ಕದ್ರಿ ಶ್ರೀ ಕ್ಷೇತ್ರದಲ್ಲಿ ಯುವಕನ ಅವಾಂತರ

Picture of RB NEWS

RB NEWS

Bureau Report

ಮಂಗಳೂರು : ಮಂಗಳೂರಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಕದ್ರಿ ಯಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ಬೈಕ್ ಚಲಾಯಿಸಿಕೊಂಡು ನೇರ ದೇವಸ್ಥಾನದ ಪ್ರಾಂಗಣದ ಒಳಗೆಯೇ ಯುವಕ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದಲ್ಲಿ ರಂಪಾಟ ಮಾಡಿದ್ದಾನೆ. ಇನ್ನು ಇದನ್ನೂ ಪ್ರಶ್ನೆ ಮಾಡಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ.


ಅಷ್ಟೇ ಅಲ್ಲದೆ ದೈವದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ಮೆರೆದಿದ್ದಾನೆ. ದೇವಸ್ಥಾನದ ಮಂಟಪದ ಮೇಲೇರಿ ಛಾವಣಿಗೂ ಹಾನಿ ಮಾಡಿ, ದಾಂಧಲೆ ನಡೆಸಿದ್ದ ಯುವಕನನ್ನ ಸ್ಥಳೀಯರು ಕಟ್ಟಿ ಹಾಕಿದ್ದರು.


ಸದ್ಯ ಘಟನೆ ಬಗ್ಗೆ ಕದ್ರಿ ಠಾಣೆಗೆ ದೇವಸ್ಥಾನದ ಮುಖ್ಯಾಧಿಕಾರಿ ದೂರು ನೀಡಿದ್ದು, ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಯುವಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top