ಭಾಗ-22
ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣ: ಎಂಟು ಮಂದಿಯ ಮೇಲೆ ಚಾರ್ಜ್ ಶೀಟ್
ಸಿದ್ದಲಿಂಗಪ್ಪವನರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ಮುಂದುವರಿಸುತ್ತಾತಾ. 19-3-77ರಲ್ಲಿ 1ನೇ ಆರೋಪಿ ಶ್ರೀಧರ ಭಟ್ಟರ ಮಾದರಿ ಕೈಬರಹವನ್ನು ತೆಗೆಯಲಾಯಿತು. ತಲೆಮರೆಸಿಕೊಂಡಿದ್ದ ಇತರ ಆರೋಪಿಗಳನ್ನು ಮಂಗಳೂರು ಮತ್ತಿತರ ಕಡೆಗಳಲ್ಲಿ ತಪಾಸಣೆ ಮಾಡಲಾಯಿತು. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದ ಭೋಜರಾಜ ಸೇಮಿತರ ಐಡೆಂಟಿಫಿಕೇಶನ್ ಪೆರೇಡ್ ಮಾಡಿಸುವಂತೆ ಬೆಂಗಳೂರು ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ರಿಗೆ ಮೆಮೊ ಕಳುಹಿಸಲಾಯಿತು. ಆರೋಪಿಗಳಿಂದ ಪಡೆದ ಮಾದರಿ ಕೈಬರಹಗಳನ್ನು ಮತ್ತು ಆ ಮೊದಲು ಸ್ವಾಧೀನಪಡಿಸಿಕೊಂಡಿದ್ದ ಕಾಗದ ಪತ್ರಗಳನ್ನು ಬೆಂಗಳೂರಿನಲ್ಲಿದ್ದ ಕೈಬರಹ ತಜ್ಞರಿಗೆ ಕಳುಹಿಸಲಾಯಿತು’ ಎಂದು ಹೇಳಿದರು. ತಾ. 20-3-77ರಂದು ಬಂಟ್ವಾಳದ ದರ್ಜಿ ಬಿ. ದೇವದಾಸ ಸುವರ್ಣರನ್ನು ಮತ್ತು ಬಾಬು ಎಂಬವರನ್ನು ಬರಮಾಡಿಕೊಂಡು 3ನೇ ಆರೋಪಿ ಈಶ್ವರ ಭಟ್ಟರ ಅಂಗಿ ಹಾಗೂ ಪ್ಯಾಂಟುಗಳ ಅಳತೆ ತೆಗೆಯಲಾಯಿತು. ಈಶ್ವರ ಭಟ್ಟರ ಮನೆಯ ಕೆಲಸದವರಾದ ದುಬೆಯವರನ್ನು ಕರೆ ತರಲು ಪೊಲೀಸ್ ಅಧಿಕಾರಿಗಳನ್ನು ಕಳುಹಿಸಲಾಯಿತು. ತಾ. 21-3-77ರಲ್ಲಿ 3ನೇ ಆರೋಪಿ ಈಶ್ವರ ಭಟ್ಟರ ಜತೆ ಕೊಯ್ಯೂರಿಗೆ ಹೋಗಿ ಅಲ್ಲಿ ಈಶ್ವರ ಭಟ್ಟರು ಸಾಕ್ಷಿಗಳ ಮುಂದೆ ಚಪ್ಪಲ್ ಬಿಸಾಡಿದ ಎರ್ಮಾಜೆ ತೋಡನ್ನು ತೋರಿಸಿದರು. ಅಲ್ಲಿ ಹುಡುಕಿದಾಗ 2 ಕೊಲ್ಲಾಪುರ ಚಪ್ಪಲಿಗಳು ಹಾಗೂ ಒಂದು ಪ್ಲಾಸ್ಟಿಕ್ ಚಪ್ಪಲ್ ಸಿಕ್ಕಿತು. ಅದನ್ನು ಮಹಜರು ಪ್ರಕಾರ ವಶಪಡಿಸಿಕೊಳ್ಳಲಾಯಿತು.
ಅನಂತರ ಈಶ್ವರ ಭಟ್ಟರ ಮನೆ ಜಪ್ತಿ ಮಾಡಿ ಹಲವು ಕಾಗದ ಪತ್ರಗಳು, ನೋಟ್ ಬುಕ್ ಮತ್ತು ಪೊಲೀಸ್ ಬಟನ್ಗಳನ್ನು ವಶಪಡಿಸಿಕೊಳ್ಳಲಾಯಿತು. ತಾ. 22-3-77ರಂದು ಈಶ್ವರ ಭಟ್ಟರ ಮಾದರಿ ಕೈಬರಹ ಪಡೆಯಲಾಯಿತು. ತಾ. 23-3-77ರಂದು ಡಿಟೆಕ್ಟಿವ್ ಇನ್ಸ್ ಪೆಕ್ಟರ್ ಕೆ.ಎಲ್. ರಾವ್ ಅವರು ಸಾಕ್ಷಿ ರಮಾಕಾಂತ ದುಬೆಯವರನ್ನು ನನ್ನ ಮುಂದೆ ಹಾಜರುಪಡಿಸಿದಾಗ ನಾನು ಅವರ ಹೇಳಿಕೆಗಳನ್ನು ಪಡದೆ. ಅಲ್ಲಿಂದ ಮೃತ ಇಸ್ಮಾಯಿಲ್ರವರ ಮನೆಗೆ ಹೋಗಿ ಇಸ್ಮಾಯಿಲ್ರವರು ಮೊದಲು ಧರಿಸಿದ್ದ ಹಳೆ ಶರ್ಟನ್ನು, ಹಳೆ ಬೆಲ್ಟನ್ನು ಸ್ವಾಧೀನಪಡಿಸಿಕೊಂಡೆ. ತಾ. 24-3-77ರಂದು ಬೆಂಗಳೂರಿಗೆ ಹೋದೆ’ ಎಂದು ಅವರು ವಿವರಿಸಿದರು.
ಬೆಂಗಳೂರಲ್ಲಿ ತಾ. 25-3-77ರಲ್ಲಿ ಮಹಾಬಲ ದೇವಾಡಿಗರನ್ನು ಹುಡುಕಿದೆ. 26-3-77ರಂದು ಡಿಟೆಕ್ಟಿವ್ ಇನ್ಸ್ಪೆಕ್ಟರ್ ಲಿಂಗಣ್ಣಯ್ಯ ಅವರನ್ನು ಮೈಸೂರಿಗೆ ಮಹಾಬಲ ದೇವಾಡಿಗರ ತಪಾಸಣೆಗಾಗಿ ಕಳುಹಿಸಿದೆ. ತಾ. 27-3-77ರಂದು ರಾತ್ರಿ ಮಹಾಬಲ ದೇವಾಡಿಗರನ್ನು ಇನ್ಸ್ಪೆಕ್ಟರ್ ಲಿಂಗಣ್ಣಯ್ಯ ನನ್ನ ಮುಂದೆ ಹಾಜರುಪಡಿಸಿದರು. ಆಗ ಮಹಾಬಲ ದೇವಾಡಿಗರನ್ನು ಲಿಂಗಣ್ಣಯ್ಯ ಅವರು ಮಧ್ಯಾಹ್ನದ ಹೊತ್ತು ಮೈಸೂರಿನಲ್ಲಿ ದಸ್ತಗಿರಿ ಮಾಡಿದರೆಂದು ತಿಳಿದುಬಂತು. ಮಹಾಬಲ ದೇವಾಡಿಗರನ್ನು ಮೈಸೂರಿನ ಚೀಫ್ ಜ್ಯುಡಿಶಿಯಲ್ ಮೆಜಿಸ್ಟ್ರೇಟ್ ರವರ ಮುಂದೆ ಹಾಜರುಪಡಿಸಿ 31-3-77ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ವಿಚಾರವೂ ಲಿಂಗಣ್ಣಯ್ಯರಿAದ ತಿಳಿದುಬಂತು. ತಾ. 30-3-77ರಂದು ಮಹಾಬಲ ದೇವಾಡಿಗರ ಜತೆಯಲ್ಲಿ ಬೆಂಗಳೂರಿನಿಂದ ಬಂಟ್ವಾಳಕ್ಕೆ ಬಂದು ಅಲ್ಲಿ ಸೋಮನಾಥ ಎಂಬವರ ಹೇಳಿಕೆಯನ್ನು ಪಡೆಯಲಾಯಿತು.
ತಾ. 31-3-77ರಂದು ಮಹಾಬಲ ದೇವಾಡಿಗರನ್ನು ಬಂಟ್ವಾಳ ಕೋರ್ಟಿನ ಮುಂದೆ ಹಾಜರುಪಡಿಸಿದಾಗ ಅವರಿಗೆ ಜ್ಯುಡಿಶಿಯಲ್ ರಿಮಾಂಡ್ ಕೊಡಲಾಯಿತು’ ಎಂದು ಅವರು ತಿಳಿಸಿದರು. ಸಿದ್ದಲಿಂಗಪ್ಪರವರು ಮುಂದುವರಿಸುತ್ತಾ ತಾ. 1-4-77ರಂದು ಬಾಲಕೃಷ್ಣ ಮಲ್ಯ (ತಲೆಮರೆಸಿಕೊಂಡ ಇನ್ನೊಬ್ಬ ಆರೋಪಿ) ಬಗ್ಗೆ ತಪಾಸಣೆ ನಡೆಸಿದೆ. 2-4-77ರಂದು ಡಿಟೆಕ್ಟಿವ್ ಇನ್ಸ್ಪೆಕ್ಟರ್ ಮಾಯಾರಂಗಯ್ಯ ಮತ್ತು ಕೆ.ಎಲ್ ರಾವ್ ಅವರನ್ನು ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಹಾಗೂ ಸುಂದರ ಗೌಡ ಮತ್ತು ತನಿಯಪ್ಪನವರ ಬಗ್ಗೆ ತಪಾಸಣೆ ಮಾಡಲು ಕಳುಹಿಸಿದೆ. ಸಿಓಡಿ ಸರ್ಕಲ್ ಇನ್ಸ್ ಪಕ್ಟರ್ ದಕ್ಷಿಣಾಮೂರ್ತಿಯವರು ಮಧ್ಯಾಹ್ನ 2 ಗಂಟೆ ಸಮಯಕ್ಕೆ ಈ ಕೇಸಿನ 5 ಆರೋಪಿ ಭೋಜರಾಜ ಸೇಮಿತರನ್ನು ತಂದು ನನ್ನ ಮುಂದೆ ಹಾಜರುಪಡಿಸಿದರು.
ತಾ. 3-4-77ರಂದು 5 ಆರೋಪಿ ಭೋಜರಾಜ ಸೇಮಿತರ ಜತೆ ಅವರ ಮನೆಗೆ ಹೋಗಿ ಒಂದು ಜತೆ ಬೂಟ್ಸ್ ಹಾಗೂ ಸಾಕ್ಸ್ಗಳನ್ನು ಸ್ವಾಧೀನಪಡಿಸಲಾಯಿತು. ಹಾಗೂ ಅಲ್ಲಿ ರತ್ನಮ್ಮ ಮತ್ತಿತರರ ಹೇಳಿಕೆಗಳನ್ನು ಪಡೆಯಲಾಯಿತು.ತಾ. 4-4-77ರಂದು ಸೇಮಿತರ ಶರ್ಟ್ ಮತ್ತು ಪ್ಯಾಂಟುಗಳ ಅಳತೆಗಳನ್ನು ದರ್ಜಿ ದೇವದಾಸ ಸುವರ್ಣರ ಸಹಾಯದಿಂದ ಪಡೆಯಲಾಯಿತು. ಸೇಮಿತರ ಬಂಟ್ವಾಳ ಮೆಜಿಸ್ಟ್ರೇಟ್ ರವರ ಮುಂದೆ ಹಾಜರುಪಡಿಸಲಾಯಿತು.
ಸ್ವಾಧೀನಪಡಿಸಿಕೊಂಡಿದ್ದ ಹೊತ್ತಿದ ಕಾಲರ್ ಮತ್ತಿತರ ಸೊತ್ತುಗಳನ್ನು ಬೆಂಗಳೂರಿನ ಎಫ್ಎಸ್ಎಲ್ಗೆ ಕಳುಹಿಸಲಾಯಿತು’ ಎಂದು ಹೇಳಿದರು.
ತಾ. 5-4-77ರಂದು ಭೋಜರಾಜ ಸೇಮಿತರ ಮಾದರಿ ಕೈಬರಹವನ್ನು ತೆಗೆಯಲಾಯಿತು. ಅಲ್ಲದೆ ತಲೆಮರೆಸಿಕೊಂಡಿದ್ದ ಆರೋಪಿಗಳ ತಪಾಸಣೆ ನಡೆಸಲಾಯಿತು. ತಾ. 6-4-77ರಂದು ಪೋಲಕ್ರ ಎಂಬವರಿಂದ ವೆಬ್ ಬೆಲ್ಟನ್ನು ಸ್ವಾಧೀನಪಡಿಸಲಾಯಿತು.
ತಾ. 7-4-77ರಂದು ಎಲ್ಲಾ ಆರೋಪಿಗಳಿಗೆ 11-4-77ರವರೆಗೆ ಜ್ಯುಡಿಶಿಯಲ್ ರಿಮಾಂಡ್ ಕೊಡಲಾಯಿತು. ತಲೆಮರೆಸಿದ್ದ ಆರೋಪಿಗಳ ತಪಾಸಣೆಯನ್ನು ಮುಂದುವರಿಸಲಾಯಿತು. ತಾ. 12-4-77ರಂದು ಸರ್ಕಲ್ ಇನ್ಸ್ ಪೆಕ್ಟರ್ ವೈ.ಬಿ. ಆಲೂರ್ ಅವರ ಹೇಳಿಕೆಯನ್ನು ಪಡೆಯಲಾಯಿತು.
ತಾ. 11-4-77ರಂದು ಜ್ಯುಡಿಶಿಯಲ್ ರಿಮಾಂಡ್ನಲ್ಲಿದ್ದ ಆರೋಪಿಗಳಿಗೆ ತಾ. 16-4-77ರವರೆಗೆ ಜ್ಯುಡಿಶಿಯಲ್ ರಿಮಾಂಡ್ಮುAದುವರಿಸಲಾಯಿತು. ತಾ. 12-4-77ರಂದು ಮಹಾಬಲ ದೇವಾಡಿಗರ ಮಾದರಿ ಕೈಬರಹವನ್ನು ತೆಗೆಯಲಾಯಿತು. ತಾ. 15-4-77ರಂದು ಈ ಕೇಸಿನಲ್ಲಿ ಚಾರ್ಜ್ಶೀಟ್ ಹಾಕಲಾಯಿತು’ ಎಂದು ಅವರು ಹೇಳಿದರು. ಈ ಕೇಸಿನಲ್ಲಿ ಶ್ರೀಧರ ಭಟ್, ಪುರಂದರ ಭಟ್, ಕೆ. ಎಸ್. ಈಶ್ವರ ಭಟ್, ಮಹಾಬಲ ದೇವಾಡಿಗ, ಭೋಜರಾಜ ಸೇಮಿತ, ಬಾಲಕೃಷ್ಣ ಮಲ್ಯ, ಚಂದ್ರ ಯಾನೆ ರಾಮಚಂದ್ರ ಮತ್ತು ಶೇಖರ ಯಾನೆ ಶೇಖರ ಪೂಜಾರಿ ಈ ಎಂಡು ಜನರ ಮೇಲೆ ಚಾರ್ಜ್ಶೀಟ್ ಹಾಕಲಾಗಿದೆ. ತಾ. 18-4-77ರಂದು ಪುತ್ತೂರಿಗೆ ಹೋಗಿ ಅಲ್ಲಿನ ಎಸಿಸ್ಟಂಟ್ ಕಮಿಷನರ್ ಮಹಾಲಿಂಗಪ್ಪರವರ ಹೇಳಿಕೆ ಪಡೆದು ತಲೆಮರೆಸಿಕೊಂಡಿದ್ದ ಆರೋಪಿಗಳ ತಪಾಸಣೆ ನಡೆಸಿದೆ. ತಾ. 19-4-77ರಲ್ಲಿ ತನಿಯಪ್ಪರವರ ತಪಾಸಣೆ ನಡೆಸಿದೆ. ತಾ. 23-4-77ರಂದು ಬೆಂಗಳೂರು ಎಫ್ಎಸ್ಎಲ್ನಿಂದ ರಿಪೋರ್ಟ್ ಸಿಕ್ಕಿತು.ತಾ. 24-4-77ರಂದು ಸುಳ್ಯ, ಕಾರ್ಕಳ ಮೊದಲಾದ ಸ್ಟೇಶನ್ಗಳಿಗೆ ಹೋಗಿ ತಲೆಮರಿಸಿಕೊಂಡ ಆರೋಪಿಗಳ ತಪಾಸಣೆ ಮಾಡಲು ಆದೇಶ ಕಳುಹಿಸಿದೆ.
ಮಹಾಬಲ ದೇವಾಡಿಗರ ಪತ್ರ ಹಾಗೂ ಮಾದರಿ ಕೈಬರಹವನ್ನು ಕೈಬರಹ ತಜ್ಞರಿಗೆ ಕಳುಹಿಸಿದೆ. ತಾ. 25-4-77ರಂದು ಬಳ್ಳಾರಿಗೆ ಹೋಗಿ ಅಲ್ಲಿನ ಸರಕಾರಿ ಆಸ್ಪತ್ರೆಯಲ್ಲಿರುವ ಎಕ್ಸಿಡೆಂಟ್ ರಿಜಿಸ್ಟರ್ ನೋಡಿದುದಲ್ಲದೆ ಡಾ. ಮುರಳೀಧರ ಅವರ ಹೇಳಿಕೆ ಪಡೆದೆ. ತಾ. 29-5-77ರಂದು ಹೊಸಪೇಟೆಗೆ ಹೋಗಿ ಡಾ. ಪಿ.ಎಚ್.ಸಿ. ಗೌಡ ಮತ್ತು ಮೋಹನ್ ಹಾಗೂ ಡಾ. ಎಸ್. ಎಸ್. ಭಟ್ ಅವರ ಹೇಳಿಕಕೆಗಳನ್ನು ಪಡೆದೆ’ ಎಂದು ವಿವರಿಸಿದರು. ತಾ. 7-6-77ರಂದು ನಾನು ಬೆಳ್ತಂಗಡಿಗೆ ಹೋಗಿ ಅಲ್ಲಿ ಎಡ್ವಕೇಟ್ ನೇಮಿರಾಜ ಶೆಟ್ಟಿ ಮತ್ತು ರಾಮಪ್ಪ ಸಪಲ್ಯರವರ ಹೇಳಿಕೆಗಳನ್ನು ಪಡೆದೆ. ತ. 9-6-77ರಲ್ಲಿ ಪುತ್ತೂರಿನಲ್ಲಿ ಬಿ. ಸಂಕಪ್ಪ ರೈ ಮತ್ತು ಕೆ. ಸಂಜೀವ ಅವರ ಹೇಳಿಕೆಗಳನ್ನು ಪಡೆದೆ. ತಾ. 10-6-77ರಂದು ಈ ಕೇಸಿಗೆ ಸಂಬಂಧಿಸಿದ ಎಫ್ಎಸ್ಎಲ್ ರಿಪೋರ್ಟ್ ಸಿಕ್ಕಿತು’ ಎಂದು ವಿವರಿಸಿದ ಸಿದ್ದಲಿಂಗಪ್ಪನವರು ತಮಗೆ ಬಳ್ಳಾರಿಗೆ ಡಿಎಸ್ಪಿಯಾಗಿ ವರ್ಗವಾದ ಕಾರಣ ಈ ಕೇಸಿನ ತನಿಖೆಯ ಜವಾಬ್ದಾರಿಯನ್ನು ಎಸ್ಪಿಯವರ ವಶಕ್ಕೆ ಕೊಟ್ಟೆ’ ಎಂದು ತಿಳಿಸಿದರು.
ಅಡ್ಡ ವಿಚಾರಣೆಯಲ್ಲಿ ಆರೋಪಿ ಪರ ವಕೀರುಗಳಲ್ಲಿ ಒಬ್ಬರಾದ ರಾಮಚಂದ್ರ ರಾವ್ ಅವರ ಪ್ರಶ್ನೆಗಳಿಗೆ ತನಿಖಾಧಿಕಾರಿ ಸಿದ್ದಲಿಂಗಪ್ಪ ಉತ್ತರಿಸುತ್ತಾ ತಾನು ತಾ. 10-9-76ರಂದು ಕಲ್ಲಡ್ಕಕ್ಕೆ ಬಂದಾಗ ಮೃತ ಇಸ್ಮಾಯಿಲ್ ಅವರ ಅಂಗಡಿಯ ಎರಡೂ ಬಾಗಿಲುಗಳು ತೆರೆದಿದ್ದವೆಂದೂ, ಆ ಅಂಗಡಿಯ ವಿಷಯಗಳನ್ನು ಪರಿಶೀಲಿಸಿ ನೋಡುವುದು ಅಗತ್ಯವೆಂದು ತನಗೆ ಕಂಡುಬಂತೆಂದೂ, ಆ ಬಗ್ಗೆ ತಾನು ಪ್ರತ್ಯೇಕ ಮಹಜರುಮಾಡಲಿಲ್ಲವೆಂದೂ, ಅಂಗಡಿಯಲ್ಲಿದ್ದ ಮೇಜಿಗೆ ಡ್ರಾವರ್ ಇತ್ತೋ ಇಲ್ಲವೋ ಎಂಬುದನ್ನು ತಾನು ಗಮನಿಸಲಿಲ್ಲ ಎಂದೂ ಹೇಳಿದರು.ನಾನು ಮೃತ ಇಸ್ಮಾಯಿಲ್ ಅವರ ವಾಚ್ ತಪಾಸಣೆಗೆ ಪ್ರಯತ್ನ ಮಾಡಿದೆ. ಅದು ಸಿಗಲಿಲ್ಲ’ ಎಂದು ಅವರು ಹೇಳಿದರು.
ಮೃತ ಇಸ್ಮಾಯಿಲ್ ಅವರ ಅಂಗಡಿಯ ಪೂರ್ವದ ಕಡೆ ಹೊಟೇಲು ಮತ್ತು ಇತರ ಅಂಗಡಿಗಳೂ ಇರುವುದಾಗಿ ಅವರು ತಿಳಿಸಿದಾಗ ಕೋರ್ಟಿನಲ್ಲಿ ತಮಗೆ ತೋರಿಸಿದ, ಇಸ್ಮಾಯಿಲ್ ಅವರ ಅಂಗಡಿ ಮತ್ತು ಇತರ ಅಂದಡಿಗಳನ್ನು ತೋರಿಸು ಎರಡು ಫೊಟೊಗಳನ್ನೂ ಅವರ ತನಿಖೆ ಸಮಯದಲ್ಲಿ ತಾವು ತೆಗೆಸಿದ ಫೊಟೊಗಳು ಎಂಬುದನ್ನು ಒಪ್ಪಿದರು. ಅವುಗಳಲ್ಲಿ ಒಂದು ಫೊಟೊದಲ್ಲಿ ತನ್ನ ಚಿತ್ರವಿದೆಯೆಂದೂ, ಅದು ಜೀಪು ಬಂದು ನಿಂತ ಸ್ಥಳ ಮತ್ತಿತರ ಸಂಗತಿಗಳನ್ನು ಗುರುತಿಸಲು ತೆಗೆದ ಫೊಟೊ ಅಲ್ಲವೆಂದು ಅವರು ಹೇಳಿದರು.
ಕಲ್ಲಡ್ಕದಲ್ಲಿ ಅಂಗಡಿ ಹಮ್ಮಬ್ಬ ಅವರಿಗೆ ಫೋನ್ ಇದೆಯೇ ಎಂಬ ಸಂಗತಿ ತನಗೆ ನೆನಪಿಲ್ಲ ಎಂದು ಹೇಳಿದ ಅವರು ಕಲ್ಲಡ್ಕಕ್ಕೆ ಬಂಟ್ವಾಳದಲ್ಲಿ ಟೆಲಿಫೋನ್ ಎಕ್ಸ್ಚೇಂಜ್ ಇರುವುದಾಗಿಯೂ, ಎಕ್ಸ್ಚೇಂಜ್ನಲ್ಲಿರುವವರನ್ನು ತವು ಸ್ವತ: ಹೋಗಿ ವಿಚಾರಿಸಿಲ್ಲವೆಂದೂ ಆದರೆ ಪೊಲೀಸ್ ಅಧಿಕಾರಿ ನಾಯ್ಡು ಅವರು ಹೋಗಿ ವಿಚಾರಿಸಿದ್ದಾರೆಂದೂ ವಿವರಿಸಿದರು. ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಖಾಕಿ ರೌಂಡ್ಕೇಪ್ ಇರುವುದು; ಆದರೆ ಪೊಲೀಸ್ ಡ್ರೆöÊವರ್ಗೆ ಖಾಕಿ ಬರ್ರಿ ಕೇಪ್ ಇರುವುದು’ ಎಂದು ಅವರು ಹೇಳಿದರು.
ತಾ. 4-9-76ರಂದು ರಾತ್ರಿ 10 ಗಂಟೆಯ ಸಮತ ಮಿತ್ತೂರು ಎಂಬಲ್ಲಿ ಎರಡು ಜೀಪುಗಳು ನಿಂತಿದ್ದವು ಎಂಬುದನ್ನು ಬಾಳ್ತಲ ಪಟೇಲರು ಶಿವರಾಮ ಶೆಟ್ಟರಿಗೆ ತಿಳಿಸಿರುವುದಾಗಿ ಹೇಳಿಕೆಯಲ್ಲಿ ಕಾಣುತ್ತದೆಂದು ಹೇಳಿದ ಸಿದ್ದಲಿಂಗಪ್ಪ ಅವರು ಬಾಳ್ತಲ ಪಟೇಲರು ಯಾರೆಂಬುದು ತನಗೆ ನೆನಪಿಲ್ಲ ಎಂದರು.
ಎಮರ್ಜೆನ್ಸಿ ಘೋಷಣೆಯಾದ ಮೇಲೆ ಅನೇಕ ಆರೆಸ್ಸೆಸ್ ಮತ್ತು ಜನಸಂಘದ ಕೆಲಸಗಾರರು ಭೂಗತರಾಗಿದ್ದರು. 4ನೇ ಆರೋಪಿ ಮಹಾಬಲ ದೇವಾಡಿಗರು ಜನಸಂಘಕ್ಕೆ ಸೇರಿದವರು. ಆದರೆ ಅವರು ಜನಸಂಘಕ್ಕೆ ಸೇರಿದ ಕಾರಣ ಭೂಗತರಾದರು ಎಂದು ಹೇಳುವುದು ಸರಿಯಲ್ಲ’ ಎಂದವರು ಉತ್ತರಿಸಿದರು.
ಪೊಲೀಸ್ ಇಲಾಖೆಯಲ್ಲಿ ರಾಜಕೀಯ ವಿಷಯಗಳನ್ನೇ ತಿಳಿದುಕೊಳ್ಳಲು ಪ್ರತ್ಯೇಕ ಇಂಟೆಲಿಜೆನ್ಸ್ ವಿಭಾಗವಿದೆ. ಪತ್ರಿಕೆಗಳಲ್ಲಿ ಇಸ್ಮಾಯಿಲ್ ಕೊಲೆ ಸಂಬಂಧ ವಿಷಯಗಳು ಬರುತ್ತಿದ್ದವು.
ಕೆಲವೊಮ್ಮೆ ನಾನು ಪತ್ರಿಕೆಗಳನ್ನು ಓದುತ್ತಿದ್ದೆ. ಆರಂಭದಿಂದಲೇ ಇಸ್ಮಾಯಿಲ್ ಅವರ ಕೊಲೆ ಯು ಆರೆಸ್ಸೆಸ್ ಮತ್ತು ಜನಸಂಘದವರಿಂದಲೇ ನಡೆದುದಾಗಿ ದೂರಿತ್ತೆಂದು ಹೇಳುವುದು ಸರಿಯಲ್ಲ. ಸಾಧಾರಣ 100ಕ್ಕೂ ಮಿಕ್ಕಿ ಆರೆಸ್ಸೆಸ್ ಕೆಲಸಗಾರರನ್ನು ಪೊಲೀಸ್ ಠಾಣೆಯಲ್ಲಿ ತಂದಿಡಲಾಯಿತೆಂದು ಹೇಳುವುದೂ, 100ಕ್ಕೂ ಮಿಕ್ಕಿ ಆರೆಸ್ಸೆಸ್ ಕೆಲಸಗಾರರ ಮನೆಗಳನ್ನು ಶೋಧನೆ ಮಾಡಲಾಯಿತೆಂದು ಹೇಳುವುದೂ ಸರಿಯಲ್ಲ. ಆ ಸಮಯದಲ್ಲಿ ಪೊಲೀಸ್ ಆರ್ ದಿ ಟೆರರ್’ ಎಂದು ಹೇಳುವುದೂ ಸರಿಯಲ್ಲ’ ಎಂದು ತನಿಖಾಧಿಕಾರಿಗಳು ಬೇರೆ ಬೇರೆ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಕೇಸಿನಲ್ಲಿ 1ರಿಂದ 5ನೇ ಆರೋಪಿಗಳ ಮೇಲೆ ಸಾಧಾರಣ ಜನವರಿ ಕೊನೆಯವರೆಗೆ ಹೆಚ್ಚಿನ ಪುರಾವೆಗಳೇನೂ ದೊರಕಿಲ್ಲವೆಂದೂ ಹೇಳಿದ ಅವರು ತಾ. 28-1-77ರಲ್ಲಿ 3ನೇ ಆರೋಪಿಯವರ ಮನೆಯೆದುರಿನ ಕೆರೆಯಲ್ಲಿ ಖಾಕಿ ಯೂನಿಫಾರ್ಮ್ ಸಿಕ್ಕಿದುದರಿಂದ ಸ್ವಲ್ಪ ಮಟ್ಟಿನ ಸುಳಿವು ದೊರೆಯಿತೆಂದೂ ಹೇಳಿದರು.
ಕಾಂಗ್ರೆಸ್ ಪಾರ್ಟಿಯು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಇಸ್ಮಾಯಿಲ್ ಅವರ ಕೊಲೆಯನ್ನು ಒಂದು ವಿಷಯವನ್ನಾಗಿ ಮಾಡಲಾಗಿತ್ತೆಂಬುದು ನನಗೆ ಗೊತ್ತಿಲ್ಲ. ಆ ಚುನಾವಣೆಯಲ್ಲಿ ಪೊಲೀಸರು ಮತ್ತು ಸಿಓಡಿಯವರಿ ಕಾಂಗ್ರೆಸ್ಗೆ ಕೆಲಸ ಮಾಡಿದ್ದರೆಂಬುದು ಸರಿಯಲ್ಲ’ ಎಂದರು.
ತಾ. 2-2-77ರಂದು ನಾನು ಬೆಂಗಳೂರಲ್ಲಿ ಇರುವಾಗ ಈಶ್ವರ ಭಟ್ಟರ ಕೆರೆಯಲ್ಲಿ ಯೂನಿಫಾರ್ಮ್ ಸಿಕ್ಕಿದ ವಿಷಯ ನನ್ನ ಎಸ್ಪಿಯವರ ಮೂಲಕ ನನಗೆ ತಿಳಿಯಿತು. ಪೊಲೀಸ್ ಯೂನಿಫಾರ್ಮ್ ಸಿಕ್ಕಿದ ವಿಷಯವು ಈ ಕೇಸಿನಲ್ಲಿ ಸಾಧಾರಣ ಒಂದು ಮುಖ್ಯ ವಿಷಯವಾಗಿದೆ. ತಾ. 4-2-77ರಂದು ನಾನು ಮಂಗಳೂರಿಗೆ ಬಂದು ಬೆಳ್ತಂಗಡಿಗೆ ಹೋಗಿ ಅಂದು 3ನೇ ಆರೋಪಿ ಈಶ್ವರ ಭಟ್ಟರ ಮನೆಯ ಬಳಿ ಖಾಕಿ ಬಟ್ಟೆ ಸಿಕ್ಕಿದ ಕೆರೆಯನ್ನು ಕಂಡೆ. ಆ ಕೆರೆಯು ಈಶ್ವರ ಭಟ್ಟರ ಮನೆಯಿಂದ 65ಹೆಜ್ಜೆ ದೂರದಲ್ಲಿದೆ. ಆದರೆ ಈಶ್ವರ ಭಟ್ಟರ ಮನೆ ತಪಾಸಣೆ ಮಾಡಬೇಕೆಂದು ತೋರಲಿಲ್ಲ. ಆ ಕೆರೆಯಲ್ಲಿ ಸಿಕ್ಕಿದ ಖಾಕಿ ಬಟ್ಟೆಗಳನ್ನು ನಾನು6-2-77ರಂದು ಸ್ವಾಧೀನಪಡಿಸುವವರೆಗೆ ಸೀಲ್ ಮಾಡಿ ಇಟ್ಟಿರಲಿಲ್ಲ’ ಎಂದರು.
ತಾ. 14-2-77ರಲ್ಲಿ 1ನೇ ಆರೋಪಿ ಶ್ರೀಧರ ಭಟ್ಟರು ಹೇಳಿದ ಎಲ್ಲಾ ವಿಷಯಗಳನ್ನು ತಾನು ಬರೆದುಕೊಂಡಿರುವುದಾಗಿಯೈ ಆ ಎಲ್ಲಾ ವಿಷಯಗಳೂ ತನ್ನ ಕೇಸ್ ಡೈರಿಯಲ್ಲಿರುವುದಾಗಿಯೂ, ಈ ಕೇಸಿನಲ್ಲಿ ದಾಖಲಾದ ಎಕ್ಸಿಬಿಟ್ ಪಿ6 ಎಂಬುದು 1ನೇ ಆರೋಪಿ ಶ್ರೀಧರ ಭಟ್ಟರು ಈ ಕೇಸಿಗೆ ಸಂಬಂಧಪಟ್ಟು ತೋರಿಸಿಕೊಟ್ಟ ಬಗ್ಗೆ ಮಾತ್ರವಿದೆಯೆಂದೂ ಅವರು ವಿವರಿಸಿದರು.
2ನೇ ಆರೋಪಿ ಪುರಂದರ ಭಟ್ಟರ ಮೇಲೆ ತಾ. 14-2-77ರವರೆಗೆ ತಪಾಸಣೆಯಲ್ಲಿ ರಾಜಗೋಪಾಲ ಹೆಬ್ಬಾರ್ ಮತ್ತಿತರರು ಹೇಳಿದ ಹೇಳಿಕೆಗಳು ಮಾತ್ರವೇ ಎಂದೂ, ಹೆಬ್ಬಾರರ ಮನೆಯ ಪೊರ್ಟಿಕೊದಲ್ಲಿ ಲೈಟಿರುವ ಬಗ್ಗೆ ಪ್ರತ್ಯೇಕ ಮಹಜರು ತಯಾರಿಸಿಲ್ಲವೆಂದೂ, ಡಾ. ಪಿಎಚ್ಸಿ ಗೌಡರು 1ನೇ ಆರೋಪಿಯ ಗುರುತು ಹಿಡಿದ ಬಗ್ಗೆ ಐಡೆಂಟಿಫಿಕೇಶನ್ ಪೆರೇಡ್ ಮಾಡಿಲ್ಲವೆಂದೂ, 3ನೇ ಆರೋಪಿ ಈಶ್ವರ ಭಟ್ಟರ ಕೊಟ್ಟಿಗೆ ಹಾಗೂ ಬಚ್ಚಲು ಕೋಣೆಗೆ ಒಂದೇ ಮಾಡು ಇರುತ್ತದೆಂದೂ, ಹಟ್ಟಿ ಮತ್ತು ಬಚ್ಚಲು ಕೋಣೆ ಮಧ್ಯೆ ಪ್ರತ್ಯೇಕ ಗೋಡೆಯಿರುವುದಿಲ್ಲವೆಂದೂ ಸಿದಲಿಂಗಪ್ಪ ಉತ್ತರಿಸಿದರು.
ತೋಡಿನಲ್ಲಿ ಸಿಕ್ಕಿದ ಚಪ್ಪಲಿಗಳ ಉದ್ದ ಸುಮಾರು 11 ಇಂಚು ಇತ್ತೆಂದೂ , ಇಸ್ಮಾಯಿಲ್ ಅವರ ಚಪ್ಪಲಿಯ ಉದ್ದ ಸುಮಾರು ಹತ್ತುವರೆ ಇಂಚು ಇತ್ತೆಂದೂ ಅವರು ತಿಳಿಸಿದರು.
1,3 ಮತ್ತು 5ನೇ ಆರೋಪಿಗಳ ಮನೆಗಳನ್ನು ಅವರನ್ನು ದಸ್ತಗಿರಿ ಮಾಡುವವರೆಗೆ ಶೋಧನೆ ಮಾಡಿಲ್ಲ, 4ನೇ ಆರೋಪ ಮಹಾಬಲ ದೇವಾಡಿಗರ ಮನೆಯನ್ನು ತಾ. 15-9-76ರಂದು ಈ ಕೇಸಿನ ಸಂಬಂಧ ಹುಡುಕಾಡಿದಾಗ ಕೇಸಿಗೆ ಸಂಬಂಧಪಟ್ಟ ವಸ್ತುಗಳು ಯಾವುದೂ ಅಲ್ಲಿ ಸಿಗಲಿಲ್ಲ. 4ನೇ ಆರೋಪಿ ಆಗ ಇದ್ದಿಲ್ಲ. ಆ ಮನೆಯು 4ನೇ ಆರೋಪಿಯ ತಂದೆಗೆ ಸೇರಿದ್ದು 4ನೇ ಆರೋಪಿ ತಂದೆಯ ಜತೆ ಆ ಮನೆಯಲ್ಲಿ ವಾಸಿಸುವುದು’ ಎಂದವರು ಉತ್ತರಿಸಿದರು. 3ನೇ ಆರೋಪಿಗಳ ಮನೆಯಲ್ಲಿ ಪೊಲೀಸ್ ಬಟನ್ಗಳನ್ನು ಪೊಲೀಸರೇ ಮೊದಲು ಇಟ್ಟು ಇದು ಚ್ಪಷ್ಟನೆ ಮಾಡಿದ್ದೆಂದು ಹೇಳುವುದು ಸರಿಯಲ್ಲವೆಂದು ಸಿದ್ದಲಿಂಗಪ್ಪ ಅವರು 3ನೇ ಆರೋಪಿಯ ಮನೆಯಲ್ಲಿ ಸಿಕ್ಕಿದ ವಿಸ್ಡಮ್ ಬರೆಯುವ ಪುಸ್ತಕದಲ್ಲಿರುವ ಒಂದು ಹಾಳೆ ಹರಿದು ಹೋಗಿದ್ದು ಅದರ ಬಗ್ಗೆ ತಾವು ಮಾಡಿದ ಸ್ವಾಧೀನತೆಯ ಮಹಜರ್ನಲ್ಲಿ ಹೇಳುವುದಾಗಿ ತಿಳಿಸಿದರು. ಆರೋಪಿಗಳ ಪರ ವಕೀಲರುಗಳಲ್ಲಿ ಬಿ.ವಿ. ಆಚಾರ್ಯರು ತನಿಖಾಧಿಕಾರಿಗಳಾದ ಸಿದ್ದಲಿಂಗಪ್ಪನವರಿಗೆ ಕೇಳಿದ ಪ್ರಶ್ನೆಗಳಿಗೆ ತನಿಖಾಧಿಕಾರಿಗಳು ಉತ್ತರಿಸುತ್ತಾ 2ನೇ ಆರೋಪಿ ಪುರಂದರ ಭಟ್ಟರನ್ನು ತಾನು ತನಿಖೆಗೆ ತೆಗೆದುಕೊಳ್ಳುವ ಮೊದಲೆ ಅಂದರೆ 10-9-76ರ ಮೊದಲೇ ಪೊಲೀಸರು ವಶದಲ್ಲಿದ್ದರು ಎನ್ನುವುದು ಸರಿಯಲ್ಲ ಮತ್ತು 2ನೇ ಆರೋಪಿಯು ಅವರನ್ನು ಮೀಸಾದಲ್ಲಿ 30-10-76ರಲ್ಲಿ ಕಳುಹಿಸುವವರೆಗೂ ಪೊಲೀಸ್ ನಿಯಂತ್ರಣದಲ್ಲಿದ್ದರೆಂದು ಹೇಳುವುದೂ ಸರಿಯಲ್ಲ. 30-10-76 ರಂದು ಅವರನ್ನು ಮೀಸಾದಲ್ಲಿ ದಸ್ತಗಿರಿ ಮಾಡಿದ ಸಂಗತಿ ಬಳಿಕ ನನಗೆ ತಿಳಿದುಬಂತು’ ಎಂದು ಹೇಳಿದರು.
ಮೂರನೇ ಆರೋಪಿ ಈಶ್ವರ ಭಟ್ಟರನ್ನು ತಾ. 10-9-76ರಂದು ಕರೆದುಕೊಂಡು ಬಂದು 3-10-76ರವರೆಗೆ ಅನಧಿಕೃತವಾಗಿ ಪೊಲೀಸ್ ನಿಯಂತ್ರಣದಲ್ಲಿ ಇರಿಸಲಾಗಿತ್ತೆಂದು ಹೇಳುವುದು ಸರಿಯಲ್ಲ. ಪುನ: ಮೂರನೇ ಆರೋಪಿಯನ್ನು 6-10-76ರಂದು ಕರೆದುಕೊಂಡು ಬಂದು11-10-76ರವರೆಗೆ ಅವರನ್ನು ಪೊಲೀಸ್ ಕಸ್ಟಡಿಯಲ್ಲಿಟ್ಟು ಚಿತ್ರಹಿಂಸೆ ಮಾಡಲಾಯಿತೆಂದೂ ಹೇಳುವುದು ಸರಿಯಲ್ಲ.
ತಾ. 11-10-76ರಂದು ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಿಕಿ ಅವರು ಮಂಗಳೂರಿನಲ್ಲಿ ಇದ್ದರೋ ಎಂಬುದು ನನಗೆ ನೆನಪಿಗೆ ಬರುವುದಿಲ್ಲ. ಈ ಕೇಸಿನಲ್ಲಿ 1976 ಸೆಪ್ಟಂಬರ್ನಲ್ಲಿ ಸಿದ್ದಿಕಿಯವರು ತನಿಖೆಗೆ ಸಹಕರಿಸಿದ್ದರು. ಸಿದ್ದಿಕಿಯವರ ಹೆಡ್ ಕ್ವಾಟರ್ಸ್ ಬೆಂಗಳೂರು. ಆದರೆ ಬೆಂಗಳೂರಲ್ಲಿ ಅವರ ಮನೆಯೆಲ್ಲಿ ಎಂಬುದು ನನಗೆ ಗೊತ್ತಿಲ್ಲ’ ಎಂದವರು ಉತ್ತರಗಳನ್ನು ನೀಡಿದರು.
ಈ ಕೇಸಿನ ಸಂಬಂಧ 3ನೇ ಆರೋಪಿ ಈಶ್ವರ ಭಟ್ಟರು ಕರ್ನಾಟಕ ಹೈಕೋರ್ಟಿನಲ್ಲಿ ಎಂಟಿಸಿಪೇಟರಿ ಬೈಲ್ ಬಗ್ಗೆ ಅರ್ಜಿ ಕೊಟ್ಟದ್ದು ನನಗೆ ಆಮೇಲೆ ತಿಳಿಯಿತು. ಅಷ್ಟು ಮಾತ್ರವಲ್ಲದೆ ಮಂಗಳೂರು ಎಸ್ಪಿಯವರು ಅಫಿದಾವಿತ್ ಹಾಕಿದ್ದರು’ ಎಂದು ತಿಳಿಸಿದರು.
3ನೇ ಆರೋಪಿ ಮತ್ತಿತರರಿಗೆ ಪೊಲೀಸರ ಚಿತ್ರಹಿಂಸೆ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಾದ ವಿಷಯ ತಮಗೆ ಗೊತ್ತಿಲ್ಲವೆಂದೂ, 2ನೇ ಆರೋಪಿ ಮತ್ತಿತರರು ಕರ್ನಾಟಕ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲು ಮಾಡಿದ ವಿಷಯ ಆ ಬಳಿಕ ನನಗೆ ತಿಳಿಯಿತೆಂದೂ, ಅದರಲ್ಲಿ ದಕ್ಷಿಣ ಕನ್ನಡದ ಎಸ್ಪಿ ಭಾಸ್ಕರ್ರವರು ಅಫಿದಾವಿತ್ ಹಾಕಿರುವುದಾಗಿಯೂ ಹೇಳಿದ ಅವರು ಅದರ ಬಗ್ಗೆ ಹಾಜರು ಪಡಿಸಿದ್ದ ಅರ್ಜಿ, ಅಫಿದಾವಿತ್ ಮತ್ತು ಆರ್ಡರ್ಗಳ ಮಂಜೂರು ನಕಲುಗಳನ್ನು ತೋರಿಸಿದಾಗ ಅವುಗಳು ಹೌದೆಂದು ಒಪ್ಪಿಕೊಂಡರು.
ಮೇಲಿವ ಅರ್ಜಿಗಳ ವಿಷಯಲ್ಲಿ ದ.ಕ. ಎಸ್ ಪಿಯವರು ತನ್ನೊಡನೆ ವಿಚಾರಿಸಿದಾಗ ತಾನು ಯಾರನ್ನು ಹಾಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿಲ್ಲವೆಂದೂ ತಿಳಿಸಿರುವುದಾಗಿಯೂ, 1,3.5ನೇ ಆರೋಪಿಗಳನ್ನು ತಾ. 18-1-77ರಂದು ತನ್ನ ಸ್ವಾಧೀನಕ್ಕೆ ತೆಗೆೆದುಕೊಂಡೆನೆಂದು ಹೇಳುವುದು ಸರಿಯಲ್ಲವೆಂದೂ ತಾ. 9-1-77ರಂದು 4ನೇ ಆರೋಪಿ ಮಹಾಬಲ ದೇವಾಡಿಗರನ್ನು ದಕ್ಷಿಣಾಮೂರ್ತಿಯವರು ಶಿವಮೊಗ್ಗದಲ್ಲಿ ಸ್ವಾಧೀನಕ್ಕೆ ತೆಗೆÉದುಕೊಂಡೆನೆAದು ಹೇಳುವುದು ಸರಿಯಲ್ಲವೆಂದೂ, ತಾ. 17-1-77ರಂದು ತಾನು ಬೆಂಗಳೂರಲ್ಲಿ ಇದ್ದುದಾಗಿಯೂ ಸಿದ್ದಲಿಂಗಪ್ಪನವರು ಹೆಳಿದರು.
ತಾ. 19-1-77ರಂದು ನಾನು ಬಿ.ಸಿ.ರೋಡ್ನಲ್ಲಿದ್ದೆ. ತಾ. 20-1-77ರಂದು ಬಂಟ್ವಾಳದಿAದ ನಾನು ಬೆಂಗಳೂರಿಗೆ ಹೋದೆ. ಆದರೆ ದಾರಿಯಲ್ಲಿ ನಾನು ಯಾವ ಪ್ರಯಾಣಿಕರ ಬಂಗ್ಲೆಯಲ್ಲೂ ನಿಂತಿಲ್ಲ. 1,3, ಮತ್ತು 5ನೇ ಆರೊಪಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ, ಬೆಂಗಳೂರಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಕೆಂಗಲ್ ಎಂಬಲ್ಲಿ ಸಿಓಡಿ ನಿಂತ್ರಣದಲ್ಲಿ ಅನಧಿಕೃತವಾಗಿ ಇಟ್ಟುದೆಂಬ ವಿಚಾರ ಸರಿಯಾದುದಲ್ಲ ಮತ್ತು 1,3 ಮತ್ತು 5ನೇ ಆರೋಪಿಗಳನ್ನು ಸ್ಥಳದಿಂದ ಸ್ಥಳಕ್ಕೆ ಕೊಂಡುಹೋಗಲಾಗುತ್ತಿತ್ತು ಎಂದು ಹೇಳುವುದೂ ಮತ್ತಿದನ್ನು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ದಾಖಲು ಮಾಡಿದ ಮೇಲೆ ಮಾಡಿದುದೆಂದೂ ಹೇಳುವುದು ಸತ್ಯವಲ್ಲ’ಎಂದು ಸಿದ್ದಲಿಂಗಪ್ಪ ಉತ್ತರಗಳನ್ನು ನೀಡಿದರು. ತಾ. 8-10-76ರಂದು ಪಾಂಡೇಶ್ವರ ಪೊಲೀಸ್ ಸ್ಟೇಶನ್ನಿಂದ ಸಿದ್ದಿಕಿಯವರಿಮದ ತನಗೆ ಫೋನ್ ಬಂದಿತ್ತೆAಬುದು ಸರಿಯಲ್ಲವೆಂದು ಹೇಳಿದ ಅವುರ ಇಸ್ಮಾಯಿಲ್ರವರ ಅಂಗಡಿಯಲ್ಲಿರುವ ಫೋನಿನ ನಂಬ್ರ 158ಆಗಿದೆಯೆಂದೂ, ತಾ. 4-9-76ರಂದು ರಾತ್ರಿ ಇಸ್ಮಾಯಿಲ್ರವರ ಅಂಗಡಿಯಿAದ ಮಂಗಳೂರಿಗೆ ಫೋನ್ ಬುಕ್ ಮಾಡಿದ ಬಗ್ಗೆ ಯಾವ ದಾಖಲೆಯೂ ಇಲ್ಲವೆಂದು ತಿಳಿಸಿದರು. ತಾ. 23-2-77ರಲ್ಲೂ ಈ ಕೇಸಿನ ಸಾಕ್ಷಿಗಳಾದ ರಾಜಗೋಪಾಲ ಹೆಬ್ಬಾರ್, ಜಯಜಾಜ ಭಟ್, ಅಬ್ದುಲ್ ಮುನಾಫ್, ಪಿ.ಎಸ್. ಭಟ್ ಮತ್ತು ಯು.ಆರ್ ಮೋಹನ್ ಭಟ್ಟರಿಂದ ಹೇಳಿಕೆಗಳನ್ನು ಕ್ರಿಮಿನಲ್ ಪ್ರೊಸೀಜರ್ ಕೋಡಿನ 164ರ ಪ್ರಕಾರ ಪಡೆಯುವಂತೆ ಬಂಟ್ವಾಳ ಮೆಜಿಸ್ಟೆçÃಟ್ ಅವರಿಗೆ ಅರ್ಜಿಯೊಂದನ್ನು ಕೊಡಲಾಗಿತ್ತೆಂದೂ, ಮೋಹನ ಭಟ್ಟರೊಬ್ಬರ ಹೇಳಿಕೆ ಪಡೆಯಲಾಗಿತ್ತೆಂದೂ, ಉಳಿದವರ ಹೇಳಿಕೆ ಪಡೆದಿಲ್ಲವೆಂದೂ ಹೇಳಿದ ಅವರು ಆ ಬಳಿಕ ರಾಜಗೋಪಾಲ ಹೆಬ್ಬಾರ್ರ ಜೀಪು ಹಿಂದಿರುಗಿಸುವಂತೆ ಅಫಿದಾವಿತ್ಗಳನ್ನು ಪೊಲೀಸರೇ ಕೊಡಿಸಿದುದಾಗಿ ಹೇಳುವುದೂ ಹಾಗೆ ಕೊಡಿಸಿ ಅವರು ಆ ಅಫಿದಾವಿತ್ಗಳಿಗೆ ಸರಿಯಾಗಿ ಸಾಕ್ಷಿ ಹೇಳುವಂತೆ ಮಾಡಲಾಗಿದೆಯೆಂಬುದೂ ಸರಿಯಲ್ಲವೆಂದು ಹೇಳಿದರು.
1ನೇ ಆರೋಪಿಯಿಂದ ತಾ, 6-2-77ರಲ್ಲಿ ಎಕ್ಸಿಬಿಟ್ ಪಿ 21 ಕಾಗದವನ್ನು ತಾನು ಹೆದರಿಸಿ ಬರೆಸಿದುದೆಂಬುದನ್ನು ನಿರಾಕರಿಸಿದ ಅವರು ಮತ್ರವಲ್ಲ ನನ್ನ ಸಿಬ್ಬಂದಿಗಳಿಂದ ಆ ಕಾಗದವನ್ನು ಪೋಸ್ಟ್ ಮಾಡಿಸಿದುದೆಂಬುದೂ ಸರಿಯಲ್ಲ ಎಂದರು.
1ನೇ ಅರೋಪಿಯು ಹೆಚ್ಚಾಗಿ ಕನ್ನಡದಲ್ಲಿಯೇ ದಸ್ಕತ್ತು ಹಾಕುವುದೇ ಎಂಬುದು ನನಗೆ ಗೊತ್ತಿಲ್ಲ. ಈ ಕೇಸಿನ ವಿಷಯ ಕೆಲವ್ ಬಾರಿ ಪತ್ರಿಕೆಗಳಲ್ಲಿ ಬಂದಿದ್ದನ್ನು ನನು ಓದಿದ್ದೇನೆ. ಈ ಬಗ್ಗೆ ಕರ್ನಾಟ ಎಸೆಂಬ್ಲಿ ಮತ್ತು ಪರಿಷತ್ತುಗಳಲ್ಲಿ ಪ್ರಶ್ನೆಗಳು ಕೇಳಿದ ವಿಷಯ ಆಮೇಲೆ ತಿಳಿದುಬಂತು. ತಾ. 12-9-76ರಂದು ಉದಯವಾಣಿ’ ಪತ್ರಿಕೆಯನ್ನು ತಾನು ಓದಿಲ್ಲ. ತಾ. 16-11-76ರ, ತಾ. 12-2-77 ಮತ್ತು 2-3-77ರ ಉದಯವಾಣಿ ಪತ್ರಿಕೆಗಳನ್ನೂ ತಾನು ಓದಿಲ್ಲ, ತಾ. 9-2-77ರ ಪ್ರಜಾವಾಣಿ ಪತ್ರಿಕೆಯನ್ನೂ ನಾನು ಓದಿಲ್ಲ ಎಂದು ಸಿದ್ದಲಿಂಗಪ್ಪ ಉತ್ತರಿಸಿದರು.
ಆಗ ಆಚಾರ್ರವರು ಈ ಪತ್ರಿಕೆಗಳನ್ನು ತೋರಿಸಿ ಈ ಕೇಸಿನಲ್ಲಿ ಇವುಗಳನ್ನುಡಿಫೆನ್ಸ್ ಎಕ್ಸಿಬಿಟ್’ ಆಗಿ ಮಾರ್ಕ್ ಮಾಡಬೇಕೆಂದು ಕೇಳಿಕೊಂಡರು.
ಆಗ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಇದನ್ನು ಮಾರ್ಕ್ ಮಾಡಲು ಕಾನೂನು ಪ್ರಕಾರ ಸಾಧ್ಯವಿಲ್ಲವೆಂದು ತಿಳಿಸಿದರು. ಆದರೆ ತಾ. 12-9-76ರ ಪತ್ರಿಕೆಯನ್ನು ಎಕ್ಸಿಬಿಟ್ ಡಿ23 ಆಗಿ ಪಬ್ಲಿಕ್ ಪ್ರಾಸಿಕ್ಯೂಟರ್ರವರ ಆಕ್ಷೇಪಣೆಯನ್ನು ಓವರ್ ರೂಲ್ ಮಾಡಿ ಮಾರ್ಕ್ ಮಾಡಲಾಯಿತು. ಅನಂತರ ಉಳಿದ ಪತ್ರಿಕೆಗಳನ್ನು ಡಿ. 24ರಿಂದ ಡಿ. 27ರವರೆಗೆ ಮಾರ್ಕ್ ಮಾಡುವಾಗ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಡಿದ ಆಕ್ಷೇಪಣೆಯ ಮೇಲೆ ಇವುಗಳ ಬಗ್ಗೆ ಆಮೇಲೆ ನಿರ್ಣಯ ತೆಗೆದುಕೊಳ್ಳುವುದಾಗಿ ಕೋರ್ಟು ನಿರ್ಧರಿಸಿತು.
ಮುಂದುವರಿಯುವುದು…..





































