ಅತ್ತೂರು ಪರ್ಪಲೆಗಿರಿಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ ಸಪರಿವಾರ ದೈವಗಳ ಗುಡಿ ಗೋಪುರ…

Picture of RB NEWS

RB NEWS

Bureau Report

ಗಣೇಶ್ ನಾಯಕ್, ಸಾಣೂರು


ಕಾರ್ಕಳ: ಕರಿಯಕಲ್ಲಿನ ಮೇಲೆ ತಲೆಯೆತ್ತಿ ನಿಂತಿರುವ ಸಂಸ್ಕೃತಿ ಸಂಸ್ಕಾರಗಳನ್ನು ಎಲ್ಲೆಡೆ ಪಸರಿಸಿದ ಖ್ಯಾತಿವೆತ್ತ ಕಾರ್ಕಳ ಧರ್ಮಕಾರ್ಯದ ಪುಣ್ಯಭೂಮಿ.
ಇಲ್ಲಿರುವ ದೇವಸ್ಥಾನ, ದೈವಸ್ಥಾನ ಗಳು ವಿಶ್ವದ ಎಲ್ಲೆಡೆ ಕೂಡ ಹೆಸರನ್ನು ಪಡೆದವುಗಳು. ಕಾರ್ಕಳದ ಎತ್ತರದ ಪ್ರದೇಶದಲ್ಲಿ ಒಂದೆಡೆ ೧೪೩೨ನೇ ಸಾಲಿನಲ್ಲಿ ಬೃಹತ್ ಗೋಮಟೇಶ್ವರನ ಮೂರ್ತಿ ಸ್ಥಾಪನೆಯಾದರೆ ಇನ್ನೊಂದೆಡೆ ಗೋಮಟೇಶ್ವರ ಬೆಟ್ಟದಿಂದ ಸ್ವಲ್ಪವೇ ದೂರವಿರುವ ಪರ್ಪಲೆ ಬೆಟ್ಟ ಋಷಿ ಮುನಿಗಳ ತಪೋಭೂಮಿ. ಇಲ್ಲಿ ಮುನಿ ಗಳು ಯಾವ ರೀತಿಯಲ್ಲಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಇಲ್ಲಿರುವ ಗುಹೆಗಳೇ ಸಾಕ್ಷಿ ಹೇಳುತ್ತವೆ. ಈ ಗುಹೆಯೊಳಗೆ ಹೊಕ್ಕಾಗ ಆಗುವ ಮನಶಾಂತಿ, ಏಕಾಗ್ರತೆ ಹಾಗೂ ಸುಂದರ ಪರಿಸರ ಇವೆಲ್ಲವೂ ಕೂಡ ಇಲ್ಲಿ ಸಾವಿರಾರು ವರ್ಷಗಳಿಂದಲೂ ಧರ್ಮ ಪ್ರಭಾವನೆ ಆಗುತ್ತಲೇ ಬರುತ್ತಿತ್ತು ಎಂಬು ದರ ಸ್ಪಷ್ಟ ನಿದರ್ಶನವಾಗಿದೆ.


೧೪೩೨ರಲ್ಲಿ ಕಾರ್ಕಳದಲ್ಲಿ ಗೋಮಟೇಶ್ವರನ ಬೃಹತ್ ಮೂರ್ತಿ ಸ್ಥಾಪನೆ ಆದ ಬಳಿಕ ಈ ವಿಗ್ರಹವನ್ನು ಕೆತ್ತಿದ ಬೀರ ಕಲ್ಕುಡನಿಗೆ ಉಡುಗೊರೆ ರೂಪದಲ್ಲಿ ಪರ್ಪಲೆಯ ಭೂಮಿಯನ್ನು ಉಡುಗೊರೆಯಾಗಿ ನೀಡುವುದಾಗಿ ಅರಸರು ಆಶ್ವಾಸನೆ ನೀಡಿದ್ದರಂತೆ.


ವಿಶೇಷ ಶಕ್ತಿಗಳನ್ನು ಹೊಂದಿದ್ದ ಕಲ್ಕುಡ ಹಾಗೂ ಆತನ ತಂಗಿ ಕಲ್ಲುರ್ಟಿ ತಿರುಪತಿ ಯಾತ್ರೆ ಮುಗಿಸಿ ಬಂದ ಬಳಿಕ ಪರ್ಪಲೆ ಗುಡ್ಡಕ್ಕೆ ಕಾಲಿಟ್ಟು ಇಲ್ಲಿಂದಲೇ ಮೂಡುಭಾಗದಲ್ಲಿ ಕಾಣುವ ಅರಸರ ಮನೆಗೆ ದೃಷ್ಟಿ ನೆಟ್ಟರು ಎಂದು ಜನಪದೀಯ ಐತಿಹ್ಯಗಳಿವೆ. ಹೀಗಾಗಿ ಇಂದಿಗೂ ಕೂಡ ಪರ್ಪಲೆ ಗಿರಿ ಬಹಳ ಪ್ರಾಮುಖ್ಯತೆ ಪಡೆದ ಬೆಟ್ಟವಾಗಿದೆ. ಇಂತಹ ಬೆಟ್ಟದ ಪುಣ್ಯ ಭೂಮಿಯು ಈ ತಲೆ ಮಾರಿನ ಭಕುತ ಜನರ ಭಕ್ತಿಗೆ ಪೂರಕವಾಗಿ ಪರ್ಪಲೆ ಕ್ಷೇತ್ರವಾಗಿ ತಲೆ ಎತ್ತಿ ನಿಲ್ಲಲು ಪ್ರಾರಂಭವಾಗಿದೆ.


ಪರ್ಪಲೆ ಪ್ರದೇಶವೇ ಒಂದು ಸುಂದರ ಪರಿಸರವಾಗಿದೆ. ಎತ್ತರದ ಪ್ರದೇಶದ ಮೇಲೆ ಹೋದವರಿಗೆ ಮಾತ್ರ ಈ ಬೆಟ್ಟದ ಅರಿವು ಮೂಡಲು ಸಾಧ್ಯ. ಈ ಬೆಟ್ಟದ ಮೇಲಕ್ಕೆ ಹೋದಾಗ ಸುತ್ತ ಮುತ್ತಲು ಕಾಣುವ ಹಲವಾರು ನಗರಗಳು ಬೆಳಗ್ಗಿನ ಹೊತ್ತು ಹಾಗೂ ಸಾಯಂ ಕಾಲದ ಹೊತ್ತು ಕಾಣುವ ಸಮುದ್ರ ಹಾಗೂ ಸೂರ್‍ಯನ ಸುಂದರ ರೂಪ ಇಲ್ಲಿ ಬೀಸುವ ತಂಪಾದ ಗಾಳಿ ಇವೆಲ್ಲವೂ ಏಕಾಗ್ರತೆ ಹಾಗೂ ಧರ್ಮ ಇವೆಲ್ಲವೂ ಇಲ್ಲಿ ಇರುವ ಪುಣ್ಯದ ಪ್ರತೀಕವಾಗಿದೆ.


ಅಭಿವೃದ್ಧಿ ಕಾರ್ಯ...


ಇಂತಹ ಸುಂದರದ ಪ್ರದೇಶದಲ್ಲಿ ಕಲ್ಕುಡ ಹಾಗೂ ಸಪರಿವಾರ ದೈವಗಳ ಗುಡಿ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಲಿದೆ.


ದಾನಿಗಳು ನೀಡುತ್ತಿರುವ ಸಹಕಾರ ದಿಂದ ದೈವದ ಗುಡಿಗಳ ನಿರ್ಮಾಣಕ್ಕೆ ಕೆತ್ತನೆ ಕಾರ್ಯ ಆರಂಭ ಮಾಡಲಾಗಿದೆ
ಈ ಕ್ಷೇತ್ರದಲ್ಲಿನ ಒಂದು ವಿಚಾರ ಮಾತ್ರ ಬಹಳ ವಿಶೇಷವಾದುದು. ಕಲ್ಕುಡ ಗುಡಿಯನ್ನು ದಾನಿಗಳ ಸಹಕಾರದಿಂದ ಹಾಗೂ ಶಿಲ್ಪಿಗಳ ಸಹಕಾರದಿಂದಲೇ ನಿರ್ಮಾಣ ಮಾಡಲಾಗುತ್ತಿರುವುದು ಮಾತ್ರ ಧಾರ್ಮಿಕ ವಿಶೇಷವಾಗಿದೆ.


ವೇದಮೂರ್ತಿ ಶ್ರೀ ಕೇಂಜ ಶ್ರೀಧರ ತಂತ್ರಿಗಳು, ಕುತ್ಯಾರು ಇವರ ಮಾರ್ಗ ದರ್ಶನದಲ್ಲಿ ಪೂಜಾದಿ ಕಾರ್ಯಗಳು, ದೇವತಾ ಕಾರ್ಯಗಳು ಆರಂಭವಾಗಿದೆ. ಪ್ರತಿ ತಿಂಗಳ ಸಂಕ್ರಾಂತಿಯ ದಿನ ಭಕ್ತರು ಈ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಹಲ ವಾರು ಪವಾಡಗಳು ನಡೆಯುತ್ತಿರುವ ಅನುಭವ ಹಲವರಿಗೆ ಆಗಿದ್ದು ಇದೊಂದು ವಿಶೇಷ ಕ್ಷೇತ್ರವಾಗಿ ರೂಪುಗೊಳ್ಳುವ ಲಕ್ಷಣವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಜನರ ಸಹಕಾರವನ್ನು ಸಮಿತಿ ಕೋರಿದೆ.
ಈ ಬೆಟ್ಟ ಅತೀ ಎತ್ತರವಾದ ಬೆಟ್ಟ ವಾದುದರಿಂದ ಇಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಹಳ ತ್ರಾಸದಾಯಕ. ಹೀಗಾಗಿ ಎಲ್ಲಾ ಭಕ್ತರು ಒಗ್ಗೂಡಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ.

ಕಲ್ಲಿನ ವ್ಯಾಪಾರಿಗಳು ಕಲ್ಲು, ಶಿಲ್ಪಿಗಳು ಕೆತ್ತನೆ ಕೆಲಸ, ಕಲ್ಲಿನ ವ್ಯಾಪಾರಿಗಳು ಕಲ್ಲನ್ನು ತುಂಡರಿಸುವ ಕೆಲಸ, ಮರದ ಕೆತ್ತನೆಯ ಶಿಲ್ಪಿಯ ಉದಾರ ಕೊಡುಗೆ, ಕ್ರೇನ್‌ಗಳ ಉಚಿತ ಸೇವೆ, ಲಾರಿ ಮುಂತಾದ ಉಚಿತ ಸೇವೆ ಸೇರಿದಂತೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಗರ್ಭಗುಡಿಯ ಕೆಲಸ ಅವರವರ ವೃತ್ತಿ ವ್ಯಾಪಾರಿಗಳಿಂದ ಉಚಿತವಾಗಿ ನಡೆಯುತ್ತಿದೆ. ಉಳಿದಂತೆ ಸುತ್ತು ಪೌಳಿಯ ಕೆಲಸ, ಅಂಗಣಕ್ಕೆ ನೆಲಹಾಸು, ದೀಪಗೋಪುರ, ಕೊಡಿಯಡಿಗಳು ಊರ ಪರವೂರ ದಾನಿಗಳಿಂದ ನೆರವೇರಿಸುವುದಕ್ಕೆ ವಸ್ತುವಾರು ಅವಕಾಶಗಳನ್ನು ಕಲ್ಪಿಸಲಾಗಿದೆ.

ತುಳುನಾಡಿನ ಹಲವಾರು ಕುಟುಂಬಗಳಲ್ಲಿ ಕಲ್ಕುಡ, ಕಲ್ಲುರ್ಟಿ ದೈವಗಳು ಬೇರೆ ಬೇರೆ ನಾಮಾಂಕಿತ ಗಳಿಂದ ನೆಲೆವೂರಿದ್ದಾರೆ.


ಕೆಲವೆಡೆ ಜಾಗದ ದೈವಗಳಾಗಿ, ಕೆಲವೆಡೆ ಊರಿನ ದೈವಗಳಾಗಿ ನೆಲೆನಿಂತು ರಕ್ಷಿಸುತ್ತಿದ್ದಾರೆ. ಇಂತಹ ಕಲ್ಕುಡ ಕಲ್ಲುರ್ಟಿ ದೈವಗಳನ್ನು ಆರಾಧಿಸುವವರು ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ ಈ ದೈವಗಳ ಪುನರುತ್ಥಾನಕ್ಕೆ ಹೆಚ್ಚಿನ ಸಹಕಾರವನ್ನು ನೀಡುವಂತೆ ಸಮಿತಿ ಅಪೇಕ್ಷಿಸಿದೆ.

ಭೂನಿಧಿ ಕಾಣಿಕೆ


ಮೂಲ್ಕಿಯ ವಿನೋದ್ ದೇವದಾಸ್ ಕಾಮತ್ ಇವರು ದಾನವಾಗಿ ನೀಡಿದ ೫೪ ಸೆಂಟ್ಸ್ ಜಾಗ ಹಾಗೂ ಅವರಿಂದ ಖರೀದಿಸಲ್ಪಟ್ಟ ೪.೩ಎಕ್ರೆ ಸೇರಿ ೪ ಎಕ್ರೆ ೫೫ ಸೆಂಟ್ಸ್ ಜಾಗ ಈಗಾಗಲೇ ಕ್ಷೇತ್ರಕ್ಕೆ ಸಲ್ಲಿಕೆಯಾಗಿದೆ.
ಆದರೆ ಇದರ ಪ್ರದೇಶವು ಇಳಿಜಾರುಗಳಿಂದ ಕೂಡಿದ್ದು ಆಯ ಪ್ರಮಾಣದ ದೇವಸ್ಥಾನ, ದೈವಸ್ಥಾನ ನಿರ್ಮಾಣ ಆಗುವಾಗ ವಾಸ್ತು ಪ್ರಕಾರವಾಗಿ ಈ ಕ್ಷೇತ್ರಕ್ಕೆ ಪೂರ್ವ ದಿಕ್ಕಿನಲ್ಲಿರುವ ಅರಣ್ಯ ಇಲಾಖೆಯ ಸುಮಾರು ೨.೫೦ಎಕ್ರೆಯಷ್ಟು ಪ್ರದೇಶ ಪ್ರಥಮ ಹಂತವಾಗಿ ಮತ್ತು ಗುಹೆ ಬಾವಿಗಳು ಸೇರಿದಂತೆ ಸುಮಾರು ೫ ಎಕ್ರೆ ಪ್ರದೇಶ ದ್ವಿತೀಯ ಹಂತದಲ್ಲಿ ಅರಣ್ಯ ಇಲಾಖೆಯಿಂದ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಪಡೆಯುವ ಅಗತ್ಯ ಇರುತ್ತದೆ.


ಇದಕ್ಕಾಗಿಯೇ ಸುಮಾರು ೧ ಕೋಟಿ ರೂ.ಗಳಷ್ಟು ಧನ ಸಂಗ್ರಹ ಮಾಡುವ ನಿಟ್ಟಿನಲ್ಲಿ ಎಕ್ರೆಗೆ ೧೨ಲಕ್ಷ ರೂ.ಗಳಂತೆ ಇದನ್ನೇ ವಿಂಗಡಿಸಿ ಅರ್ಧ ಎಕ್ರೆಗೆ ೬ಲಕ್ಷ ರೂ. ೧/೪ ಎಕ್ರೆಗೆ ೩ ಲಕ್ಷ ರೂ., ೧೦ಸೆಂಟ್ಸ್‌ಗೆ ೧ ಲಕ್ಷದ ೨೦ಸಾವಿರ ರೂ., ೫ ಸೆಂಟ್ಸ್‌ಗೆ ೬೦ಸಾವಿರ ರೂ., ೧ ಸೆಂಟ್ಸ್‌ಗೆ ೧೨ ಸಾವಿರ ರೂ., ೧/೨ ಸೆಂಟ್ಸ್‌ಗೆ ೬ಸಾವಿರ ರೂ., ೧/೪ ಸೆಂಟ್ಸ್‌ಗೆ ೩ ಸಾವಿರದಂತೆ ಭಕ್ತರು ಶಕ್ತ್ಯಾನುಸಾರ ಧನ ಸಹಾಯ ನೀಡಿ ಈ ಕ್ಷೇತ್ರವನ್ನು ಅಭಿವೃದ್ದಿ ಪಡಿಸ ಬಹುದು. ನಮ್ಮೆಲ್ಲರ ಜೀವಮಾನದ ಕಾಲಘಟ್ಟದಲ್ಲಿ ಆಗುತ್ತಿರುವ ಈ ಪುಣ್ಯಕಾರ್ಯದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ
ಗೌರವಾಧ್ಯಕ್ಷರು: ಶ್ರೀ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ, ಶ್ರೀ ಬೋಳ ಪ್ರಭಾಕರ ಕಾಮತ್ ಉದ್ಯಮಿಗಳು, ಕಾರ್ಕಳ, ಶ್ರೀ ಎಮ್. ಕೆ. ವಿಜಯ ಕುಮಾರ್ ಹಿರಿಯ ವಕೀಲರು, ಕಾರ್ಕಳ, ಶ್ರೀ ಎನ್. ವಿನಯ ಹೆಗ್ಡೆ ಅಧ್ಯಕ್ಷರು, ನಿಟ್ಟೆ ವಿದ್ಯಾಸಂಸ್ಥೆ, ಶ್ರೀ ವಿಠಲ ಶೆಟ್ಟಿ ಬಲಿಪಗುತ್ತು, ಅತ್ತೂರು, ಶ್ರೀ ಕೆ. ಜಯರಾಮ ಪ್ರಭು ಆಡಳಿತ ಮೊಕ್ತೇಸರರು,
ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ

ಕಾರ್ಯಕಾರಿ ಸಮಿತಿ
ಡಾ| ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು,
ಶ್ರೀ ಬೋಳ ಪ್ರಶಾಂತ್ ಕಾಮತ್ ಕಾರ್ಯಾಧ್ಯಕ್ಷರು,
ಶ್ರೀ ಎಸ್.ನಿತ್ಯಾನಂದ ಪೈ ಕೋಶಾಧಿಕಾರಿ,

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top