ಕೃಷ್ಣನಗರಿಯಲ್ಲಿ ಪ್ರೇಕ್ಷಕರ ಮನಗೆದ್ದ ವಯೋಲಿನ್ ವಾದನ
ಉಡುಪಿ :ಖ್ಯಾತ ಬಾಲ ಕುಮಾರಿ ಹಾಗೂ ಗಂಗಾ ಶಶಿಧರನ್ ರವರ ವಯೋಲಿನ್ ವಾದನ ಕಛೇರಿ ಬುಧವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜರಗಿತು.
ಅಪಾರ ಜನಪ್ರಿಯತೆ ಪಡೆದುಕೊಂಡಿರುವ ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಗೌರವಿಸಿ ಹರಸಿದರು .
ಗುರು ವಿದ್ವಾನ್ ಶ್ರೀ ಅನುರೂಪ್ ಹಾಗೂ ಪಕ್ಕವಾದ್ಯದಲ್ಲಿ ಸಹಕರಿಸಿದ ಎಲ್ಲ ಕಲಾವಿದರನ್ನು ಇದೇ ಸಂದರ್ಭದಲ್ಲಿ ಶ್ರೀಗಳು ಪ್ರಸಾದ ನೀಡಿ ಗೌರವಿಸಿದರು.
ರಾಜಾಂಗಣದಲ್ಲಿ ಜರುಗಿದ್ಧ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು.

ಉಡುಪಿಯ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಹರಿಶ್ಚಂದ್ರ ರವರು ತಮ್ಮ ಆಸ್ಪತ್ರೆಯ 30 ನೇ ವರ್ಧಂತ್ಯುತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಆಸ್ಪತ್ರೆಯ ವತಿಯಿಂದ ಗುರು ಹಾಗೂ ಶಿಷ್ಯೆಯನ್ನು ಅದ್ದೂರಿಯಾಗಿ ಅಭಿನಂದಿಸಲಾಯಿತು.
ಶ್ರೀ ಮಠದ ವತಿಯಿಂದ ಎಂ. ಹರಿಶ್ಚಂದ್ರ, ಲಕ್ಷ್ಮಿ ದಂಪತಿಗಳನ್ನು ಪರ್ಯಾಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದ ನೀಡಿ ಅಭಿನಂದಿಸಿದರು.
ಕುಮಾರಿ ಗಂಗಾ ಳಿಗೆ ಭಗವದ್ಗೀತೆಯನ್ನು ಬರೆಯುವ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿ ಉಜ್ವಲ ಭವಿಷ್ಯವನ್ನು ಹಾರೈಸಿದರು.






































