ಕೊಡುಗೆಯಾಗಿ ನೀಡಿದ ಕಲಿಕಾ ಪರಿಕರಗಳು

Picture of RB NEWS

RB NEWS

Bureau Report

ಕಾರ್ಕಳ: ಹಿರ್ಗಾನ ಚಿಕ್ಕಲ್ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಬೆಟ್ಟು ದಿ . ಸುಂದರಿ ನಾರಾಯಣ ಶೆಟ್ಟಿ ಸ್ಮರಣಾರ್ಥ ಉಚಿತವಾಗಿ ಮತ್ತು ನಿರಂತರವಾಗಿ ಹತ್ತೊಂಬತ್ತು ವರ್ಷಗಳಿಂದ ಅವರ ಮಗ, ನಮ್ಮ ಶಾಲಾ ಹಳೆ ವಿದ್ಯಾರ್ಥಿ ಶ್ರೀನಾಥ್ ಶೆಟ್ಟಿ ಮುಂಬೈ ಇವರು ಕೊಡುಗೆಯಾಗಿ ನೀಡುವ ಲೇಖನ ಸಾಮಗ್ರಿ, ನೋಟ್ ಪುಸ್ತಕ, ಕೊಡೆ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷ ಸಂಜೀವ ಪೂಜಾರಿಯವರು ವಹಿಸಿದ್ದರು.

ಕಲಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಳೆದ 19 ವರ್ಷದಿಂದ ಕಲಿಕಾ ಪರಿಗಳನ್ನು ನೀಡುತ್ತಿರುವುದಕ್ಕೆ ನಾವೆಲ್ಲ ಅಭಾರಿಯಾಗಿದ್ದೇವೆ ಎಂದು ಹೇಳಿದರು.

ವೇದಿಕೆಯಲ್ಲಿ ನಿವೃತ್ತ ಅಧ್ಯಾಪಕ ಜನಾರ್ಧನ ಹೆಗ್ಡೆ , ತಾರಾನಾಥ ಶೆಟ್ಟಿ, ಯಕ್ಷ ಕಲಾರಂಗ (ರಿ) ಕಾರ್ಕಳ ಇದರ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಪಾಂಡಿ ಶ್ರೀ ವರ್ಮ ಜೈನ್, ಹಿರ್ಗಾನ ಗ್ರಾ. ಪಂ. ಸದಸ್ಯರಾದ ದಿನೇಶ್ ಪೂಜಾರಿ, ಮಾಜಿ ಉಪಾಧ್ಯಕ್ಷೆ ಭವ್ಯ ಉಪಸ್ಥಿತರಿದ್ದರು.

ಕೊಡುಗೆ ನೀಡಿದ ಶ್ರೀನಾಥ್ ಶೆಟ್ಟಿ ಉದ್ಯಮಿ ಮುಂಬೈ ಇವರನ್ನು ಗೌರವಿಸಲಾಯಿತು.

ಮುಖ್ಯ ಶಿಕ್ಷಕ ಉದಯ ಶೆಟ್ಟಿ ಬಿ ಸ್ವಾಗತಿಸಿ ನಿರೂಪಿಸಿದರು. ಸಹ ಶಿಕ್ಷಕಿ ಅಶ್ವಿನಿ ವಂದನಾರ್ಪಣೆಗೈದರು. ಸಹ ಶಿಕ್ಷಕರಾದ ವಿಜಯಕುಮಾರ್, ಆಶಾ, ಯಕ್ಷಗಾನ ಗುರುಗಳು ವೆಂಕಟೇಶ್ ನಾಯಕ್, ಸತ್ಯಾ ಸಹಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top