ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಟ್ಚು ಬೇರಾವನೇ ಯುವಶಕ್ತಿಯನ್ನು ಎ. ಐ. ಸಿ. ಸಿ. ಅಧ್ಯಕ್ಷ ಮಾಡಿದ್ದರೆ ಈ ಒದ್ದಾಟಗಳು,ಪಕ್ಷಾಂತರಗಳೇ ಇರುತ್ತಿರಲಿಲ್ಲ.
ಸೋನಿಯಾ ಗಾಂಧಿಗೆ ಪಕ್ಷದ ಹಿಡಿತವನ್ನು,ಅಂದರ್ ಬಾಹರಗಳನ್ನು ಇನ್ನೂಬ್ಬರಿಗೆ ಬಿಟ್ಟುಕೊಡಲಿಕ್ಕೇ ಇಚ್ಚೆಯಿಲ್ಲ.ಹಾಗಾಗೀ ಜೀ ಮೇಡಮ್ ಹೇಳಬಲ್ಲ ವಯೋವೃದ್ಧರನ್ನೇ ತನ್ನ ಸುತ್ತ ತಿರುಗಾಡಿಸಿಕೊಂಡಿರುವುದು.
ಯುವಕರ ತಂಡಗಳೇ ಸಾರಸಗಾಟವಾಗಿ ಆಚೆ ಹೋಗುವಂತೆ ಮಾಡುವುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿದ್ದು.ಹಿಂದುಳಿದ ಜಾತಿಯವರು ಎಂಬ ಲೇಬಲನ್ನು ಜನರ ಹಣೆಗೆ ಅಂಟಿಸಿದ ಕೂಡಲೇ ಪಕ್ಷಕ್ಕೆ ನಾಲ್ನೂರು ಬರುತ್ತದೆ ಎನ್ನುವ ಲೆಕ್ಕಾಚಾರ ಹಾಕಿದ್ದೇ ಆದಲ್ಲಿ, ಎ. ಐ. ಸಿ. ಸಿ. ಯಲ್ಲಿ ಮಿದುಳಿನ ಕೊರತೆ ಇದೆಯೆಂದೇ ತಿಳಿಯಬೇಕು.
ಮುಂದೆ ಕಾಂಗ್ರೆಸ್ ಪಕ್ಷವು ರಸ್ತೆ ಬದಿಗೆ ನಿಂತು ಬಿಜೆಪಿಗೆ ಗಾರ್ಡ್ ಆಫ್ ಹಾನರ್ ಹೇಳುವುದಕ್ಕಷ್ಚೆ ಸಾಧ್ಯವಾಯಿತೆಂದಾದರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಎ. ಐ. ಸಿ. ಸಿ. ಅಧ್ಯಕ್ಷ ಹುದ್ದೆ ಸ್ವೀಕಾರ ಮಾಡಿರುವುದೂ ಪ್ರಮುಖ ಕಾರಣವಾಗುತ್ತದೆ.
ಅಧಿಕಾರದಲ್ಲಿದ್ದಾಗಲಾದರೂ ಮಂತ್ರಿ ಹುದ್ದೆ ಪಡೆದು ಕೆಲಸ ಮಾಡದೆ ಸೊಂಬೇರಿ ತರಹ ತಿರುಗಾಡಿದ ರಾಹುಲ್ ಗಾಂಧಿಯವರು ಹೆಚ್ಚು ಓದಿದವರು,ಚರ್ಚಾ ಕೂಟದಲ್ಲೆಲ್ಲ
ಭಾಗವಹಿಸುತ್ತಿರುವವರು,ಎಲ್ಲವೂ ಹೌದೇ ಆದರೂ ಅವರಲ್ಲಿ ಸ್ವಯಂ ಬಲವಿಲ್ಲ,ನಿರ್ಧಾರಗಳಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಮೋದಿಯಂಥ ಸಕಲ ಕಲಾ ವಲ್ಲಭ ರಾಜಕಾರಣಿಯನ್ನು ಟೀಕಿಸುವುದಕ್ಕೂ ಒಂದು ಸರಿಯಾದ ತಯಾರಿ ಮಾಡಿಕೊಂಡಿಲ್ಲ ಕಾಂಗ್ರೆಸ್ ಪಕ್ಷ.ತುಂಬಾ ಸಲ ರಾಹುಲ ಗಾಂಧಿಯವರು ಮಾತಿನಲ್ಲಿ ಎಡವಿದ್ದು,ನ್ಯಾಯಾಲಯಕ್ಕೆ ದೂರು ಪ್ರವೇಶವಾದುದು ಇದೆ.
ಕಾಂಗ್ರೆಸ್ ಪಕ್ಷವು ವೈಚಾರಿಕವಾಗಿ ಎಷ್ಟು ಕಳೆಗುಂದಿದ ಅನ್ನುವುದಕ್ಕೆ ಅವರು ತಯಾರಿಸಿದ INDIAಹೆಸರಿನ ಹೊಸ ಕೂಟ. ಸೇರಿಕೊಂಡವರು ಅದರಲ್ಲಿ ಉಳಿದುಕೊಂಡಿಲ್ಲ ಯಾಕೆ ಎಂದು ಆಳವಾಗಿ ಚಿಂತಿಸಿದರೆ ಅವರೆಲ್ಲರಿಗೂ ಕಾಂಗ್ರೆಸ್ ಪಕ್ಷವು ಮುಳ್ಳು ಹಂದಿ ತರಹನೇ ಕಾಣುತ್ತದೆ.ಚುನಾವಣೆಗೆ ಮುನ್ನವೇ ಮುಳ್ಳು ಚುಚ್ಚಿಸಿಕೊಂಡಂತಾಗುತ್ತಿದೆ.ಪ್ರಧಾನಿ ಹುದ್ದೆಯಾಕಾಂಕ್ಷಿಗಳೇ ಒಕ್ಕೂಟ ರಚಿಸಿದರೆ ಅದು ಎಷ್ಟು ಬಿಗಿಯಾಗಿರಬಹುದು? ಕನಸಿನಲಿ ನಿತ್ಯವೂ ಪ್ರಧಾನಿಗಯಾಗುತ್ತಿರುವ ಅವರೆಲ್ಲ ಹಗಲಲ್ಲಿ ನಿಜ ಕಚ್ಚಾಡುತ್ತಿರುತ್ತಾರೆ.
ಮೋದಿಯನ್ನು ಮತ್ತೆ ಮುಂದುವರಿಸುವುದು ಹಿಂದುತ್ವ ಅಥವಾ ಸಮರ್ಥ ಪ್ರಧಾನಿ ಎನ್ನುವ ಎರಡು ವಿಚಾರಗಳೂ ಅಲ್ಲ .ಬದಲಾಗಿ, ವಿಪಕ್ಷದಲ್ಲಿ ಒಗ್ಗಟ್ಟಿಲ್ಲ,ಯಾರು ಯಾರನ್ನೂ ಆರಿಸುವುದಕ್ಕೆ ಇಷ್ಟಪಡುವುದಿಲ್ಲ. ಮುಂದಿನ ಪ್ರಧಾನಿ ಮೋದಿ ಬೇಡ ಎನ್ನುವುದಕ್ಕೂ ವಿಪಕ್ಷೀಯರಲ್ಲಿ ಮಾತು ಘನವಾದ ಹೊರಡದೆ ಮುಂದಿನ ಪ್ರಧಾನಿ ನಾನು ನಾನಾಗಬೇಕು ಎನ್ನುವುದೇ ಬಲವಾಗಿರುವುದರಿಂದ ಮತದಾರ ಯಾವುದೇ ಬಯಕೆಯಲ್ಲಾದರೂ ಮೋದಿಯನ್ನು ಬೆಂಬಲಿಸಲು ಬಯಸುತ್ತಾನೆ.
ಮೋದಿಯವರಿಗೆ ತನ್ನ ಆಡಳಿತ ಸಂಪೂರ್ಣ ವಿಫಲಗೊಂಡಿದೆ ,ದೇಶದ ಆರ್ಥಿಕ ಪರಿಸ್ಥಿತಿಯನ್ನು ಹದಕ್ಕೆ ತಂದಿಡುವಲ್ಲಿಯೂ ತಾನು ಸೋತಿದ್ದೇನೆ,ದೇಶದ ಜನ ತನ್ನನ್ನು ವಿರೋಧಿಸುವುದರಲ್ಲಿ ಅರ್ಥವಿದೆ ಎನ್ನುವುದು ಮೋದಿಗೆ ಅರ್ಥವಾಗಿದೆ ಮತ್ತು ಬಿ ಜೆ ಪಿ ಪಕ್ಷ ಮೌಖಿಕವಾಗಿ ಒಪ್ಪಿಕೊಂಡಿದೆ.
ಬೆ ಜೆ ಪಿ ಗೆ ಮೋದಿ ಬಲವೊಂದೇ ಮತ ಬಾಚುವ ಸಾಧನವಾಗಿದ್ದರೆ,ಮೋದಿಯವರಿಗೆ ಧರ್ಮ ಪ್ರಚಾರ ಮಾತ್ರವಷ್ಟೆ ಕೈಯಲ್ಲುಳಿದುಕೊಂಡ ಅಸ್ತ್ರವಾಗಿದೆ.ಮಾಡಿದ್ದ ಅಭಿವೃದ್ಧಿಯನ್ನೂ ಬಹಿರಂಗವಾಗಿ ಹೇಳುವುದಕ್ಕೂ ಧರ್ಮ ಲೇಪನ ಬಿಡುತ್ತಿಲ್ಲವಾಗಿದೆ.
-ವಿ. ಕೆ. ವಾಲ್ಪಾಡಿ







































