ಕಾರ್ಕಳ: ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಉಡುಪಿ ಅಜ್ಜರಕಾಡು ಸರಕಾರಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ಇವರ ಸಹಯೋಗದೊಂದಿಗೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಜುಲಾಯಿ 07ರಂದು ಜರಗಲಿದೆ.
ಕಾರ್ಕಳ ಸಾಲ್ಮರ ಗುರುದೀಪ್ ಗಾರ್ಡನ್ ನಲ್ಲಿ ಅಂದು ಬೆಳಿಗ್ಗೆ 9:೦೦ರಿಂದ ಮಧ್ಯಾಹ್ನ 2:00ರವರೆಗೆ ಕಾರ್ಯಕ್ರಮ ಜರುಗಲಿದೆ.
ರಕ್ತದಾನ ಯಾರು ಮಾಡಬಹುದು ?
- ಹೆಣ್ಣು ಗಂಡೆಂಬ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
- ರಕ್ತದಾನಿಯ ದೇಹದ ತೂಕ 50 ಕೆಜಿ ಗಿಂತ ಹೆಚ್ಚಿರಬೇಕು.
→ ರಕ್ತದಲ್ಲಿ ಹೀಮೋಗ್ಲೋಜನ್ ಅಂಶವು 12.5ಗ್ರಾಂ ಗಿಂತ ಕಡಿಮೆ ಇರಬಾರದು
- ಆರೋಗ್ಯವಂತ ಗಂಡಸರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
- ಒಂದು ಬಾರಿಗೆ ಕೇವಲ 350 ಎಂ.ಎಲ್ ರಕ್ತವನ್ನು ಮಾತ್ರ ತೆಗೆಯುವುದು.
ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು:
- ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ.
- ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುವುದು.
- ದೇಹದಲ್ಲಿ ಹೊಸ ರಕ್ತದ ಉತ್ಪತ್ತಿಯಾಗುವುದು.
- ಇತರರ ಜೀವ ಉಳಿಸಿದಂತಾಗುವುದು.
ರಕ್ತದಾನಿಗಳು ತಮ್ಮ ಹೆಸರು ನೊಂದಾಯಿಸಿ ರಕ್ತದಾನ ಮಾಡಬಹುದು. ಪ್ರತಿಯೊಂದು ಹನಿ ರಕ್ತವು ಮತ್ತೊಂದು ಜೀವ ರಕ್ಷಣೆಗೆ ಸಾಧ್ಯವಾಗುತ್ತದೆ ಎಂದು ಕಾರ್ಕಳ ಟೈಗರ್ಸ್ ಮುಖ್ಯಸ್ಥ ಬೋಳ ಪ್ರಶಾಂತ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































