[t4b-ticker]

ಅವಿಭಜಿತ ಜಿಲ್ಲೆಯ ಜನರ ಸಂಸ್ಕೃತಿ ಪ್ರೀತಿ ಇತರರಿಗೂ ಮಾದರಿ-ನಿವೃತ್ತ ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್‌

Picture of RB NEWS

RB NEWS

Bureau Report

ಕಾರ್ಕಳ‌ : ಅವಿಭಜಿತ ದ.ಕ. ಜಿಲ್ಲೆಯ ಜನತೆ ಕಲೆ, ಸಂಸ್ಕೃತಿ, ಸಂಗೀತವನ್ನು ಆರಾಧಿಸುವವರಾಗಿದ್ದು ಕಲಾವಿದರಿಗೆ ಅವರು ನೀಡುವ ಗೌರವ, ಪ್ರೋತ್ಸಾಹ ಬೇರೆಲ್ಲೂ ಕಾಣಸಿಗದು. ಈ ಜಿಲ್ಲೆಯ ಜನರ ಪ್ರೀತಿ, ಹೃದಯ ಶ್ರೀಮಂತಿಕೆಗೆ ನಾನು ಮಾರು ಹೋಗಿದ್ದೇನೆ ಎಂಬುದಾಗಿ ಕರ್ನಾಟಕ ಕಲಾಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನಿವೃತ್ತ ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್ ಅಭಿಮತ ವ್ಯಕ್ತಪಟಿಸಿದರು.

ಕಾಂತಾವರ ಕನ್ನಡ ಸಂಘದ ೫೦ರ ಸಂಭ್ರಮದ ಪ್ರಯುಕ್ತ ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾದ ಸಹಯೋಗದಲ್ಲಿ ಅವರಿಂದ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಭವನದಲ್ಲಿ ಆಯೋಜಿಸಲಾಗಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ಮುನ್ನ ಮಾತನಾಡಿದರು.

ಶಾಸ್ತ್ರೀಯ ಸಂಗೀತ ಸಭಾ ಇದರ ಸ್ಥಾಪಕ ಕಾರ್ಯದರ್ಶಿ ಡಾ. ಪ್ರಕಾಶ್ ಶೆಣೈಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಾ. ಮುದ್ದು ಮೋಹನ್ ಅವರಿಗೆ ಸಹ ವಾದ್ಯ ಸಹಾಯಕರಾಗಿ ಹಾರ್ಮೋನಿಯಂ ನಲ್ಲಿ ಶ್ರೀ ಪಂಚಾಕ್ಷರಿ ಹಿರೇಮಠ, ತಬಲಾದಲ್ಲಿ ಶ್ರೀ ಕೇಶವ ಜೋಶಿ ಬೆಂಗಳೂರು, ವಯಲಿನ್ ನಲ್ಲಿ ಶ್ರೀ ಟಿ.ರಂಗ ಪೈ, ತಂಬೂರಿಯಲ್ಲಿ ಉಡುಪಿಯ ಸಪ್ನಾರಾಜ್ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಐದು ಕಲಾವಿದರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಮಿತ್ರಪ್ರಭಾ ಹೆಗ್ಡೆ, ದಿವಾಕರ್ ಕುಮಾರ್, ರತ್ನಾಕರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.

ಸದಾನಂದ ನಾರಾವಿ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ನಿತ್ಯಾನಂದ ಪೈ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top