ನವದೆಹಲಿ: ಬಿಜೆಪಿಯ ರಾಷ್ಟ್ರೀಯ ನಾಯಕ , ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಾತುಕತೆ ನಡೆಸದೇ ಕರ್ನಾಟಕಕ್ಕೆ ಹಿಂತಿರುಗಿದ್ದಾರೆ.

ಕರ್ನಾಟಕ ಬಿಜೆಪಿ ರಾಜಕೀಯದಲ್ಲಿ ಇರುವಂತಹ ಬಂಡಾಯ ಶಮನಕ್ಕೆ ರಾಷ್ಟ್ರನಾಯಕ ಅಮಿತ್ ಶಾ ಅವರು ಹಿರಿಯ ನಾಯಕ ಕೆ.ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿದ್ದರು.
ಆದರೆ ಬಂಡಾಯ ನಾಯಕ ಈಶ್ವರಪ್ಪ ಮಾತ್ರ ಮಾತುಕತೆಗೂ ಮುನ್ನವೇ ತನ್ನ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ವೆಂದು ಘಂಟಾಘೋಷವಾಗಿ ಸಾರಿದ್ದರು.
ಇದು ರಾಜಕೀಯ ಬೆಳವಣಿಗೆಯಲ್ಲಿ ಮತ್ತೊಂದು ಹಿನ್ನಡೆ ಎನ್ನಬಹುದು. ಈಶ್ವರಪ್ಪ ಅವರ ಬೇಡಿಕೆಗೆ ಕರ್ನಾಟಕದ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಕಾರಣಕ್ಕೂ ಒಪ್ಪಲಾರರು. ಒಂದು ವೇಳೆ ರಾಜ್ಯ ರಾಜಕರಣದಲ್ಲಿ ಸಾರಥ್ಯ ಬದಲಾವಣೆಗೆ ರಾಷ್ಟ್ರ ನಾಯಕರು ಕೈ ಹಾಕಲು ಮುಂದಾದರೆ ಅದು ಹುತ್ತದೊಳಗೆ ಕೈ ಹಾಕಿದಂತಾಗಬಹುದೆಂಬ ಲೆಕ್ಕಚಾರ ಅಮಿತ್ ಶಾ ಅವರದಾಗಿರಬಹುದು.
ಒಂದೊಮ್ಮೆ ಮಾತುಕತೆಯಲ್ಲಿ ಈಶ್ವರಪ್ಪ ಅವರು ತನ್ನ ಮಾತಿಗೆ ಮನ್ನಣೆ ನೀಡದೇ ಹೋದಲ್ಲಿ ಅದರಿಂದ ತನ್ನ ಪ್ರತಿಷ್ಠೆಗೂ ದಕ್ಕೆಯಾಗಬಹುದು. ಈ ಎಲ್ಲ ಲೆಕ್ಕಚಾರಗಳನ್ನು ಮುಂದಿಟ್ಟು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಲ್ಲಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸದೇ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಜಯಭೇರಿಯ ಸೂಚಕದ ಪತಾಕೆ ಹಾರಿಸಲೇ ಬೇಕು ಎಂಬ ನಿರ್ದೇಶನವನ್ನು ಯಡಿಯೂರಪ್ಪ ಅವರಿಗೆ ನೀಡುವ ಯೋಚನೆಯೂ ಅಮಿತ್ ಶಾ ಅವರದಾಗಿರಬಹುದು.
ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?;
ಈಶ್ವರಪ್ಪ ದೆಹಲಿಗೆ ತಲುಪಿ ರಾಷ್ಟ್ರ ನಾಯಕ ಆಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ ಕರ್ನಾಟಕದಲ್ಲಿ ಬಿಜೆಪಿಯ ಅಧಿಕಾರ ಹಿಡಿತವು ವಂಶ ಪರಂಪರೆಯಿಂದ ಮುಕ್ತ ಗೊಳಿಸಲೇ ಬೇಕೆಂಬ ಛಲಕ್ಕೆ ಬಿದ್ದಿದ್ದರು.
ಆದರೆ, ಅಮಿತ್ ಶಾ ಕಚೇರಿಯಿಂದ ದೂರವಾಣಿ ಕರೆ ಬಂದಿತು. ಗೃಹ ಸಚಿವರು ಭೇಟಿಯಾಗುವುದಿಲ್ಲ ಎಂಬ ಸಂದೇಶ ದೊರೆತ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿ, ವಂಶ ಪರಂಪರೆ ಯನ್ನು ಕೊನೆಗಾಣಿದಲಿ ಎಂಬ ನಿಟ್ಟಿನಲ್ಲಿ ಮಾತುಕತೆ ನಡೆಸುವುದಕ್ಕೆ ಅವಕಾಶ ಸಿಕ್ಕಲ್ಲ.ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವುದು ಶತಸಿದ್ಧ ಎಂದು ಈಶ್ವರಪ್ಪ ಅವರು ಪುನರ್ ಉಚ್ಚರಿಸಿದರು
ಈಶ್ವರಪ್ಪನವರ ಮನಸಿನೊಳಗೆ ಏನಿದೆ ಅನ್ನುವುದನ್ನು ಶಾ ಪರೀಕ್ಷೆ ಮಾಡಲಷ್ಟೆ ದೆಹಲಿಗೆ ಬರುವಂತೆ ಹೇಳಿರಬಹುದು ವಿನಾ ಆತ್ಮ ಸಾಕ್ಷಿಯಾಗಿ ಕರೆದಿರುವುದಲ್ಲ ಎಂಬುದು ಸ್ಪಷ್ಟ. ಈಶ್ವರಪ್ಪನವರ ಬಂಡಾಯದ ತಾಕತ್ತನ್ನು ಅಮಿತ್ ಶಾ ತಿಳಿದುಕೊಂಡಾಗಿದೆ!






































