ಕ್ರಿಯೇಟಿವ್ ಪುಸ್ತಕ ಮನೆ ಪುಟಗಳೊಂದಿಗೆ ಪಯಣ
ಮೂಡುಬಿದಿರೆ ಶಾಖೆಯ ಉದ್ಘಾಟನೆ
ಮೂಡುಬಿದಿರೆ: ಕ್ರಿಯೇಟಿವ್ ಪುಸ್ತಕ ಮನೆ ಪುಟಗಳೊಂದಿಗೆ ಪಯಣ ಇದರ ಮೂಡಬಿದಿರೆ ಶಾಖೆಯ ಉದ್ಘಾಟನೆಯು ಮೇ 5ರಂದು ಬೆಳಿಗ್ಗೆ 10 ಗಂಟೆಗೆ ಮೂಡುಬಿದಿರೆ ನಗರದ ಮುಖ್ಯಪೇಟೆಯ ಪಂಚರತ್ನ ಬಿಲ್ಡಿಂಗ್ ನಲ್ಲಿ ನೆರವೇರಲಿದೆ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹಾಗೂ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






































