ಮೂಡುಬಿದಿರೆ: ಅಳಿಯೂರು ವಿಕಾಸನಗರದ ಶ್ರೀ ಶನೀಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಇರುವ ಗೋಳಿಮರದ ಬೃಹತ್ ಕೊಂಬೆ ಶನಿವಾರ ನಡುಕಿನ ಜಾವದಲ್ಲಿ ಮುರಿದುಕೊಂಡಿದೆ.
ಶ್ರೀ ಶನೀಶ್ವರ ದೇವಸ್ಥಾನದ ಎಡಬದಿಯಲ್ಲಿ ಗೋಳಿಮರ ಇದ್ದು, ಇದರ ತಳಭಾಗದಲ್ಲಿ ನಾಗ ಹಾಗೂ ದೈವ ಸನ್ನಿಧಿಯ ಕಟ್ಟೆಯೂ ಇದೆ. ಕಟ್ಟೆಯೊಳಗೆ ಬೃಹತ್ ಎತ್ತರದಲ್ಲಿ ಗೋಳಿಮರ ಬೆಳೆದುನಿಂತಿದ್ದು, ಅದರ ಮುಂಭಾಗದಲ್ಲಿ ಬೃಹತ್ ಗಾತ್ರದ ಕೊಂಬೆ ಮುರಿದು ಧರೆಶಾಹಿಯಾಗಿದೆ.


ಸುಡುಬಿಡಿಲ ಕಾಲಘಟ್ಟದಲ್ಲಿ ಅಕಾಲಿಕ ಮಳೆಯಾಗಲಿ, ಗಾಳಿ ಇಲ್ಲದ ದಿನಗಳಲ್ಲಿ ಮರದ ಕೊಂಬೆ ಮುರಿದುಕೊಂಡಿದೆ.
ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಲೈನ್ ತುಂಡರಿಸಿಕೊoಡಿದ್ದರೂ, ವಿದ್ಯತ್ ಕಂಬಗಳಿಗೆ ಯಾವುದೇ ತರದಲ್ಲಿ ಹಾನಿ ಸಂಭವಿಸಿಲ್ಲ.
ಮೆಸ್ಕಾಂ ಇಲಾಖಾ ಸಿಬ್ಬಂದಿಗಳು ತ್ವರಿತಗತಿಯಲ್ಲಿ ದುರಸ್ಥಿ ಕಾಮಗಾರಿ ನಡೆಸಿ ಮಧ್ಯಾಹ್ನದ ವೇಳೆಗೆ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಕಂಡುಬoದ ತಾಂತ್ರಿಕ ಸಮಸ್ಸೆಯನ್ನು ನೀಗಿಸಿದ್ದಾರೆ.


























