ಆಧಾರಸ್ತಂಭ ಕಳಚಿ ನಿಂತ ಟ್ಯಾಂಕ್!

ಕಾರ್ಕಳ: ನಿಟ್ಟೆ ಚೇತನಹಳ್ಳಿ ಎಂಬಲ್ಲಿ ಕಳೆದ 30 ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನಿರ್ಮಿಲಾಗಿದ್ದ ಟ್ಯಾಂಕ್ನ ಸ್ಥಿತಿ ಅಪಾಯಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಧರೆಶಾಹಿಯಾದರೂ ಅಶ್ಚರಿ ಇಲ್ಲ.

ಟ್ಯಾಂಕ್ನ ಒಂದು ಭಾಗದ ಪಿಲ್ಲರ್ ಸಂಪೂರ್ಣ ಕಳಚಿಕೊಂಡಿದ್ದು, ಅದರ ಸರಳು ಹೊರಚಾಚಿದೆ. ಈ ಸ್ಥಿತಿಯನ್ನು ಗಮನಿಸಿದ ಇಲಾಖೆ ಪರ್ಯಾಯ ಟ್ಯಾಂಕ್ ನಿರ್ಮಿಸಿ ವರ್ಷಗಳೇ ಕಳೆದು ಹೋಗಿದೆ.



ವಿಪರ್ಯಾಸವೆಂದರೆ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಟ್ಯಾಂಕ್ಗೆ ಪರ್ಯಾಯವಾಗಿ ನೂತನ ಟ್ಯಾಂಕ್ ನಿರ್ಮಿಸಲಾಗಿದ್ದರೂ, ಹಳೆಯದಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಟ್ಯಾಂಕ್ ತೆರವಿನ ಕಾರ್ಯಕ್ಕೆ ಇಲಾಖೆ ಇನ್ನೂ ಮುಂದಾಗಿಲ್ಲ.
ಅಪಾಯಕಾರಿ ಟ್ಯಾಂಕ್ ಇರುವ ಪರಿಸರದಲ್ಲಿ ಮೈದಾನವಿದೆ. ಪ್ರತಿದಿನ ಸಂಜೆ ಹಾಗೂ ರಜಾದಿನಗಳಲ್ಲೂ ಬೆಳಿಗ್ಗಿನಿಂದಲೇ ಕ್ರೀಡಾಸಕ್ತಿಯುಳ್ಳವರು ಕ್ರೀಡೆಗಳನ್ನು ಆಡುತ್ತಾರೆ.
ಈ ಕುರಿತು ಸ್ಥಳೀಯ ಆಡಳಿತವಾಗಿರುವ ನಿಟ್ಟೆ ಗ್ರಾಮ ಪಂಚಾಯತ್ಗೂ ಮನವಿ ಸಲ್ಲಿಸಿರುವ ಮಾಹಿತಿ ಲಭಿಸಿದೆ.
ಮೈದಾನದಲ್ಲಿ ಆಡುವ ಸಂದರ್ಭದಲ್ಲಿ ಅಪಾಯಕಾರಿ ಟ್ಯಾಂಕ್ ಕುಸಿದುಬಿದ್ದರೆ ಜೀವಕ್ಕೂ ಕುತ್ತು ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಕಾಲಮಿಂಚುವ ಮುನ್ನಾ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಜವಾಬ್ದಾರಿ ಸ್ಥಾನದಲ್ಲಿ ಇರುವವರದಾಗಿದೆ.




































