ಕುಂಬಳೆ ನಾರಾಯಣ ಗಟ್ಟಿ ಮಾಸ್ತರ್ ಗೆ ಕ.ಸಾ.ಪ ಕೇರಳ ಘಟಕದಿಂದ ಗೃಹಸನ್ಮಾನ


ಕುಂಬಳೆ: ನವತಿಗೆ ಕಾಲೂರುತ್ತಿರುವ ಗಡಿನಾಡು ಕಾಸರಗೋಡಿನ ಹಿರಿಯ ಕನ್ನಡ ಧುರೀಣ, ಹೋರಾಟಗಾರ, ಪಂಡಿತ ಪರಂಪರೆಯ ಕೊಂಡಿ ಕುಂಬಳೆಯ ನಾರಾಯಣ ಗಟ್ಟಿ ಮಾಸ್ತರ್ ಅವರನ್ನು ಮನೆಗೆ ತೆರಳಿ ಗೌರವಿಸಿ ಸನ್ಮಾನ ಸಹಿತ ಅಭಿವಂದಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ನೇತೃತ್ವದಲಿ “ಪರಿಷತ್ತಿನ ನಡಿಗೆ ಸಾಧಕರ ಕಡೆಗೆ” ಎಂಬ ಯೋಜನೆಯಂತೆ ನಡೆಯುವ ಅಭಿಯಾನದಂಗವಾಗಿ ಸನ್ಮಾನ ನಡೆಯಿತು.
ನಾರಾಯಣ ಗಟ್ಟಿ ಮಾಸ್ತರ್ ನಿವೃತ್ತ ಅಧ್ಯಾಪಕರಾಗಿದ್ದು ಕರ್ನಾಟಕ ವಿಲೀನೀಕರಣ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಕಾಸರಗೋಡಿನ ಶತಮಾನದ ಸಾಂಸ್ಕೃತಿಕ ಸ್ಥಿತ್ಯಂತರ, ಪಲ್ಲಟಗಳನ್ನು ಕಂಡವರು ಮತ್ತು ನೆಲದ ಚರಿತ್ರೆಯ ಬಗೆಗೆ ಇದಮಿತ್ಥಂ ಎಂಬಂತೆ ಅರಿವು ಹೊಂದಿದ ಜ್ಞಾನಿ.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸಾಹಿತ್ಯ ಪರಿಷತ್ತಿನ ಯೋಜನೆ ಮತ್ತು ಅಭಿಯಾನದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ, ಲೇಖಕ ಎಂ. ನಾ. ಚಂಬಲ್ತಿಮಾರ್ ನಾರಾಯಣ ಗಟ್ಟಿ ಮಾಸ್ತರ್ ಕುರಿತು ಅಭಿನಂಧನಾ ಭಾಷಣ ಮಾಡಿದರು.
ಕ.ಸಾ.ಪ. ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಕತೆಗಾರ್ತಿ ಸ್ನೇಹಲತಾ ದಿವಾಕರ್, ಕವಯತ್ರಿ ದಿವ್ಯಿ ಗಟ್ಟಿ ಪರಕ್ಕಿಲ ಶುಭಾಶಂಸನೆಗೈದರು.
ಪರಿಷತ್ತಿನ ಪದಾಧಿಕಾರಿ ರಾಮಚಂದ್ರ ಭಟ್ ಧರ್ಮತ್ತಡ್ಕ ಉಪಸ್ಥಿತರಿದ್ದರು. ಶೇಖರ ಶೆಟ್ಟಿ ಬಾಯಾರು ವಂದಿಸಿದರು.






































