ಕಾರ್ಕಳ : ಈದು ಗ್ರಾಮದ ನೂರಾಲ್ ಬೆಟ್ಟು ಲಾಮುದೇಲು ಸದಾಶಿವ ಶೆಟ್ಟಿ ಅವರ ಮನೆಗೆ ಸೋಮವಾರ ಸಂಜೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ವಿದ್ಯುತ್ ವಯರಿಂಗ್ , ಉಪಕರಣಗಳು ಸಂಪೂರ್ಣ ಹಾನಿಗೊಳಗಾಗಿದೆ. ಅದೇ ಸಂದರ್ಭದಲ್ಲಿ ಫಲವತ್ತಾದ ತೆಂಗು, ಹಲಸು ಸೇರಿದಂತೆ ಇತರ ಕೃಷಿ ಹಾನಿಗೊಳಗಾಗಿದೆ. ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ನಷ್ಟದ ಅಂದಾಜು ಲೆಕ್ಕಹಾಕಿದ್ದಾರೆ.