ಅಮಲು ಪದಾರ್ಥ ನೀಡಿ ಯುವತಿಗೆ ಲೈಂಗಿಕ ದೌರ್ಜನ್ಯ
ಕಾರ್ಕಳ: ಕುಕ್ಕುಂದೂರು ಅಯ್ಯಪ್ಪ ನಗರದ ಮನೆಯೊಂದರ ಸಮೀಪದಿಂದ ಯುವತಿಯೊಬ್ಬಳನ್ನು ನಾಲ್ವರ ತಂಡವೊಂದು ಕರೆದೊಯ್ದು ಅಮಲು ಪದಾರ್ಥ ನೀಡಿ ಲೈಂಗಿಕ ದೌರ್ಜನ್ಯ ವೆಸಗಿದ್ದ ಪರಿಣಾಮವಾಗಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ಕಾಡುಪ್ರದೇಶದಲ್ಲಿ ಅಲ್ತಾಫ್ ಹಾಗೂ ಆತನ ಇತರ ಇಬ್ಬರು ಸಹಚರರು ಈ ಕೃತ್ಯ ಎಸಗಿದ್ದಾರೆಂಬ ಮಾಹಿತಿ ಲಭಿಸಿದೆ.
ಸಂಜೆಯಾಗಿತ್ತಿದ್ದ ಯುವತಿಯನ್ನು ಮತ್ತೇ ಆಕೆಯ ಮನೆ ಸಮೀಪದಲ್ಲಿ ತಂದು ಬಿಟ್ಟ ತಂಡ ಅಲ್ಲಿಂದ ಕಾಲ್ತಿತಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಹಿಂದು ಪರ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಸರಕಾರಿ ಆಸ್ಪತ್ರೆ ಹಾಗೂ ಕಾರ್ಕಳ ಪೊಲೀಸ್ ಠಾಣೆ ಪರಿಸರದಲ್ಲಿ ಬೀಡು ಬಿಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ
ಬಜರಂಗದಳ ರಾಜ್ಯ ಸಂಚಾಲಕ ಕೆ.ಆರ್ ಸುನೀಲ್ ಅವರು ಈ ಕುರಿತು ಆತಂಕ ವ್ಯಕ್ತಪಡಿಸಿ ಮಾತನಾಡಿ ಅಮಲು ಪದಾರ್ಥ ಸೇವನೆ ಯಿಂದ ಮತ್ತೊಂದು ಜೀವದೊಂದಿಗೆ ಚೆಲ್ಲಾಟವಾಡುವ ದೊಡ್ಡ ದಾದ ತಂಡ ಸಕ್ರಿಯಾಗೊಂಡಿದೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯ ಜೀವದೊಂದಿಗೆ ಚೆಲ್ಲಾಟವಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಲೇ ಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕಾರ್ಕಳ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಅಲ್ತಾಫ್ ಹಾಗೂ ಸವೇರಾ ರಿಚರ್ಡ್ ಕಾರ್ಡೋಸಾ ಎಂಬವರನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ನಡೆದ ಸ್ಥಳ : ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ಕಾಡುಪ್ರದೇಶ
- ಅಲ್ತಾಪ್ ಹಾಗೂ 2 ಮಂದಿ
ಯುವತಿಗೆ ಸುಮಾರು 03 ತಿಂಗಳಿನಿಂದ ಇನ್ಸ್ಟಾ ಗ್ರಾಮ್ ಮೂಲಕ ಬಂಗ್ಲೆಗುಡ್ಡೆಯ ಅಲ್ತಾಫ್ ಎಂಬುವವನ ಪರಿಚಯವು ಆಗಿದ್ದು, ಆಗಸ್ಟ್ 23 ರಂದು ಮದ್ಯಾಹ್ನ ಸುಮಾರು 12:೦೦ ಗಂಟೆಗೆ ಯುವತಿಯನ್ನು ಅಯ್ಯಪ್ಪ್ನನಗರ ಜೇನು ಕೃಷಿ ಸ್ಥಳದ ಬಳಿಯಿಂದ ಆತನ ಬಿಳಿ ಬಣ್ಣದ ಕಾರಿನಲ್ಲಿ ಬಲಾತ್ಕಾರವಾಗಿ ಕರೆದುಕೊಂಡು ಕೌಡೂರು ಗ್ರಾಮದ ರಂಗನಪಲ್ಕೆ ಕಾಡಿನ ಜಾಗಕ್ಕೆ ಕರೆದುಕೊಂಡು ಹೊಗಿದ್ದಾನೆ. ಅಲ್ಲಿಗೆ ಇತರ ಇಬ್ಬರು ಕಾರಿನಲ್ಲಿ ಬಂದು ಬಿಯರ್ ಮಧ್ಯದ ಬಾಟಲಿಗಳನ್ನು ಆಲ್ತಾಫ್ ನಲ್ಲಿ ನೀಡಿರುತ್ತಾರೆ ಅಲ್ತಾಫ್ ನು ಸುಮಾರು 01 ಗಂಟೆಗೆ ಬಿಯರ್ ಬಾಟಲಿಗೆ ಯಾವುದೋ ಮಾದಕ ವಸ್ತುವನ್ನು ಬೆರಸಿ ಯುವತಿಗೆ ಬಲಾತ್ಕಾರವಾಗಿ ಕುಡಿಸಿ ನಂತರ ಅವಳ ಹತೋಟಿ ತಪ್ಪಿದಾಗ, ಕಾರಿನಲ್ಲಿ ಅವಳ ಬಲಾತ್ಕಾರ ಅತ್ಯಾಚಾರ ನಡೆಸಿದ್ದಾರೆ.
ಹೆಣ್ಣಿನ ಮಾನದೊಂದಿಗೆ ಚೆಲ್ಲಾಟವಾಡಿದ ಧೂರ್ತರು ಇವರು ಬಂಗ್ಲೆಗುಡ್ಡೆಯ ಅಪ್ತಾಫ್ , ಸವೇರಾ ರಿಚರ್ಡ್ ಕಾರ್ಡೋಸಾ ರಂಗನಪಲ್ಕೆ






















