ಕಾರ್ಕಳ : ಅತ್ತೂರು ಪರ್ಪಲೆಗಿರಿಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ ಸಪರಿವಾರ ದೈವಗಳ ಗುಡಿಗಳು ; ಮೇ 17ರಿಂದ 19ರ ವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ

Picture of RB NEWS

RB NEWS

Bureau Report

ಕರಿಯಕಲ್ಲಿನ ಮೇಲೆ ತಲೆಯೆತ್ತಿ ನಿಂತಿರುವ ಸಂಸ್ಕೃತಿ ಸಂಸ್ಕಾರಗಳನ್ನು ಎಲ್ಲೆಡೆ ಪಸರಿಸಿದ ಖ್ಯಾತಿವೆತ್ತ ಕಾರ್ಕಳ ಧರ್ಮಕಾರ್ಯದ ಪುಣ್ಯಭೂಮಿ.

ಇಲ್ಲಿರುವ ದೇವಸ್ಥಾನ, ದೈವಸ್ಥಾನ ಗಳು ವಿಶ್ವದ ಎಲ್ಲೆಡೆ ಕೂಡ ಹೆಸರನ್ನು ಪಡೆದವುಗಳು. ಕಾರ್ಕಳದ ಎತ್ತರದ ಪ್ರದೇಶದಲ್ಲಿ ಒಂದೆಡೆ 1432ನೇ ಸಾಲಿನಲ್ಲಿ ಬೃಹತ್ ಗೋಮಟೇಶ್ವರನ ಮೂರ್ತಿ ಸ್ಥಾಪನೆಯಾದರೆ ಇನ್ನೊಂದೆಡೆ ಗೋಮಟೇಶ್ವರ ಬೆಟ್ಟದಿಂದ ಸ್ವಲ್ಪವೇ ದೂರವಿರುವ ಪರ್ಪಲೆ ಬೆಟ್ಟ ಋಷಿ ಮುನಿಗಳ ತಪೋಭೂಮಿ. ಇಲ್ಲಿ ಮುನಿ ಗಳು ಯಾವ ರೀತಿಯಲ್ಲಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಇಲ್ಲಿರುವ ಗುಹೆಗಳೇ ಸಾಕ್ಷಿ ಹೇಳುತ್ತವೆ. ಈ ಗುಹೆಯೊಳಗೆ ಹೊಕ್ಕಾಗ ಆಗುವ ಮನಶಾಂತಿ, ಏಕಾಗ್ರತೆ ಹಾಗೂ ಸುಂದರ ಪರಿಸರ ಇವೆಲ್ಲವೂ ಕೂಡ ಇಲ್ಲಿ ಸಾವಿರಾರು ವರ್ಷಗಳಿಂದಲೂ ಧರ್ಮ ಪ್ರಭಾವನೆ ಆಗುತ್ತಲೇ ಬರುತ್ತಿತ್ತು ಎಂಬು ದರ ಸ್ಪಷ್ಟ ನಿದರ್ಶನವಾಗಿದೆ.
1432ರಲ್ಲಿ ಕಾರ್ಕಳದಲ್ಲಿ ಗೋಮಟೇಶ್ವರನ ಬೃಹತ್ ಮೂರ್ತಿ ಸ್ಥಾಪನೆ ಆದ ಬಳಿಕ ಈ ವಿಗ್ರಹವನ್ನು ಕೆತ್ತಿದ ಬೀರ ಕಲ್ಕುಡನಿಗೆ ಉಡುಗೊರೆ ರೂಪದಲ್ಲಿ ಪರ್ಪಲೆಯ ಭೂಮಿಯನ್ನು ಉಡುಗೊರೆಯಾಗಿ ನೀಡುವುದಾಗಿ ಅರಸರು ಆಶ್ವಾಸನೆ ನೀಡಿದ್ದರಂತೆ.
ವಿಶೇಷ ಶಕ್ತಿಗಳನ್ನು ಹೊಂದಿದ್ದ ಕಲ್ಕುಡ ಹಾಗೂ ಆತನ ತಂಗಿ ಕಲ್ಲುರ್ಟಿ ತಿರುಪತಿ ಯಾತ್ರೆ ಮುಗಿಸಿ ಬಂದ ಬಳಿಕ ಪರ್ಪಲೆ ಗುಡ್ಡಕ್ಕೆ ಕಾಲಿಟ್ಟು ಇಲ್ಲಿಂದಲೇ ಮೂಡುಭಾಗದಲ್ಲಿ ಕಾಣುವ ಅರಸರ ಮನೆಗೆ ದೃಷ್ಟಿ ನೆಟ್ಟರು ಎಂದು ಜನಪದೀಯ ಐತಿಹ್ಯಗಳಿವೆ. ಹೀಗಾಗಿ ಇಂದಿಗೂ ಕೂಡ ಪರ್ಪಲೆ ಗಿರಿ ಬಹಳ ಪ್ರಾಮುಖ್ಯತೆ ಪಡೆದ ಬೆಟ್ಟವಾಗಿದೆ. ಇಂತಹ ಬೆಟ್ಟದ ಪುಣ್ಯ ಭೂಮಿಯು ಈ ತಲೆ ಮಾರಿನ ಭಕುತ ಜನರ ಭಕ್ತಿಗೆ ಪೂರಕವಾಗಿ ಪರ್ಪಲೆ ಕ್ಷೇತ್ರವಾಗಿ ತಲೆ ಎತ್ತಿ ನಿಲ್ಲಲು ಪ್ರಾರಂಭವಾಗಿದೆ.
ಪರ್ಪಲೆ ಪ್ರದೇಶವೇ ಒಂದು ಸುಂದರ ಪರಿಸರವಾಗಿದೆ. ಎತ್ತರದ ಪ್ರದೇಶದ ಮೇಲೆ ಹೋದವರಿಗೆ ಮಾತ್ರ ಈ ಬೆಟ್ಟದ ಅರಿವು ಮೂಡಲು ಸಾಧ್ಯ. ಈ ಬೆಟ್ಟದ ಮೇಲಕ್ಕೆ ಹೋದಾಗ ಸುತ್ತ ಮುತ್ತಲು ಕಾಣುವ ಹಲವಾರು ನಗರಗಳು ಬೆಳಗ್ಗಿನ ಹೊತ್ತು ಹಾಗೂ ಸಾಯಂ ಕಾಲದ ಹೊತ್ತು ಕಾಣುವ ಸಮುದ್ರ ಹಾಗೂ ಸೂರ್‍ಯನ ಸುಂದರ ರೂಪ ಇಲ್ಲಿ ಬೀಸುವ ತಂಪಾದ ಗಾಳಿ ಇವೆಲ್ಲವೂ ಏಕಾಗ್ರತೆ ಹಾಗೂ ಧರ್ಮ ಇವೆಲ್ಲವೂ ಇಲ್ಲಿ ಇರುವ ಪುಣ್ಯದ ಪ್ರತೀಕವಾಗಿದೆ.

ಇಂತಹ ಸುಂದರದ ಪ್ರದೇಶದಲ್ಲಿ ಕಲ್ಕುಡ ಹಾಗೂ ಸಪರಿವಾರ ದೈವಗಳ ಗುಡಿ ನಿರ್ಮಾಣದ ಕಾರ್ಯ ಭರದಿಂದ ಸಾಗಿ ಸಂಪೂರ್ಣ ಗೊಳ್ಳುತ್ತಿದೆ

ದಾನಿಗಳು ನೀಡುತ್ತಿರುವ ಸಹಕಾರ ದಿಂದ ದೈವದ ಗುಡಿಗಳ ನಿರ್ಮಾಣಕ್ಕೆ ಕೆತ್ತನೆ ಕಾರ್ಯ ಸಂಪೂರ್ಣ ಗೊಳ್ಳುತ್ತಿದೆ.

ಈ ಕ್ಷೇತ್ರದಲ್ಲಿನ ಒಂದು ವಿಚಾರ ಮಾತ್ರ ಬಹಳ ವಿಶೇಷವಾದುದು. ಕಲ್ಕುಡ ಗುಡಿಯನ್ನು ದಾನಿಗಳ ಸಹಕಾರದಿಂದ ಹಾಗೂ ಶಿಲ್ಪಿಗಳ ಸಹಕಾರದಿಂದಲೇ ನಿರ್ಮಾಣ ಮಾಡಲಾಗುತ್ತಿರುವುದು ಮಾತ್ರ ಧಾರ್ಮಿಕ ವಿಶೇಷವಾಗಿದೆ.
ವೇದಮೂರ್ತಿ ಶ್ರೀ ಕೇಂಜ ಶ್ರೀಧರ ತಂತ್ರಿಗಳು, ಕುತ್ಯಾರು ಇವರ ಮಾರ್ಗ ದರ್ಶನದಲ್ಲಿ ಪೂಜಾದಿ ಕಾರ್ಯಗಳು, ದೇವತಾ ಕಾರ್ಯಗಳು ಆರಂಭವಾಗಿದೆ. ಪ್ರಮಲ್ ಕುಮಾರ್ ವಾಸ್ತು ವಿನ್ಯಾಸ ನೀಡಿದ್ದಾರೆ.
ಪ್ರತಿ ತಿಂಗಳ ಸಂಕ್ರಾಂತಿಯ ದಿನ ಭಕ್ತರು ಈ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿರುವ ಅನುಭವ ಹಲವರಿಗೆ ಆಗಿದ್ದು ಇದೊಂದು ವಿಶೇಷ ಕ್ಷೇತ್ರವಾಗಿ ರೂಪುಗೊಳ್ಳುವ ಲಕ್ಷಣವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಜನರ ಸಹಕಾರವನ್ನು ಸಮಿತಿ ಕೋರಿದೆ.
ಈ ಬೆಟ್ಟ ಅತೀ ಎತ್ತರವಾದ ಬೆಟ್ಟ ವಾದುದರಿಂದ ಇಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಹಳ ತ್ರಾಸದಾಯಕ. ಹೀಗಾಗಿ ಎಲ್ಲಾ ಭಕ್ತರು ಒಗ್ಗೂಡಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡ ಬೇಕಿದೆ.

ಕಲ್ಲಿನ ವ್ಯಾಪಾರಿಗಳು ಕಲ್ಲು, ಶಿಲ್ಪಿಗಳು ಕೆತ್ತನೆ ಕೆಲಸ, ಕಲ್ಲಿನ ವ್ಯಾಪಾರಿಗಳು ಕಲ್ಲನ್ನು ತುಂಡರಿಸುವ ಕೆಲಸ, ಮರದ ಕೆತ್ತನೆಯ ಶಿಲ್ಪಿಯ ಉದಾರ ಕೊಡುಗೆ, ಕ್ರೇನ್‌ಗಳ ಉಚಿತ ಸೇವೆ, ಲಾರಿ ಮುಂತಾದ ಉಚಿತ ಸೇವೆ ಸೇರಿದಂತೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಗರ್ಭಗುಡಿಯ ಕೆಲಸ ಅವರವರ ವೃತ್ತಿ ವ್ಯಾಪಾರಿಗಳಿಂದ ಉಚಿತವಾಗಿ ನಡೆಯುತ್ತಿದೆ. ಉಳಿದಂತೆ ಸುತ್ತು ಪೌಳಿಯ ಕೆಲಸ, ಅಂಗಣಕ್ಕೆ ನೆಲಹಾಸು, ದೀಪಗೋಪುರ, ಕೊಡಿಯಡಿಗಳನ್ನು ಊರ ಪರವೂರ ದಾನಿಗಳು ನಿರ್ಮಿಸಿ ಕೊಟ್ಟಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top