ಕಾರ್ಕಳದಲ್ಲಿ ಶೀಘ್ರದಲ್ಲೇ ಶ್ರೀರಾಮ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ)ಕುಂದಾಪುರ ಶಾಖೆ ಕಾರ್ಯಾರಂಭ
ಕಾರ್ಕಳ : ರಾಮಕ್ಷತ್ರಿಯ ಸಮಾಜದ ಶ್ರೀರಾಮ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಕುಂದಾಪುರ ಇದರ ನೂತನ ಶಾಖೆಯನ್ನು ಕಾರ್ಕಳದ ಕೋಟೆ
ಶ್ರೀ ಮಾರಿಯಮ್ಮ ದೇವಳದ ಸಮೀಪದ ಕಟ್ಟಡದಲ್ಲಿ ಅತೀ ಶೀಘ್ರದಲ್ಲಿ ಕಾರ್ಯಾರಂಭಿಸುವ ಕುರಿತು ಕಾರ್ಕಳ ಬಂಡೀಮಠ ಶ್ರೀರಾಮ ಸಭಾಭವನದಲ್ಲಿ ನಡೆದ ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಸಮಿತಿ ಹಾಗೂ ಸಮಾಜಬಾಂಧವರ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶ್ರೀರಾಮ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ)ನ ಅಧ್ಯಕ್ಷ ನಾಗರಾಜ ಕಾಮಧೇನು, ಉಪಾಧ್ಯಕ್ಷ ಸತೀಶ್ ಕಾವೇರಿ, ನಿರ್ದೇಶಕರಾದ ಶ್ರೀಧರ್ ಪಿ.ಎಸ್ ಮತ್ತು ಸೂರ್ಯಕಾಂತ್ ಧಫೇದಾರ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಪ್ರಸನ್ನ ಕೆ.ಬಿ., ಉಪಾಧ್ಯಕ್ಷ ಅಂಬಾಪ್ರಸಾದ್.ಪಿ, ಉಪಸ್ಥಿರಿದ್ದರು.
ಶ್ರೀರಾಮ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗರಾಜ ಕಾಮಧೇನು ಪ್ರಾಸ್ತಾವಿಕವಾಗಿ ಮಾತನಾಡಿ ಸೊಸೈಟಿಯ ವ್ಯವಹಾರದ ಕುರಿತು ಮಾಹಿತಿ ನೀಡಿ, ಸಮಾಜದಬಾಂಧವರೆಲ್ಲರೆಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಉಪಾಧ್ಯಕ್ಷ ಸತೀಶ್ ಕಾವೇರಿ ಮತ್ತು ನಿರ್ದೇಶಕ ಶ್ರೀಧರ್ ಪಿ.ಎಸ್ ರವರು ಸೊಸೈಟಿಯ ವ್ಯವಹಾರದ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
ರಾಮಕ್ಷತ್ರಿಯ ಸಂಘ, ಕಾರ್ಕಳದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಕಾರ್ಕಳದಲ್ಲಿ ಇತರ ಸಣ್ಣ ಸಣ್ಣ ಸಮುದಾಯಗಳ ಬ್ಯಾಂಕ್, ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದೆ. ನಮ್ಮ ಸಮಾಜದ ಈ ರೀತಿಯ ವ್ಯವಹಾರ ಸಂಸ್ಥೆ ಬೇಕೆಂಬ ಆಶಯ ಕಳೆದ ಹಲವಾರು ವರ್ಷಗಳಿಂದ ನಮ್ಮದಾಗಿತ್ತು. ಅದನ್ನು ಈ ನೂತನ ಸಂಸ್ಥೆಯ ಕಾರ್ಯಾರಂಭದಿಂದ ನಿವಾರಣೆಯಾಗಲಿದೆ ಎಂದು ಹೇಳಿದ ಅವರು ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ, ವ್ಯವಹಾರ ನಡೆಸಿ ಕಾರ್ಕಳದ ನಮ್ಮ ಸೊಸೈಟಿ ರಾಜ್ಯದಲ್ಲೇ ಅತ್ಯಂತ ಉತ್ತಮ ಸೊಸೈಟಿ ಹಾಗೂ ರಾಜ್ಯದಲ್ಲೇ ಮಾದರಿ ಸೊಸೈಟಿಯನ್ನಾಗಿ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದರು.
ಸೊಸೈಟಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಹೇಶ್ ರಾವ್ ಬೈಲೂರು, ರವಿಕಲಾ ಮೇಗಿನಮನೆ ಬೈಲೂರು, ಸುಕೇಶ್.ಎನ್.ರಾವ್ ಬೈಲೂರು ಭಾಗವಹಿಸಿದರು.
ಸಭೆಯಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಬಿ.ಪ್ರದೀಪ್ ಕುಮಾರ್ ನಿಟ್ಟೆ, ಕಾರ್ಕಳ ಶ್ರೀ.ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರ ಸುರೇಶ್ ಹವಾಲ್ದಾರ್ ರವರ ತಾಯಿ ಸುಂದರಿ ಬಾಯಿ, ಕಾರ್ಕಳ ಶಿರ್ಲಾಲುವಿನ ಶೇಖರ್ ಶೇರ್ವೆಗಾರ್ ಹಾಗೂ ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ರಾಮಕ್ಷತ್ರಿಯ ಸಂಘ ಜಿಲ್ಲಾಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಇವರ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಗೌರವ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ನಿಧಿ ಪ್ರಾರ್ಥಿಸಿದರು.ಶಿಕ್ಷಕ ಸಂಜಯ್ ಕುಮಾರ್ ರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜೊತೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಗತ ಸಭೆಯ ವರದಿ ಓದಿದರು.
ಕಾರ್ಯದರ್ಶಿ ಪ್ರವೀಣ್.ಕೆ ವಂದಿಸಿದರು.
ಬಿ. ಮನಮೋಹನ ರಾವ್ ನಿರೂಪಿಸಿದರು.
ಕೊನೆಯಲ್ಲಿ ಶಾಂತಿಮಂತ್ರ ಪಠಿಸಲಾಯಿತು.





















