ಬಂಟ್ವಾಳ: ವೀರಕಂಬ ಗ್ರಾಮದ ಗ್ರಾಮ ದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಊರ ಪರವೂರ ಭಕ್ತಾದಿಗಳ ಕೂಡುವಿಕೆಯಲ್ಲಿ ವಿಜೃಂಭಣೆಯಿಂದ ಜರಗಿತು.
ಎಪ್ರಿಲ್ 7 ರ ರಾತ್ರಿ ಗಿಳಿಕಿಂಜ ಭಂಡಾರ ಮನೆಯಿಂದ ದೈವದ ಬಂಡಾರ ಬಂದು ಹೂವಿನ ಪೂಜಾ ಕಾರ್ಯಕ್ರಮ ಜರಗಿತು.
ಬಳಿಕ ಉತ್ಸವ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಇನಿ ಅತುoಡ ಎಲ್ಲೆ” ತುಳು ಹಾಸ್ಯಮಯ ಸಂಸಾರಿಕ ನಾಟಕವು ಕಂಬಳ ಗದ್ದೆ ವಲಸರಿ ಜರಗಿತು.
ಎಪ್ರಿಲ್ 8ರ ಬೆಳಿಗ್ಗರ ಗಿಳಿಕಿಂಜತಾಯಿ ದೈವದ ನೇಮೋತ್ಸವ ಶ್ರೀ ಶಾರದಾ ಭಜನಾ ಮಂಡಳಿ ವೀರಕಂಬ ದವರ ಭಜನಾ ಸೇವಾ ಬಲಿಯೊಂದಿಗೆ ಜರಗಿ ಭಕ್ತಾದಿಗಳಿಗೆ ಗಂಧ ಬೂಲ್ಯ ಪ್ರಸಾದ ನೀಡಲಾಯಿತು.
ಇದೇ ಸಂದರ್ಭದಲ್ಲಿ ಯುವಶಕ್ತಿ ಪ್ರೆಂಡ್ಸ್ ನೇತೃತ್ವ ದಲ್ಲಿ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿತು. ಸಾಯಂಕಾಲ ಕಲ್ಲುರ್ಟಿ ಕಲ್ಕುಡ, ಕೊರತಿ, ಕೊರಗಜ್ಜ ದೈವದ ನೇಮ ಜರಗಿತು,ಬಳಿಕ ಕುಕ್ಕಿಕಟ್ಟೆ ವಲಸರಿ ಜರಗಿ ಕೆರೆ ನೇಮೋತ್ಸವ ಜರಗಿತು.


ವರ್ಷಾವಧಿ ಎಪ್ರಿಲ್ 7 ಬಳಿಕ. ಎಪ್ರಿಲ್ 8ರ
ವಾರ್ಷಿಕ ನೇಮೊತ್ಸವ






































