ಅಜೆಕಾರು ಗುಡ್ಡೆಯಂಗಡಿ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಸಮಾರಂಭ

Picture of RB NEWS

RB NEWS

Bureau Report

ಕಾರ್ಕಳ : ಅಜೆಕಾರು ಮರ್ಣೆ ಗ್ರಾಮದ ಗುಡ್ಡೆಯಂಗಡಿ ಅಂಗನವಾಡಿ ಶಾಲೆಯಲ್ಲಿ ಆಭರಣ ಜ್ಯುವೆಲ್ಲರ್ಸ್ ಕಾರ್ಕಳ , ಶ್ರೀರಾಮ್ ಜ್ಯುವೆಲ್ಲರ್ಸ್ ಹೆಬ್ರಿ ,ತುಳುನಾಡ ತುಡರ್ ಖ್ಯಾತಿಯ ತುಳುನಾಡ ಟ್ರಸ್ಟ್ ಇದರ ರಾಜ್ಯ ಸಂಚಾಲಕ ಕೀರ್ತಿ ಕಾರ್ಕಳ ಹಾಗೂ ಇತರ ದಾನಿಗಳಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಸುದಿನ ನ್ಯೂಸ್ ಡಿಜಿಟಲ್ ಮೀಡಿಯಾದ ಅರುಣ್ ಕುಮಾರ್ ಮರ್ಣೆ, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ, ವಿಜಯ ಗುಡ್ಡೆಯಂಗಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀವತ್ಸ ಹಾಗೂ ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷ ಅಕ್ಷತಾ ಉಪಸ್ಥಿತರಿದ್ದರು.

ಕೀರ್ತಿ ಕಾರ್ಕಳ ಇವರು ಮಾತನಾಡಿ ಇನ್ನಷ್ಟು ದಾನಿಗಳಿಂದ ಇತರ ಶಾಲೆಗಳಿಗೆ ಸಹಾಯವನ್ನು ನೀಡಬೇಕಾಗಿ ವಿನಂತಿಸಿದರು‌. ಅಂಗನವಾಡಿಯ ಶಿಕ್ಷಕಿ ಶ ವಿದ್ಯಾ ಸ್ವಾಗತಿಸಿದರು. ಸಹಾಯಕಿ ರತ್ನಾವತಿ ಉಪಸ್ಥಿತರಿದ್ದರು.

ಶಾಲೆಗೆ ಕುಕ್ಕರನ್ನು ನೀಡಿದ ಪುಷ್ಪ ಆಚಾರ್ಯ ಇವರಿಗೂ ಧನ್ಯವಾದ ಸಲ್ಲಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top