ಕಾರ್ಕಳ: ಮಹಿಳೆ ಸಾವು ; ಆಸ್ಪತ್ರೆಯ ಮುಂದೆ ಆಕ್ರೋಶಗೊಂಡ ಬಂಧುಗಳು

Picture of RB NEWS

RB NEWS

Bureau Report

ಕಾರ್ಕಳ : ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ಹೊರತೆಗೆಯಲು ಮುಂದಾದಾಗ ಮಹಿಳೆ ಸಾವಿಗೀಡಾಗಿದ ಘಟನೆ ನಗರದ ಸ್ಪಂದನಾ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಬಂಧುಗಳು ಆಸ್ಪತ್ರೆಯ ಮುಂದೆ ಜಮಾವಣೆಗೊಂಡು ತಮ್ಮ ಅಕ್ಷೇಪ ವ್ಯಕ್ತ ಪಡಿಸುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ.

ಬುಧವಾರ ಸಂಜೆ ವೇಳೆಗೆ ಈ ಘಟನೆ ನಡೆದಿದೆ.
ಸಾಣೂರು ಮೂಲದ ಮಹಿಳೆ ಜುಬೇದಾ(54) ಎಂಬವರು ಪ್ರಾಣತೆತ್ತ ಮಹಿಳೆ.

ಸ್ಪಂದನ ಆಸ್ಪತ್ರೆಯ ದಾವತ್ ಹೋಟೆಲ್ ಪರಿಸರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜುಬೇದಾ ಅವರು‌ ತೀವ್ರ ಹೊಟ್ಟೆ‌ನೋವಿನಿಂದ ಬಳಲುತ್ತಿದ್ದರು. ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದು ಘಟನೆ ಕಾರಣವೆನ್ನಲಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆ ಮೃತ ಪಟ್ಟಿದ್ದರು.

ಇದರಿಂದ ಆಕ್ರೋಶಿತ ಗೊಂಡ ಮಹಿಳೆಯ ಬಂಧುಗಳು ಹಾಗೂ ಗ್ರಾಮಸ್ಥರು ಆಸ್ಪತ್ರೆಯ ಮುಂಭಾಗ ನೆರೆದು ಆಸ್ಪತ್ರೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ಹದಗೆಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಅಗಮಿಸಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿದ್ದಾರೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top