಬೋಳಿಯಾರ್, ಎಸಿಪಿ ಶ್ರೀಕಾಂತ್, ಪೊಲೀಸ್ ವೃತ್ತ ನಿರೀಕ್ಷಕ ಪ್ರಮೋದ್, ಅಬಕಾರಿ ವೃತ್ತ ನಿರೀಕ್ಷಕಿ ಶೋಭಾ ಆಗಮಿಸಿ ಶುಭಾಶಯ ಕೋರಿದರು
ಕ್ರೀಡಾಕೂಟದಲ್ಲಿ 12 ಕ್ರಿಕೆಟ್ ತಂಡಗಳು ಹಾಗೂ 10 ತ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಹಾಗೂ ಸಂಗೀತ, ರಸಪ್ರಶ್ನೆ, ರಂಗೋಳಿ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು, ರಾಮಕ್ಷತ್ರಿಯ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತ್ರೋ ಬಾಲ್

1. ರಾಮಕ್ಷತ್ರಿಯ ಸಮಾಜ ಉಳ್ಳಾಲ

- ರಾಮಕ್ಷತ್ರಿಯ ಸಮಾಜ ಸಮಾಜ ಬೈಂದೂರು
ಕ್ರಿಕೆಟ್

1. ರಾಮಕ್ಷತ್ರಿಯ ಸಮಾಜ ಉಳ್ಳಾಲ

- ರಾಮಕ್ಷತ್ರಿಯ ಸಮಾಜ ಕಾಪು



































