[t4b-ticker]

ವಾರಭವಿಷ್ಯ‌ 14.06.2026 ರಿಂದ 20.06.2026ರ ತನಕ

Picture of RB NEWS

RB NEWS

Bureau Report

ವಾರಭವಿಷ್ಯ‌ 14.06.2026 ರಿಂದ 20.06.2026ರ ತನಕ

ಮೇಷ : ಶನಿ ಮತ್ತು ಕುಜರು ತಿಳಿಸುವಂತೆ ಯಾರನ್ನೂ ಜೀವನದಲ್ಲಿ ಅತಿಯಾಗಿ ನಂಬಬೇಡಿರಿ. ಅಧಿಕಾರ ಸಿಕ್ಕಿದಾಗ ದುರ್ಬಳಕೆ ಬೇಡ. ಅತಿಯಾದ ಉದಾಸೀನತೆ ಮಾರಕವಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿ ಹೊಸ ಪ್ರಯೋಗವನ್ನು ಮಾಡುವಿರಿ. ಕಣ್ಣಿನ ಬಗ್ಗೆ ಎಚ್ಚರವಿರಲಿ.

ವೃಷಭ : ಕೆಲಸದಲ್ಲಿ ಒತ್ತಡವಿರುತ್ತದೆ. ವೈವಾಹಿಕ ಜೀವನದಲ್ಲಿ ಚಂಚಲತೆ ಇರಲಿದೆ. ಇಟ್ಟ ಹೆಜ್ಜೆಯನ್ನು ಹಿಂದೆಗೆಯಬೇಡಿರಿ, ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಶುಭ ಕಾರ್ಯಗಳಿಗೆ ಅಡೆ ತಡೆ ಇರಲಿದೆ. ಎಲ್ಲವೂ ನೀವು ಹೇಳಿದಂತೆ ಆಗಬೇಕು ಎನ್ನುವುದು ಸರಿಯಲ್ಲ.

ಮಿಥುನ : ಪಾಲುದಾರಿಕೆಯಲ್ಲಿ ಹೊಸ ವ್ಯವಹಾರಗಳನ್ನು ನಡೆಸಿ ಲಾಭ ಹೆಚ್ಚಿಸಿ ಕೊಳ್ಳಿರಿ. ಸಾಂಸಾರಿಕ ವಿಷಯಗಳಲ್ಲಿ ತಾಳ್ಮೆ ಇರಲಿ. ಭೂಮಿ ಮತ್ತು ಮನೆ ಖರೀಧಿಗೆ ಒಳ್ಳೆಯ ಸಮಯ. ಇನ್ನೊಬ್ಬರ ಭಾವನೆಗಳಿಗೆ ಮಾನ್ಯತೆ ಕೊಡುವುದು ಅಗತ್ಯವಿದೆ. ಗುರುವಿನ ಅನುಗ್ರಹ ಇರುವ ಸಮಯವಾಗಿದೆ.

ಕರ್ಕಾಟಕ : ಕುಟುಂಬದವರೊಂದಿಗೆ ಒಡನಾಟ ಸಲ್ಲಾಪಗಳಿದ್ದರೆ ಕೌಟುಂಬಿಕ ಸಮಾಧಾನವಿರುತ್ತದೆ. ಮನಸ್ಸು ನಿಮ್ಮ ಹಿಡಿತದಲ್ಲಿರಲಿ. ತಲೆನೋವಿನ ಭಾದೆ ಕಾಡಲಿದೆ. ಯಥಾ ಶಕ್ತಿಯಾಗಿ ನಾಗ ದೇವರ ಸೇವೆಯನ್ನು ಮಾಡುತ್ತಾ ಬನ್ನಿರಿ. ಅಪೂರ್ಣವಾಗಿರುವ ಕೆಲಸಗಳಿಗೆ ಪೂರ್ಣತೆ ಬರಲಿದೆ.

ಸಿಂಹ : ಸವಾಲುಗಳನ್ನು ಎದುರಿಸುವ ಧೈರ್ಯ ತೋರಿದರೆ ಯಶಸ್ಸು ನಿಮ್ಮದಾಗಲಿದೆ. ಕಾರ್ಯ ಪೂರೈಕೆಯಲ್ಲಿ ಸಮಯದ ಮಿತಿ ಪಾಲಿಸಿದರೆ ಲಾಭಹೆಚ್ಚಲಿದೆ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಇರಲಿ. ಖರ್ಚಿನ ಮೇಲೆ ಹಿಡಿತ ಇರಲಿ ದೈವಾನುಗ್ರಹದ ಕೊರತೆ ಇರುವುದು ನೆನಪಿನಲ್ಲಿರಲಿ. ದೂರ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ.

ಕನ್ಯಾ : ಉತ್ತಮವಾದ ದೈವಾನುಗ್ರಹ ಇರುವುದರಿಂದ ಬುದ್ದಿವಂತಿಕೆಯಿಂದ ಯಾವುದೇ ಕೆಲಸಗಳನ್ನು ಮಾಡಿ ಮುಗಿಸುವಿರಿ, ಶನಿ ಕುಜರ ಕಾರಣದಿಂದ ಮನಸ್ಸು ಚಂಚಲಗೊಳ್ಳಲಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿ ದೊರೆಯಲಿದೆ. ಆರೋಗ್ಯದ ಕಡೆಗೆ ಗಮನವಿರಲಿ.

ತುಲಾ : ವ್ಯಾಪಾರ ವ್ಯವಹಾರಗಳಲ್ಲಿ ಸಾಲವಾಗದಂತೆ ಎಚ್ಚರವಹಿಸಿರಿ, ಸಂಗೀತ ನೃತ್ಯ ಕಲಾವಿದರಿಗೆ ಉತ್ತಮ ಭವಿಷ್ಯ ದೊರೆಯಲಿದೆ. ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುವುದು ಅಗತ್ಯವಿದೆ. ಮಾತು ಕಡಿಮೆಯಿರಲಿ, ಮಕ್ಕಳು ಕೂಡಾ ಸೂಕ್ತ ಸಮಯದಲ್ಲಿ ಸಹಾಯಕ್ಕೆ ಬಾರಲಾರರು.

ವೃಶ್ಚಿಕ : ರಾಹು ಶನಿಗೆ ಸೂಕ್ತ ಪರಿಹಾರವನ್ನು ಮಾಡಿಕೊಂಡಲ್ಲಿ ಉತ್ತಮ ಭವಿಷ್ಯವಿದೆ. ಸಂಸಾರದಲ್ಲಿ ಹೊಂದಾಣಿಕೆ ಇರಲಿ. ರಾಜಕೀಯ ಗಣ್ಯರಿಗೆ ಸೂಕ್ತ ಗೌರವ ಪ್ರಾಪ್ತಿ ಯೋಗವಿದೆ. ಭೂಮಿ ಪ್ರಾಪ್ತಿ ಯೋಗವಿದೆ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಮಾಡುವ ಪ್ರಯತ್ನ ಸಫಲವಾಗಲಿದೆ.

ಧನು : ಗುರುವಿನ ಅನುಗ್ರಹದ ಕೊರತೆ ಇರುವುದು ನಿಮಗೆ ತಿಳಿದಿರಲಿ. ಆರೋಗ್ಯದ ಕಡೆಗೆ ಗಮನ ಅತೀ ಅಗತ್ಯವಿದೆ. ಭಾರವಾದ ವಸ್ತುಗಳನ್ನು ಎತ್ತುವುದು ಬೇಡ. ವಾಹನ ಚಾಲಕರು ಎಚ್ಚರದಲ್ಲಿರುವುದು ಒಳ್ಳೆಯದು, ಹಣದ ವಿಷಯದಲ್ಲಿ ಎಚ್ಚರವಿರಲಿ.

ಮಕರ : ಹಳೆಯ ಸಮಸ್ಯೆಗಳೆಲ್ಲಾ ಒಂದೊಂದಾಗಿ ಪರಿಹಾರವಾಗಲಿದೆ. ದೈವಾನುಗ್ರಹ ಪ್ರಾಪ್ತಿಯಾಗಿದೆ. 59 ವರ್ಷಗಳ ನಂತರ ಗುರು ಶುಕ್ರ ಬುಧ ಜೊತೆಯಾಗಿ ನಿಮಗೆ ಅನುಗ್ರಹ ನೀಡಲಿದ್ದಾರೆ. ಬರುವ ಆದಾಯದಲ್ಲಿ ಗಣನೀಯವಾಗಿ ಹೆಚ್ಚಾಗಲಿದೆ. ಮನಸ್ಸಿನ ಭಯ ನಿವಾರಣೆಗಾಗಿ ದೇವಿ ಕ್ಷೇತ್ರಕ್ಕೆ ಹೋಗುವುದು ಒಳ್ಳೆಯದು.

ಕುಂಭ : ಸಾಡೇ ಸಾತ್ ಶನಿಯ ಪ್ರಭಾವಾದ ಜೊತೆಗೆ ಗುರುವಿನ ಅನುಗ್ರಹದ ಕೊರತೆಯೂ ಕಾಡಲಿದೆ. ನಿಮ್ಮ ತಾಯಿಯವರ ಆರೋಗ್ಯ ನಿಮ್ಮನ್ನು ಚಿಂತೆಗೇಡು ಮಾಡಲಿದೆ. ನಿಮ್ಮ ಬಿ ಪಿ ಹಿಡಿತದಲ್ಲಿರಲಿ. ಯಾರಲ್ಲಿಯೂ ಸಿಟ್ಟು ಮಾಡುವುದು ಬೇಡ ಉದ್ವೇಗ ಗೊಳ್ಳುವುದು ಹೆಚ್ಚಾಗಲಿದೆ.

ಮೀನಾ : ನಿಮಗೆ ಸಾಡೇ ಸಾತ್ ಶನಿಯ ಪ್ರಭಾವದಿಂದ ಮನಸ್ಸು ಚಂಚಲಗೊಳ್ಳಲಿದೆ. ಗುರುವಿನ ಅನುಗ್ರಹವಿರುವುದರಿಂದ ಚಿಂತೆ ಮಾಡುವ ಆಗತ್ಯವಿರುವುದಿಲ್ಲ. ಸಹೋದರನ ಜೊತೆಗೆ ಕಲಹ ಬರುವ ಸೂಚನೆ ಇರುತ್ತದೆ. ನಾಗ ದೇವರ ಆರಾಧನೆ ಡಿಸೆಂಬರ್ ತಿಂಗಳ ವರೆಗೆ ಅಗತ್ಯವಿದೆ.

ಕಂಪ್ಯೂಟ‌ರ್ ಜಾತಕ ಮಾಡಿಕೊಡಲಾಗುವುದು. ಶುಭ ಕೆಲಸಗಳಿಗೆ ಮುಹೂರ್ತ ನಿಶ್ಚಯಿಸಿ ಕೊಡಲಾಗುವುದು. ಕವಡೆ ಪ್ರಶ್ನೆ,ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top