ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್

Picture of RB NEWS

RB NEWS

Bureau Report

ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಆಯ್ಕೆಯಾಗಿದ್ದಾರೆ.

ಕಳೆದ 29 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ತಾರನಾಥ ಕಾಪಿಕಾಡ್ ಅವರು 2017 – 18 ರ ಅವಧಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.

ತುಳು ಪರಿಷತ್ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ತುಳು ಪರಿಷತ್ ಮೂಲಕ 2919 ರಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನೆಗೊಳಿಸಿದ್ದಾರೆ.

2016 ರಲ್ಲಿ ತುಳು ಅಕಾಡೆಮಿಗಾಗಿ ತುಳು ಲಿಪಿ ಸಂಶೋಧಕ ವೆಂಕಟರಾಜ ಪುಣಿಂಚತ್ತಾಯರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣ.

ಕರ್ನಾಟಕ ತುಳು ಅಕಾಡೆಮಿಗೆ ಮೊಟ್ಟ ಮೊದಲ ಮೊದಲ ಬಾರಿಗೆ ಪತ್ರಕರ್ತರೊಬ್ಬರು ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೀರ್ತಿ ತಾರಾನಾಥ ಕಾಪಿಕಾಡು ಅವರಿಗೆ ಸಲ್ಲುತ್ತದೆ.

ತುಳು ತುಡರ್ ಹೆಸರಿನಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ 50 ಕ್ಕೂ ಹೆಚ್ಚು ಸಂದರ್ಶನ ಆಧಾರಿತ ವಿಡಿಯೋ ಡಾಕ್ಯೂಮೆಂಟರಿ ನಿರ್ಮಾಣ ಮಾಡಿದ್ದಾರೆ.

ಮಂಗಳೂರು ವಿ.ವಿ.ಯಲ್ಲಿ ಪದವಿಯಲ್ಲಿ ತುಳು ಸಬ್ಜೆಕ್ಟ್ ಹಾಗೂ ತುಳು ಎಂ.ಎ. ಆರಂಭಗೊಳ್ಳುವಲ್ಲಿ 2018 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಎ.ಸಿ.ಭಂಡಾರಿ ಅವರ ಜೊತೆಗೂಡಿ ಸರಕಾರ ಹಾಗೂ ವಿಶ್ವವಿದ್ಯಾಲಯದ ಜೊತೆಗೆ ಸಂವಹನ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

2017 ಹಾಗೂ 2018 ರಲ್ಲಿ ತುಳು ಅಕಾಡೆಮಿ ಆಯೋಜಿಸಿದ ಹಳೆಯ ಕಾಲದ ತುಳು ನಾಟಕಗಳ ನಾಟಕೋತ್ಸವದಲ್ಲಿ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದಾರೆ.

ಜನವಾಹಿನಿ ದಿನಪತ್ರಿಕೆ , ಸಂಜೆ ವಾಣಿ, ಟಿವಿ ನೈನ್ , ಜನಶ್ರೀ ವಾಹಿನಿ , ವಿ ಫೋರ್ ವಾಹಿನಿಯಲ್ಲಿ ಇವರು ಪತ್ರಕರ್ತನಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top