ಆಧಾರಸ್ತಂಭ ಕಳಚಿ ನಿಂತ ಟ್ಯಾಂಕ್!

Picture of RB NEWS

RB NEWS

Bureau Report

ಕಾರ್ಕಳ: ನಿಟ್ಟೆ ಚೇತನಹಳ್ಳಿ ಎಂಬಲ್ಲಿ ಕಳೆದ 30 ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನಿರ್ಮಿಲಾಗಿದ್ದ ಟ್ಯಾಂಕ್‌ನ ಸ್ಥಿತಿ ಅಪಾಯಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಧರೆಶಾಹಿಯಾದರೂ ಅಶ್ಚರಿ ಇಲ್ಲ.


ಟ್ಯಾಂಕ್‌ನ ಒಂದು ಭಾಗದ ಪಿಲ್ಲರ್ ಸಂಪೂರ್ಣ ಕಳಚಿಕೊಂಡಿದ್ದು, ಅದರ ಸರಳು ಹೊರಚಾಚಿದೆ. ಈ ಸ್ಥಿತಿಯನ್ನು ಗಮನಿಸಿದ ಇಲಾಖೆ ಪರ್ಯಾಯ ಟ್ಯಾಂಕ್ ನಿರ್ಮಿಸಿ ವರ್ಷಗಳೇ ಕಳೆದು ಹೋಗಿದೆ.


ವಿಪರ್ಯಾಸವೆಂದರೆ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಟ್ಯಾಂಕ್‌ಗೆ ಪರ್ಯಾಯವಾಗಿ ನೂತನ ಟ್ಯಾಂಕ್ ನಿರ್ಮಿಸಲಾಗಿದ್ದರೂ, ಹಳೆಯದಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಟ್ಯಾಂಕ್ ತೆರವಿನ ಕಾರ್ಯಕ್ಕೆ ಇಲಾಖೆ ಇನ್ನೂ ಮುಂದಾಗಿಲ್ಲ.


ಈ ಕುರಿತು ಸ್ಥಳೀಯ ಆಡಳಿತವಾಗಿರುವ ನಿಟ್ಟೆ ಗ್ರಾಮ ಪಂಚಾಯತ್‌ಗೂ ಮನವಿ ಸಲ್ಲಿಸಿರುವ ಮಾಹಿತಿ ಲಭಿಸಿದೆ.
ಮೈದಾನದಲ್ಲಿ ಆಡುವ ಸಂದರ್ಭದಲ್ಲಿ ಅಪಾಯಕಾರಿ ಟ್ಯಾಂಕ್ ಕುಸಿದುಬಿದ್ದರೆ ಜೀವಕ್ಕೂ ಕುತ್ತು ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಕಾಲಮಿಂಚುವ ಮುನ್ನಾ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಜವಾಬ್ದಾರಿ ಸ್ಥಾನದಲ್ಲಿ ಇರುವವರದಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top