ಕಾರ್ಕಳ: ಮಹಿಳೆ ಸಾವು ; ಆಸ್ಪತ್ರೆಯ ಮುಂದೆ ಆಕ್ರೋಶಗೊಂಡ ಬಂಧುಗಳು
ಕಾರ್ಕಳ : ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ಹೊರತೆಗೆಯಲು ಮುಂದಾದಾಗ ಮಹಿಳೆ ಸಾವಿಗೀಡಾಗಿದ ಘಟನೆ ನಗರದ ಸ್ಪಂದನಾ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಬಂಧುಗಳು ಆಸ್ಪತ್ರೆಯ ಮುಂದೆ ಜಮಾವಣೆಗೊಂಡು ತಮ್ಮ ಅಕ್ಷೇಪ ವ್ಯಕ್ತ ಪಡಿಸುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ.

ಬುಧವಾರ ಸಂಜೆ ವೇಳೆಗೆ ಈ ಘಟನೆ ನಡೆದಿದೆ.
ಸಾಣೂರು ಮೂಲದ ಮಹಿಳೆ ಜುಬೇದಾ(54) ಎಂಬವರು ಪ್ರಾಣತೆತ್ತ ಮಹಿಳೆ.
ಸ್ಪಂದನ ಆಸ್ಪತ್ರೆಯ ದಾವತ್ ಹೋಟೆಲ್ ಪರಿಸರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜುಬೇದಾ ಅವರು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದು ಘಟನೆ ಕಾರಣವೆನ್ನಲಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆ ಮೃತ ಪಟ್ಟಿದ್ದರು.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯು ಬುಧವಾರ ಮಧ್ಯಾಹ್ನ ಕಾರ್ಕಳ ನಗರದ ಸ್ಪಂದನಾ ಆಸ್ಪತ್ರೆಗೆ ದಾಖಲಾಗಿದ್ದರು. ಡಾ.ರಹಮತುಲ್ಲಾ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದು (ಹರ್ನಿಯಾ) ಬೆಳೆದ ಗಡ್ಡೆಯಿಂದಾಗಿ ದೊಡ್ಡ ಕರಳು ಬ್ಲಾಕ್ ಉಂಟಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆ ಹೊರ ತೆಗೆದು ದೊಡ್ಡ ಕರಳು ಸರಿಪರಿಸುತ್ತಿದ್ದಂತೆ ತೀವ್ರ ರಕ್ತಸ್ತಾವ ಉಂಟಾಗಿ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದರು.














