




ದಕ್ಷಿಣ ಭಾರತದ ಕುಖ್ಯಾತ ಕಳ್ಳ ಉಮೇಶ್ ಬಳೆಗಾರ ಬಂಧನ
ಉಡುಪಿ : ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮನೆ ಕಳ್ಳತನ ಮಾಡಿ ತಲೆಮಾರಿಸಿಕೊಂಡಿದ್ದ ಕುಖ್ಯಾತ ಕಳ್ಳ ಉಮೇಶ @ ಉಮೇಶ ಬಳೆಗಾರ @ ಉಮೇಶ ರೆಡ್ಡಿ ಎಂಬಾತನನ್ನು ಕಾಪು ವೃತ್ತ ನಿರೀಕ್ಷಕ ಅಜಮತ್ ಆಲಿ ರವರ ನೇತೃತ್ವದ ಅಪರಾಧ ಪತ್ತೆದಳ ದಸ್ತಗಿರಿ ಮಾಡಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುತ್ತಾರೆ.
1) ದಿನಾಂಕ 26/11/ 2025 ರಿಂದ ದಿನಾಂಕ 05/12/2025 ರ ಮದ್ಯೆ ಕಾಪು ತಾಲೂಕು ಕೋಟೆ ಗ್ರಾಮದ ಕಟಪಾಡಿ ಕಿನ್ನಿಗುಡ್ಡೆ ಪ್ರಭಾಕರ್ ಅಮೀನ್ ರವರ ಮನೆಯಲ್ಲಿ ರೂಪಾಯಿ 20,000/- ಮೌಲ್ಯದ ಚಿನ್ನಾಭರಣ ಹಾಗೂ ರೂಪಾಯಿ 17,000/-ನಗದು ಹಣ ಕಳ್ಳತನ ಪ್ರಕರಣ
2) ದಿನಾಂಕ 04/12/2025 ರಂದು ಕಾಪು ತಾಲೂಕು ಮಲ್ಲಾರು ಗ್ರಾಮದ ಕಾಪು ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ರೂಪಾಯಿ 3,90,000/-ಮೌಲ್ಯದ ಚಿನ್ನಾಭರಣ ಮತ್ತು ರೂಪಾಯಿ 1,500/- ಮೌಲ್ಯದ ಬೆಳ್ಳಿ ವಸ್ತುಗಳ ಕಳವು ಪ್ರಕರಣ ಗಳನ್ನು ಪತ್ತೆ ಹಚ್ಚುವರೇ ಕಾಪು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪಿಎಸ್ಐ ಅನಿಲ್ ಕುಮಾರ್ ನಾಯಕ್, ಕಾಪು ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪಿಎಸ್ಐ ಶುಭಕರ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ಎ ಎಸ್ ಐ ರಾಜೇಶ್ ಪಿ, ಕಾಪು ಪೊಲೀಸ್ ಠಾಣಾ ಪಿ ಸಿ ರಘು ಮತ್ತು ಮೋಹನ್ ಚಂದ್ರ ಹಾಗೂ ಕಾಪು ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಹೆಚ್ ಸಿ ರಿಯಾಜ್, ಪಿ ಸಿ ಜೀವನ್ ಕುಮಾರ್ ರವರ ವಿಶೇಷ ಅಪರಾಧ ಪತ್ತೆ ದಳ ಕಳವಾದ ಸ್ಥಳದಲ್ಲಿ ದೊರೆತ ಬೆರಳು ಮುದ್ರೆಯ ಸಹಾಯದಿಂದ ಆರೋಪಿ ಉಮೇಶ ಬಳೆಗಾರನ ಬಗ್ಗೆ ಕರ್ನಾಟಕ ರಾಜ್ಯ, ಕೇರಳ ರಾಜ್ಯ, ತಮಿಳುನಾಡು ರಾಜ್ಯ, ಆಂಧ್ರಪ್ರದೇಶ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ಮೇಲೆ ದಾಖಲಾದ ಕಳವು ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಈ ದಿನ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಉಮೇಶ್ ಬಳೆಗಾರನ ಮೇಲೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಬೆಳ್ತಂಗಡಿ ಪೊಲೀಸ್ ಠಾಣೆ, ಪುತ್ತೂರು ನಗರ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಬಂಟ್ವಾಳ ಪೊಲೀಸ್ ಠಾಣೆ, ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆ, ಉಡುಪಿ ನಗರ ಪೊಲೀಸ್ ಠಾಣೆ, ಮಲ್ಪೆ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆ, ಬಸವನಹಳ್ಳಿ ಪೊಲೀಸ್ ಠಾಣೆ, ಕೊಪ್ಪ ಪೊಲೀಸ್ ಠಾಣೆ, ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣೆಯಲ್ಲಿ,
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆ, ಕಾಸರಗೋಡು ಪೊಲೀಸ್ ಠಾಣೆ, ಕಣ್ಣೂರು ಜಿಲ್ಲೆಯ ತಾಳಿಪರಂಬ ಪೊಲೀಸ್ ಠಾಣೆ, ಕೊಟ್ಟಾಯಂ ಜಿಲ್ಲೆಯ ವೈಕಂ ಪೊಲೀಸ್ ಠಾಣೆ, ತಲಾಯಿಲ್ ಪರಂಬ ಪೊಲೀಸ್ ಠಾಣೆ, ಆಯಾರ್ ಕುನ್ನಂ ಪೊಲೀಸ್ ಠಾಣೆ, ಮಲಪುರಂ ಜಿಲ್ಲೆಯ ತಾನಿಪಾಲಂ ಪೊಲೀಸ್ ಠಾಣೆ, ಕಲ್ಲಿಕೋಟೆ ಜಿಲ್ಲೆಯ ಮಾವೂರು ಪೊಲೀಸ್ ಠಾಣೆ, ಪಾಲಕ್ಕಾಡು ಜಿಲ್ಲೆಯ ಪಾಲಕಾಡು ನಗರ ಉತ್ತರ ಪೊಲೀಸ್ ಠಾಣೆ, ಕೊಂಗಾಡು ಪೊಲೀಸ್ ಠಾಣೆ, ತ್ರಿಶೂರು ಜಿಲ್ಲೆಯ ವಡಕಂಚೇರಿ ಪೊಲೀಸ್ ಠಾಣೆ, ತಮಿಳುನಾಡು ರಾಜ್ಯದ ಸೇಲಂ ಪೊಲೀಸ್ ಠಾಣೆ, ಧರ್ಮಪುರಿ ಪೊಲೀಸ್ ಠಾಣೆ, ಕನ್ಯಾಕುಮಾರಿ ಪೊಲೀಸ್ ಠಾಣೆ, ದಿಂಡಿಗಲ್ ಪೊಲೀಸ್ ಠಾಣೆ ಮತ್ತು ಆಂಧ್ರಪ್ರದೇಶ ರಾಜ್ಯದ ವೈಜಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ದಸ್ತಗಿರಿ ವಾರಂಟ್ ಜ್ಯಾರಿಯಲ್ಲಿರುತ್ತದೆ.
ಸದರಿ ಆರೋಪಿಯು ಬಾಲ್ಯದಲ್ಲಿಯೇ ಕಳ್ಳತನ ಮಾಡುತ್ತಿದ್ದು ಮಂಗಳೂರು ನಗರ ಉರ್ವ ಪೊಲೀಸ್ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಮಾನ್ಯ ನ್ಯಾಯಾಲಯದಲ್ಲಿ ಬಾಲಾಪರಾಧಿಯಾಗಿ ಶಿಕ್ಷೆ ಆಗಿರುತ್ತದೆ. ಸದರಿ ಆರೋಪಿಯು ಇತ್ತೀಚೆಗೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪುರಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೋಂದರಲ್ಲಿ ನ್ಯಾಯಾಲಯದಲ್ಲಿ 2 ವರ್ಷ ಶಿಕ್ಷೆಯಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಇದ್ದು ದಿನಾಂಕ 29/11/2025 ರಂದು ಜೈಲಿನಿಂದ ಬಿಡುಗಡೆ ಹೊಂದಿ ಹೊರಗಡೆ ಬಂದಿರುತ್ತಾನೆ. ಈತನ ವಿರುದ್ಧ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ LPC ವಾರಂಟ್ ಜಾರಿಯಲ್ಲಿರುತ್ತದೆ.
.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ, ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಹಾಗೂ ಉಪವಿಭಾಗದ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ನಿರ್ದೇಶನದಂತೆ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ ಅವರ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಟಿ. ನಾಯ್ಕ, ಕಾಪು ಪಿಎಸ್ಐ ಶುಭಕರ, ಪಡುಬಿದ್ರೆ ಎಎಸ್ಐ ರಾಜೇಶ್, ಮೋಹನಚಂದ್ರ, ರಘು, ಜೀವನ್, ಜೀಪು ಚಾಲಕ ಜಗದೀಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನಾಲ್ವರು ಸಹೋದರರು ಕ್ರಿಮಿನಲ್ ಗಳು!

ಹಿರಿಯಡ್ಕ ಸಬ್ ಜೈಲ್ ನಲ್ಲಿ ರೌಡಿ ವಿನೋದ್ ಶೆಟ್ಟಿಗಾರನನ್ನು ಹತ್ಯೆಗೈದ ಬಳೆಗಾರ ಸಹೋದರರು.


ಪಿಟ್ಟಿನಾಗೇಶನ ಕೊಲೆಗೆ ಯತ್ನದ ಪ್ರತಿಕಾರವಾಗಿ ವಿನೋದ್ ಶೆಟ್ಟಿಗಾರನ ಕೊಲೆನಡೆದಿತ್ತು.

ನಾಗರಾಜ ಬಳೆಗಾರ
ತನ್ನ ತಮ್ಮಂದಿರಾದ ಮುತ್ತಪ್ಪ ಬಳೆಗಾರ, ನಾಗರಾಜ ಬಳೆಗಾರ, ಸುದರ್ಶನ ಬಳೆಗಾರ ಹಾಗೂ ಆತನ ಭಾವ ಸಂತೋಷ ಎಲ್ಲರೂ ಕೂಡ ಕಳ್ಳತನ ಮಾಡುವ ಹಿನ್ನೆಲೆ ಉಳ್ಳವರಾಗಿದ್ದು ಮುತ್ತಪ್ಪ ಬಳೆಗಾರ ಮತ್ತು ನಾಗರಾಜ ಬಳೆಗಾರ ಉಡುಪಿ ಜಿಲ್ಲೆ ಹಿರಿಯಡ್ಕ ಕಾರ್ಯಗೃಹದಲ್ಲಿ ನಡೆದ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಪ್ರಸ್ತುತ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸುದರ್ಶನ ಬಳೆಗಾರ ಮತ್ತು ಸಂತೋಷ ತಲೆಮರಿಸಿಕೊಂಡಿರುತ್ತಾರೆ.





































