ಏಕಾಏಕಿ ನಿಲುಗಡೆಗೊಂಡ ಬಸ್ಸು: ಸ್ಕೂಟರ್ ಸವಾರ ಗಾಯ
ಕಾರ್ಕಳ: ಕಾರ್ಕಳ ಕ್ರೈಸ್ಟ್ ಕಿಂಗ್ ಶಾಲೆಯ ಸ್ಕೂಲ್ ಬಸ್ಸಿಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಅಜೆಕಾರಿನ ನೂಜಿಗುರಿ ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮುನಿಯಾಲಿನಿಂದ ಕಾರ್ಕಳಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನೂಜಿಗುರಿ ಎಂಬಲ್ಲಿ ಮಕ್ಕಳನ್ನು ಹತ್ತಿಸಲು ನಿಲ್ಲಿಸಿದಾಗ ಹಿಂಬದಿಯಿಂದ ಬಂದ ಸ್ಕೂಟರ್ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಸವಾರ ಸುರೇಶ್ ಗಾಯಗೊಂಡಿದ್ದಾರೆ.
ಚಾಲಕ ಯಾವುದೇ ಸೂಚನೆ ನೀಡದೇ ಬಸ್ಸನ್ನು ಹಠಾತ್ತಾಗಿ ರಸ್ತೆಯಲ್ಲೇ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ.
ಅಜೆಕಾರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.












