ಅಳಿಯ, ಮೊಮ್ಮಗನಿಂದ ಕೊಲೆಗೀಡಾದ ನಿವೃತ್ತ ಶಿಕ್ಷಕ!

Picture of RB NEWS

RB NEWS

Bureau Report

ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದರು. ಇದೇ ಕಾರಣದಿಂದ ಬೇಸರಗೊಂಡಿದ್ದ ಬಾಲಕೃಷ್ಣಬಡೆಕಿಲ್ಲಾಯರ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆದಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20) ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾರೆ.

ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರದೊಂದಿಗ ವಿಜಯಲಕ್ಷ್ಮಿಯ ಸ್ಕೂಟರ್​ನಲ್ಲಿ ರಾಘವೇಂದ್ರ ಕೆದಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಬಡೆಕಿಲ್ಲಾಯಮನೆ ಸೇರಿದ್ದಾರೆ.

ಆರೋಪಿಗಳು ಬಾಲಕೃಷ್ಣ ಬಡೆಕಿಲ್ಲಾಯ ಹಾಗೂ ಅವರ ಕಿರಿಯ ಮಗ ಸುರೇಶ್ ಭಟ್ ನನ್ನು ಹತ್ಯೆ ಮಾಡಲು ಕೂಡ ಯೋಜನೆ ರೂಪಿಸಿದ್ದು, ಬಾಲಕೃಷ್ಣ ಅವರನ್ನು ಕೊಲೆ ಮಾಡಿದ ಬಳಿಕ ಸುರೇಶ್ ಭಟ್ ಬರುತ್ತಾರೆ ಎಂದು ಕೆಲ ಕಾಲ ಮನೆಯಲ್ಲೇ ಕಾದು ಕುಳಿತಿದ್ದರು. ಆದರೆ ಆತ ಬಾರದೆ ಇದ್ದಾಗ ಹಂತಕರು ತಲಾ 50 ಸಾವಿರ ರೂ.ಮೌಲ್ಯದ ಎರಡು ಬಾಂಡ್ ಪೇಪರ್‌ಗಳು ಹಾಗೂ ಕಬೋರ್ಡ್‌ನಲ್ಲಿದ್ದ ಕೆಲವು ದಾಖಲೆಗಳನ್ನು ತೆಗೆದುಕೊಂಡು ಸ್ಕೂಟರ್‌ನಲ್ಲಿ ಬಂದ ದಾರಿಯಲ್ಲೇ ಮನೆಗೆ ಪರಾರಿಯಾಗಿದ್ದಾರೆ ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ.

ಜಿಲ್ಲಾ ಎಸ್ಪಿ ಯತೀಶ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ. ತಂಡದಲ್ಲಿ ಡಿವೈಎಸ್ಪಿ ವಿಜಯಪ್ರಸಾದ್, ಬೆಳ್ತಂಗಡಿ ಸಿಐ ನಾಗೇಶ್ ಕದ್ರಿ, ಧರ್ಮಸ್ಥಳ ಎಸ್ಐಗಳಾದ ಕಿಶೋರ್ ಮತ್ತು ಸಮರ್ಥ ಗಾಣಿಗೇರ ಇದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top